Saturday, January 30, 2016

Travel spot: KALHATTI Falls, Chikkamagaluru, Karnataka. ಕಲ್ಹತ್ತಿ ಜಲಪಾತ, ಚಿಕ್ಕಮಗಳೂರು.


Travel Spot: KALHATTI Falls, Chikkamagaluru, Karnataka.
ಕಲ್ಹತ್ತಿ ಜಲಪಾತ, ಚಿಕ್ಕಮಗಳೂರು. 
ಪ್ರಕಟ -ವಿಜಯ ಕರ್ನಾಟಕ.
link: http://vijaykaranata.indiatimes.com/articleshow/23170563.cms
28 September 2013, Lavlavike Pg.08


Wallpaper From Heart to Wall. ‘ಬಿತ್ತಿ’ ಪತ್ರಿಕೆಗಳು- ವಿದ್ಯಾರ್ಥಿಗಳ ಅಭಿವ್ಯಕ್ತಿಗೊಂದು ಸೃಜನಶೀಲ ಮಾಧ್ಯಮ.

‘ಬಿತ್ತಿ’ ಪತ್ರಿಕೆಗಳು- ವಿದ್ಯಾರ್ಥಿಗಳ ಅಭಿವ್ಯಕ್ತಿಗೊಂದು ಸೃಜನಶೀಲ ಮಾಧ್ಯಮ:


ಇಲ್ಲಿ ವಿದ್ಯಾರ್ಥಿಗಳೇ ಸಂಪಾದಕರು, ವರದಿಗಾರರು, ಬರಹಗಾರರು, ಅಂಕಣಕಾರರು.. ಇದು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ನಡೆಸುವ ‘ಬಿತ್ತಿ’ ಪತ್ರಿಕೆ. ಇಂದಿನ ಆಧುನಿಕ ಕಾಲದ ಮಾಧ್ಯಮಗಳಿಂಗಿತ ಬಹು ಪ್ರಾಚೀನ ಮತ್ತು ಮುದ್ರಣ ಮಾಧ್ಯಮಕ್ಕೂ ಮೂಲ ಧಾತು. ಕಾಗದಗಳ ಆವಿಷ್ಕಾರದ ಕಾಲದಿಂದಲೇ ‘ಬಿತ್ತಿ’ ಪತ್ರಿಕೆಗಳ ಉಗಮವನ್ನು ಗುರುತಿಸಬಹುದು.


ಕನ್ನಡದ, ದೇಶz,À ಅಷ್ಟೇ ಏಕೆ ಜಾಗತಿಕ ಮಟ್ಟದಲ್ಲಿಯೂ ಅನೇಕ ಉತ್ತಮ ಬರಹಗಾರರು, ಸಾಹಿತಿಗಳು ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದು ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ. ಅವರಲ್ಲಿ ಬರವಣಿಗೆಯ ಆಸಕ್ತಿ ಮತ್ತು ಆ ಬಗೆಯ ಸೃಜನಶೀಲತೆಗೆ ಪ್ರೇರೇಪಿಸಿದ್ದು ವಿದ್ಯಾರ್ಥಿ ಜೀವನದ ದೆಸೆಯಲ್ಲಿ ಅವರು ರೂಪಿಸುತ್ತಿದ್ದ ಗೋಡೆ ಪತ್ರಿಕೆಗಳಿಂದ. ಅನೇಕರಿಗೆ ಅವರ ಮಹೋನ್ನತ ಚಿಂತನೆಗಳಿಗೆ ಸ್ಫೂರ್ತಿ ನೀಡಿದ್ದು ಗೋಡೆ ಪತ್ರಿಕೆಗಳು. ಅದಕ್ಕೆ ಒಂದು ಉತ್ತಮ ಉದಾಹರಣೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಲೇಖಕರಾದ ಪ್ರೊ. ಯು.ಆರ್. ಅನಂತಮೂರ್ತಿ. ಅವರು ತಮ್ಮ ಬಾಲ್ಯ ಕಾಲದಲ್ಲಿ, ತಾವು ವಾಸಿಸುತ್ತಿದ್ದ ಅಗ್ರಹಾರದಲ್ಲಿಯೇ ಕನ್ನಡ-ಇಂಗ್ಲೀಷ್ ದ್ವಿಭಾಷೆಯ ಗೋಡೆ ಪತ್ರಿಕೆಗಳನ್ನು ಹೊರತುತ್ತಿದ್ದರು. ಅದೇ ಅವರನ್ನು ಮುಂದೆ ಉತ್ತಮ ಬರಹಗಾರರನ್ನಾಗಿ, ಚಿಂತಕರನ್ನಾಗಿ ರೂಪಿಸಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಅದು ಕೇವಲ ಅವರೊಬ್ಬರ ಅನುಭವವಲ್ಲ, ಅನೇಕ ಸೃಜನಶೀಲ ಬರಹಗಾರರ ಅನುಭವವೂ ಹೌದು.
ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಸಂಗತಿಗಳಲ್ಲಿ ಕ್ಯಾಂಪಸ್ ಸುತ್ತುವುದು, ಅಥವಾ ಅನೇಕ ಕಾರಣಗಳಿಗಾಗಿ, ಕೆಲವೊಮ್ಮೆ ವಿನಾಕಾರಣ ರೌಂಡ್ಸ್ ಹೊಡೆಯುವುದೂ ಒಂದು. ಈ ರೌಂಡಪ್ ಅನೇಕರ ರೆಗ್ಯುಲರ್ ರೂಟಿನ್. ಹಲವರಿಗೆ ಅಲಿಖಿತ ನಿಯಮ. ಈ ರೌಂಡಪ್ ನಲ್ಲಿ ಕೇವಲ ಬಣ್ಣ ಬಣ್ಣದ ಚಿತ್ತಾರಗಳು ಮಾತ್ರ ಕಾಣಿಸುವುದಿಲ್ಲ. ತಮ್ಮ ಕಣ್ಣನ್ನು ಸುತ್ತಮುತ್ತಲ ಗೋಡೆಗಳತ್ತ ಹಾಯಿಸಿದರೆ ವರ್ಣರಂಜಿತ ಭಿತ್ತಿಯ ನಡುವೆ ಅದೆಷ್ಟೋ ಸಂಗತಿಗಳು ಅಡಗಿರುತ್ತವೆ. ಅದುವೇ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ರೂಪುಗೊಂಡ ಸೃಜನಶೀಲ ಗೋಡೆ ಪತ್ರಿಕೆಗಳು.
ನೀವು ಯಾವುದೇ ವಿಭಾಗದವರಾಗಿದ್ದರೂ ವಿಭಾಗದ ಹಂಗಿಲ್ಲದೆ ಜ್ಞಾನಾರ್ಜನೆಯ ಕಾಳಜಿಯುಳ್ಳವರಾಗಿದ್ದರೆ, ನಿಮ್ಮ ತಲೆಗೆ ತುಂಬಿಸಿಕೊಳ್ಳಲು ಅನೇಕ ಸಂಗತಿಗಳು ಕಾದು ಕುಳಿತಿರುತ್ತವೆ. ಅವನ್ನು ಬಾಚಿಕೊಳ್ಳಲು ಬಿತ್ತಿ ಪತ್ರಿಕೆಗಳು ನಿಜಕ್ಕೂ ನೆರವಾಗುತ್ತವೆ. ಅದರಲ್ಲಿಯೂ ನಿಮಗೆ ಬೇಕಾದ್ದನ್ನು ಆಯ್ದುಕೊಳ್ಳುವುದು ಜಾಣತನ.
