Saturday, April 25, 2015

ಎಸ್.ವಿ.ಪರಮೇಶ್ವರ ಭಟ್ ಬರೆದ ಹಾಸ್ಯ ಚಟಾಕಿ -

 

ಎಸ್.ವಿ.ಪರಮೇಶ್ವರ ಭಟ್ ಬರೆದ ಹಾಸ್ಯ ಚಟಾಕಿ -


 ಎಸ್.ವಿ.ಪಿ  ಅವರ ಹಾಸ್ಯ ಚಟಾಕಿಗಳು ಅಶ್ಲೀಲತೆಯ ಸೋಂಕು ತಗುಲದ ಹಾಗೆ ನಿವೇದಿಸಿ ಕೊನೆಯಲ್ಲಿ ಅರ್ಥಪೂರ್ಣತೆಯ ಸಾಫಲ್ಯತೆ ಪಡೆಯುತ್ತವೆ. ಓದುಗರನ್ನು ಕೇವಲ ನಗೆಗಡಲಲ್ಲಿ ತೇಲುವಂತೆ ಮಾಡದೆ, ಸೂಕ್ಷ್ಮವಾಗಿ ಯೋಚಿಸುವಂತೆ, ಕೆಲವೊಮ್ಮೆ ವ್ಯಂಗ್ಯದಿಂದ ತಿವಿಯುವಂತೆ ಮಾಡುತ್ತವೆ. ಅವರ ಹಾಸ್ಯ ಬರಹಗಳನ್ನು ಓದುವಾಗ ಅದು ಅನುಭವಕ್ಕೆ ಬರುತ್ತದೆ.

ಯುವತಿಯೋರ್ವಳು ಈಜುಕೊಳದೊಳಕ್ಕೆ ಇಳಿಯಲು ಹೊರಟಾಗ, ಈಜುಕೊಳದ ಪಾಲಕ ಆಕೆಯನ್ನು ತಡೆದು;ಈಜಲು ಅನುಮತಿಯಿಲ್ಲ ಎನ್ನುತ್ತಾನೆ,ಯುವತಿ: ಮೊದಲೇ ಹೇಳಲಿಲ್ಲ ಏಕೆ ಮಂಕೆ?ಪಾಲಕ: ಬಟ್ಟೆ ಕಳಚಲು ನಿಷೇಧವಿಲ್ಲವಷ್ಟೆ..!


ಇದು ಒಬ್ಬೊಬ್ಬರಿಗೆ,ತುಂಟ ನಗೆಯನ್ನೂ ತರಿಸಬಹುದು, ಅಥವಾ ಆಕೆಯ ಪೇಚಿನ ಸ್ಥಿತಿಗೆ ಕನಿಕರವನ್ನೂ ವ್ಯಕ್ತಪಡಿಸುವಂತೆ ಮಾಡಬಹುದು.. :-)

....................

No comments:

Post a Comment