ಕಾಲೇಜು ಬದುಕಿನಲ್ಲಿ ನಿಮ್ಮ ಆವರಣದ ಗೋಡೆ ಪತ್ರಿಕೆಗಳ ಮೇಲೆ ಕಣ್ಣಾಯಿಸುತ್ತಾ, ಮುಖ್ಯವೆನಿಸಿದ್ದನ್ನು, ಕುತೂಹಲಕಾರಿ ಎನ್ನಿಸಿದ್ದನ್ನು ಟಿಪ್ಪಣಿ ಮಾಡಿಟ್ಟುಕೊಂಡಿದ್ದರೆ, ನಿಮ್ಮ ಸುತ್ತಮುತ್ತಲ ಅನೇಕ ಸಂಗತಿಗಳಿಗೆ ನೀವು ‘ಗೂಗಲ್’ನ ಮೊರೆ ಹೋಗಬೇಕಾದ ಅವಶ್ಯಕತೆಯಿರುವುದಿಲ್ಲ. ಯಾಕೆಂದರೆ ಗೋಡೆ ಪತ್ರಿಕೆಗಳಿಂದ ರೂಪುಗೊಂಡ ಕೈಪಿಡಿಯೊಂದು ನಿಮ್ಮ ಕೈಯಲ್ಲಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮೊಳಗೊಬ್ಬ ಓದುಗ ರೂಪುಗೊಂಡಿರುತ್ತಾನೆ. ಜೊತೆಗೆ ಯಾವುದು ಮುಖ್ಯ ಯಾವುದು ಅಮುಖ್ಯ ಎಂಬುದನ್ನು ನಿರ್ಧರಿಸುವ ಶಕ್ತಿಯೂ ಒದಗುತ್ತದೆ. ಅಲ್ಲಿಂದ ಪಡೆದ ಅನುಭವದ ಫಲವಾಗಿ ಅದು ನಿಮ್ಮನ್ನು ತಿಳಿದೋ ತಿಳಿಯದೆಯೋ ಮುನ್ನಡೆಸುವ ಕಾರ್ಯವನ್ನೂ ಮಾಡುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಎದುರಿಸುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮಗದು ಸಹಕಾರಿಯೂ ಆಗುತ್ತದೆ.
ಶಾಲಾ ಕಾಲೇಜುಗಳಲ್ಲಿ ಗೋಡೆ/ಬಿತ್ತಿ ಪತ್ರಿಕೆಗಳ ಪಾತ್ರ ಬಹಳ ಪ್ರಮುಖವಾದದ್ದು. ಅದು ಒಂದೆಡೆ ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿಯ ಉತ್ತಮ ಮಾಧ್ಯಮವಾಗವುದರ ಜೊತೆಗೆ ವಿದ್ಯಾರ್ಥಿ ದೆಸೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಬರವಣಿಗೆಗೆ ಎಲ್ಲರನ್ನೂ, ಎಲ್ಲವನ್ನೂ ಸೆಳೆಯುವ ಶಕ್ತಿಯಿದೆ ಎಂಬುದು ತಿಳಿಯದಿರುವ ಸಂಗತಿಯಲ್ಲ.
ಕೆಲವು ಸದಸ್ಯರು ಗುಂಪಿನಲ್ಲಿ ಒಟ್ಟಾಗಿ, ಒಂದು ತಂಡವಾಗಿ ಕಾರ್ಯನಿರ್ವಹಿಸುವುದರಿಂದ ಈ ಬಿತ್ತಿ ಪತ್ರಿಕೆಗಳಿಗೆ ಅನನ್ಯತೆಯ ಮೆರುಗಿನ ಜೊತೆಗೆ ಅಂದವೂ ಒದಗುತ್ತದೆ. ಆ ತಂಡಕ್ಕೊಂದು ತಂಡವಾಗಿ ಕಾರ್ಯನಿರ್ವಹಿಸುವ ಕಲೆ-ಸಾಮಥ್ರ್ಯ ಪ್ರಾಪ್ತವಾಗುತ್ತದೆ. ಇದು ವ್ಯಕ್ತಿತ್ವ ವಿಕಸನಕ್ಕೊಂದು ಉತ್ತಮ ದಾರಿಯಾಗಬಲ್ಲದು. ಅದು ಮುಂದಿನ ಪೀಳಿಗೆಗೆ ಅನೇಕ ನವ ಬರಹಗಾರರನ್ನು, ಸಮಾನ ಮನಸ್ಕ ಚಿಂತಕರನ್ನು ರೂಪಿಸುತ್ತದೆ.
ಗೋಡೆಪತ್ರಿಕೆಗಳನ್ನು ರೂಪುಗೊಳಿಸುವುದು ಒಂದು ಕಲೆ. ನಿರ್ದಿಷ್ಟ ಚೌಕಟ್ಟಿನೊಳಗೆ ಆಯ್ದುಕೊಂಡ ವಸ್ತು ಸಂಗತಿಗಳನ್ನು, ಭಿತ್ತಿ/ಬಿತ್ತಿ ಪತ್ರಿಕೆಗಳ ಉದ್ದೇಶಕ್ಕೆ ತಕ್ಕಂತೆ ಮಾರ್ಪಡಿಸುವುದು ವಿದ್ಯಾರ್ಥಿಗಳ ಪ್ರತಿಭಾಶಕ್ತಿಯ ಅನಾವರಣಕ್ಕೊಂದು ದಾರಿ. ಹಾಗೆಂದು ತೋಚಿದ್ದನ್ನು ಗೀಚುವುದೇ ಇದರ ಕೆಲಸವಾಗಬಾರದು. ನಾಲ್ಕಾರು ಜನ ಇದನ್ನು ಓದುತ್ತಾರೆ, ನೋಡುತ್ತಾರೆ ಎಂಬುದನ್ನು ಅರಿತು ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಅದನ್ನು ರೂಪುಗೊಳಿಸಬೇಕು. ಯಾಕೆಂದರೆ ಇವು ಕೇವಲ ನಿರ್ದಿಷ್ಟ ತಂಡಗಳ ಮುಖವಾಣಿ ಅಲ್ಲ. ಇದು ವಿಭಾಗವೊಂದರ/ಕಾಲೇಜೊಂದರÀ ಪ್ರತಿಬಿಂಬ. ವಿಭಾಗ(ಕಾಲೇಜು)ವೊಂದು ಹೇಗೆ ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಇದರಿಂದ ಅರಿಯಲು ಸಾಧ್ಯ. ಇವುಗಳ ಬೆಳವಣಿಗೆಗಳಲ್ಲಿ ವಿಭಾಗದ, ಶಿಕ್ಷಣ ಸಂಸ್ಥೆಗಳ ಸಕ್ರಿಯ ಪ್ರೋತ್ಸಾಹಕ ಪಾತ್ರವೂ ಅತ್ಯಗತ್ಯ. ಹಾಗಾಗಿ ಈ ಬಿತ್ತಿ/ಭಿತ್ತಿ ಪತ್ರಿಕೆಗಳು ಕೇವಲ ನಿಮ್ಮ ಸ್ವತ್ತಲ್ಲ, ಬದಲಾಗಿ ಇಡೀ ವಿಭಾಗ-ಸಂಸ್ಥೆಯ ಪ್ರತಿನಿಧಿ ಎಂಬುದನ್ನು ಎಂದಿಗೂ ಮರೆಯದಿರಿ.
ಬಿತ್ತಿ ಪತ್ರಿಕೆಗಳಿಗೆ ಇತರ ಪತ್ರಿಕಾ ಮಾಧ್ಯಮಗಳಂತೆ ಹೆಚ್ಚು ದುಡ್ಡಿನ ಅಗತ್ಯವಿಲ್ಲ. ನಿಜ ಹೇಳಬೇಕೆಂದರೆ ಖರ್ಚೆ ಇಲ್ಲವೆಂದರೂ ತಪ್ಪಿಲ್ಲ. ಆದರೂ ಕೆಲವೊಮ್ಮೆ ಪತ್ರಿಕೆಯ ಶೃಂಗಾರಕ್ಕೆ ಅಂದರೆ ಗ್ಲಿಟರಿಂಗ್ ಪೆನ್, ಸ್ಕೆಚ್ ಪೆನ್, ಗಮ್, ಮೊದಲಾದ ಸಣ್ಣಪುಟ್ಟ ಸಾಮಾಗ್ರಿಗಳು ಅಗತ್ಯವಾದಾಗ ಖಂಡಿತ ದುಡ್ಡು ಬೇಕೇ ಬೇಕು. ಅದನ್ನು ವಿಭಾಗವೋ, ಸಂಸ್ಥೆಯೋ ಭರಿಸಿದರೆ ಉತ್ತಮ. ಹಾಗಿಲ್ಲದಿದ್ದಲ್ಲಿ ತಂಡದವರೇ ನಿಮ್ಮ ದಿನನಿತ್ಯದ ಖರ್ಚಿನ/(ಪಾಕೆಟ್ ಮನಿಯ) ಹಣದ ಒಂದಂಶವನ್ನು ಇದಕ್ಕೆ ಮೀಸಲಿಟ್ಟರೂ ಸಾಕು. ಜೊತೆಗೆ ಕಡಿಮೆ ವೆಚ್ಚದಲ್ಲಿ ಬಿತ್ತಿ ಪತ್ರಿಕೆಯನ್ನು ಮುನ್ನಡೆಸುವ ಟ್ಯಾಲೆಂಟ್ ಇರಬೇಕು. ಬಿಳಿ ಅಥವಾ ಬಣ್ಣದ ದೊಡ್ಡ ಡ್ರಾಯಿಂಗ್ ಶೀಟ್‍ನಲ್ಲಿ ನಿರ್ದಿಷ್ಟ ಆಶಯವುಳ್ಳ ಬಿತ್ತಿ ಪತ್ರಿಕೆಯನ್ನು ನಿರ್ಮಿಸಬಹುದು. ಸುಂದರವಾಗಿ ಮುತ್ತು ಪೋಣಿಸಿದಂತಿರುವ ಕೈಬರವಣಿಗೆಯೇ ಇದಕ್ಕೆ ಮೂಲಾಧಾರ. (‘ಮೂಗಿಗಿಂತ ಮೂಗುತ್ತಿ ಭಾg’À ಎಂಬಂತೆ ಮೂಲ ವಸ್ತುವಿಗಿಂತ ಹೆಚ್ಚಾಗಿರುವ ಬಾಹ್ಯ ಅಲಂಕಾರ ಬಿತ್ತಿ ಪತ್ರಿಕೆಗೆ ಶೋಭೆ ತರಿಸುವುದಿಲ್ಲ. ಹಾಗಾಗಿ ಅದು ಸಾಧ್ಯವಾದಷ್ಟು ಸಿಂಪಲ್ ಮತ್ತು ಆಕರ್ಷಕವಾಗಿರಲಿ.)
ವಿಷಯಾಧಾರಿತ ಮಾಹಿತಿಪೂರ್ಣ ಬರಹಗಳು, ಪ್ರವಾಸ ಕಥನ, ಕವನಗಳು, ಲಘು ಬರಹಗಳು, ನಗೆ ಬುಗ್ಗೆಗಳು, ಕಾರ್ಟೂನ್‍ಗಳು, ರಸಪ್ರಶ್ನೆ ಮಾದರಿಯ ಮಾಹಿತಿ ಕೋಶ, ನುಡಿಮುತ್ತುಗಳು, ಸಾಧಕರ, ಹೊಸ ಅನ್ವೇಷಣೆಗಳ ಪರಿಚಯ ಇತ್ಯಾದಿ.......... ಹೀಗೆ ಅವುಗಳಲ್ಲಿ ಅಡಕವಾಗಿರಬಹುದಾದ ಸಂಗತಿಗಳು ಮುಂದುವರೆಯುತ್ತವೆ. ನಿರ್ದಿಷ್ಟ ಚೌಕಟ್ಟಿದ್ದರೂ, ಅನೇಕ ಚೌಕಟ್ಟಿಲ್ಲದ ಚಿತ್ರಗಳನ್ನು ಪೋಣಿಸಲು ಸಾಧ್ಯವಿದೆ. ಇಲ್ಲಿಂದ ಪ್ರಾರಂಭವಾಗುವ ವಿದ್ಯಾರ್ಥಿಗಳ ತೊದಲು ಹೆಜ್ಜೆಯ ಮೊದಲ ಬರವಣಿಗೆ, ಮುಂದೆ ಅವರನ್ನ ಅವರದ್ದೇ ಕ್ಷೇತ್ರದ ಉತ್ತಮ ಬರಹಗಾರರನ್ನಾಗಿ ರೂಪಿಸಬಹುದು.
ಕೈಬರಹದಿಂದ ಪ್ರಾರಂಭವಾದ ಗೋಡೆ ಪತ್ರಿಕೆಗಳು ಇಂದು ಉನ್ನತ ತಂತ್ರಜ್ಞಾನದÀ ಆವಿಷ್ಕಾರದ ಫಲವಾಗಿ ಮುದ್ರಣ ರೂಪದಲ್ಲೂ ಹೊರಬರುತ್ತಿವೆ. ಅನೇಕ ವಿಶ್ವವಿದ್ಯಾನಿಲಯ, ಶಾಲಾ ಕಾಲೇಜುಗಳಲ್ಲಿ ಎಲ್ಲಾ ಬಿಡಿ ಪ್ರತಿಗಳನ್ನು ಒಟ್ಟಾಗಿ ಅಡಕಗೊಳಿಸಿ ಪುಸ್ತಕರೂಪದಲ್ಲೂ ಹೊರತರುವ ಪರಿಪಾಠವಿದೆ. ಜೊತೆಗೆ ಬೃಹತ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ವಿಭಾಗಗಳಿಂದಲೂ ಬಿತ್ತಿ/ಭಿತ್ತಿ ಪತ್ರಿಕೆಗಳು ಹೊರಬರುವುದರಿಂದ ಅವುಗಳ ಮಧ್ಯೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ವಿಭಾಗಕ್ಕೆ ಪ್ರಶಸ್ತಿ ನೀಡಿ ಗೌರವಿಸುವ, ಪ್ರೋತ್ಸಾಹಿಸುವುದೂ ಚಾಲ್ತಿಯಲ್ಲಿದೆ. ಇದೊಂದು ಉತ್ತಮ ಕಾರ್ಯ. ಇದರಿಂದ ಗೋಡೆ ಪತ್ರಿಕೆಗಳ ಬಗ್ಗೆ ಆಸಕ್ತಿ ಮತ್ತು ಕಾಳಜಿ ಎರಡೂ ಹೆಚ್ಚುತ್ತವೆ.
ಇಂತಹ ಗೋಡೆ ಪತ್ರಿಕೆಗಳು ಕೇವಲ ‘ಕನ್ನಡ/ಇಂಗ್ಲೀಷ್ ಭಾಷಾ ಅಥವಾ ಕನ್ನಡ/ಇಂಗ್ಲೀಷ್ ಸಾಹಿತ್ಯ’ ವಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಗೋಡೆ ಪತ್ರಿಕೆಗಳೆಂದರೆ ಕೇವಲ ಸಾಹಿತ್ಯ ಮಾತ್ರವಲ್ಲ ಅವುಗಳಲ್ಲಿ ಇನ್ನೂ ಅನೇಕ ಸಂಗತಿಗಳನ್ನು ಹೇಳಲು ಸಾಧ್ಯವಿದೆ. ಆ ಸಾಧ್ಯತೆಯಿಂದಲೇ ಅನೇಕ ಕಾಲೇಜುಗಳ ಹೆಚ್ಚಿನ ಎಲ್ಲಾ ವಿಭಾಗಗಳೂ ತಮ್ಮ ಆಶಯ-ಧೋರಣೆಗೆ ತಕ್ಕಂತೆ ತಮ್ಮ ಇತಿ-ಮಿತಿಯಲ್ಲಿಯೇ ಚೊಕ್ಕದಾದ ಗೋಡೆ ಪತ್ರಿಕೆಗಳನ್ನು ತರುತ್ತವೆ. ತರಲು ಸಾಧ್ಯ. ಅದಕ್ಕೆ ಬೇಕಿರುವುದು ವಿದ್ಯಾರ್ಥಿಗಳ ಉತ್ಸಾಹ, ಆಸ್ಥೆ ಮತ್ತು ಶಾಲಾ ಕಾಲೇಜು ಮುಖ್ಯಸ್ಥರ-ಶಿಕ್ಷಕರ ನಿರಂತರ ಮಾರ್ಗದರ್ಶನ, ಪ್ರೋತ್ಸಾಹ.
---
*‘ತರಗತಿಯ ಒಳಗೊಂದು ಕಪ್ಪು ಹಲಗೆ,
ಹೊರಗೊಂದು ‘ಬಿತ್ತಿ’ಗಲಗೆ’ ಹಾಗಿದ್ದಾಗ ಮಾತ್ರ ವಿದ್ಯಾರ್ಥಿಗಳ ಸೃಷ್ಟಿಶೀಲ ಅಭಿವ್ಯಕ್ತಿಗೆ ಪೂರಕವಾದ ವಿಭಾಗ/ಕಾಲೇಜು ಪರಿಪೂರ್ಣವಾಗಿ ರೂಪುಗೊಳ್ಳಲು ಸಾಧ್ಯ.
__________

ಶ್ರೇಯಾಂಕ ಎಸ್ ರಾನಡೆ.


BHAG MILKA BHAG: 'Mistake'n Relook. ‘ಭಾಗ್ ಮಿಲ್ಕಾ ಭಾಗ್’- ಮಿಲ್ಕಾ ಸಿಂಗ್ ಮುರಿಯದ ದಾಖಲೆಗೆ, ಸುಳ್ಳು ದಾಖಲೆ ಬರೆದ ಚಿತ್ರ.

‘ಭಾಗ್ ಮಿಲ್ಕಾ ಭಾಗ್’- ಮಿಲ್ಕಾ ಸಿಂಗ್ ಮುರಿಯದ ದಾಖಲೆಗೆ,  ಸುಳ್ಳು ದಾಖಲೆ ಬರೆದ ಚಿತ್ರ. 
(ಈ ಚಿತ್ರದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಬಹುದೊಡ್ಡ ಪ್ರಮಾದ ಒಂದಿದೆ. ಅದು ವಿಶ್ವದಾಖಲೆಯ ಬಗ್ಗೆಯೇ ಪ್ರೇಕ್ಷಕರಿಗೆ ತಪ್ಪು ಮಾಹಿತಿಯನ್ನು ನೀಡುವಂತದ್ದು ಮತ್ತು ಮಿಲ್ಕಾನ ಬದುಕಿನ ನಿಜವಾದ ವಿವರಗಳನ್ನು ತಿರುಚುವಂತದ್ದು. ಹಾಗಂತ ಇದು ಬೆಟ್ಟ ಕೊರೆದು ಇಲಿ ಹುಡುಕುವ ಪ್ರಯತ್ನವಲ್ಲ. ರಸದಲ್ಲಿರುವ ಕಸ ಹೆಕ್ಕುವ ಪ್ರಯತ್ನ.)
2013ರ ಅತ್ಯಂತ ಯಶಸ್ವಿ ಚಿತ್ರ ‘ಭಾಗ್ ಮಿಲ್ಕಾ ಭಾಗ್’, ಇದು ಭಾರತೀಯ ಕ್ರೀಡಾ ಕ್ಷೇತ್ರದ ಇತಿಹಾಸದಲ್ಲಿಯೇ ಅತ್ಯಂತ ಹೆಮ್ಮೆಯ ಅಥ್ಲೀಟ್ ಎನ್ನಿಸಿಕೊಂಡಿರುವ ಮಿಲ್ಕಾ ಸಿಂಗ್‍ನ ಕುರಿತಾದ ಹೃದಯಸ್ಪರ್ಶಿ ಚಿತ್ರ. ಚಿತ್ರದ ಪ್ರಾರಂಭದಿಂದಲೂ ಅನೇಕ ಕಾರಣಗಳಿಂದ ಇದು ಸಕಾರಾತ್ಮಕ ಸುದ್ದಿಯಲ್ಲಿತ್ತು. ಆ ಕಾರಣದಿಂದಲೇ ಸಹಜ ಕುತೂಹಲವನ್ನೂ ಸೃಷ್ಟಿಸಿತ್ತು. ಪರಿಣಾಮ ಸಹಜವಾಗಿಯೇ ಚಿತ್ರ ಗೆದ್ದಿದೆ. ಬಾಕ್ಸ್ ಆಫಿಸ್‍ನಲ್ಲಿ ಚಿತ್ರದ ಓಟವನ್ನು ಕಂಡು ಖುದ್ದು ಮಿಲ್ಕಾ ಸಿಂಗ್ ಕೂಡ ದಂಗಾಗಿರಬೇಕು. ಕೇವಲ ಒಂದು ರೂಪಾಯಿ ಗೌರವ ಧನ ಪಡೆದು ತನ್ನ ಬದುಕಿನ ಕಥೆಯನ್ನು ಸಿನಿಮಾ ಮಾಡಲು ಒಪ್ಪಿದ್ದ ಮಿಲ್ಕಾ ಒಂದೆಡೆಯಾದರೆ, ಆ ಭರವಸೆಗೆ ತಣ್ಣೀರೆರೆಚದೆ ನೋಡುಗರ ಎದೆ ರೋಮಾಂಚನಗೊಳ್ಳುವ ಹಾಗೆ ನಿರ್ದೇಶಿಸಿದ ಕೀರ್ತಿ ರಾಕೇಶ್ ಓಂ ಪ್ರಕಾಶ್ ಮೆಹ್ರಾರದ್ದು, ಆ ಪಾತ್ರಕ್ಕೆ ಜೀವತುಂಬಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆಂಬ ಹೆಮ್ಮೆಗೆ ಫರ್ಹಾನ್ ಅಖ್ತರ್ ಪಾತ್ರರಾಗಿದ್ದಾರೆ. ತನ್ನ ಬದುಕಿಗಾಗಿ ಓಡಿದ ಭಾರತದ ಗೌರವಾನ್ವಿತ ಮಿಲ್ಕಾ ಸಿಂಗ್‍ನ ಅತ್ಯಂತ ಸ್ಫೂರ್ತಿಯುತ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಕೇವಲ ಬಾಲಿವುಡ್ ಮಾತ್ರವಲ್ಲ, ಇಡೀ ದೇಶದಾದ್ಯಂತ ಉತ್ತಮ ಸದಭಿರುಚಿಯ ಚಿತ್ರ ಎಂಬ ಮನ್ನಣೆಯನ್ನು ಪಡೆದುಕೊಂಡು ವಿಶ್ವದ ಗಮನವನ್ನೂ ಸೆಳೆಯುವಂತೆ ಮಾಡಿದೆ. ಮಿಲ್ಕಾ ಸಿಂಗ್‍ನ ಕಥೆಯನ್ನು ಭಾವನಾತ್ಮಕವಾಗಿ ಬೆಸೆದುಕೊಟ್ಟಿರುವ ಕಾರಣದಿಂದ ನೋಡಿದವರ ಎದೆಯಲ್ಲಿ ಚಿತ್ರ ಅಚ್ಚಳಿಯದೆ ಉಳಿಯುವಂತೆ ಮಾಡಿದೆ.

ಭಾರತೀಯ ಕ್ರೀಡಾ ಕ್ಷೇತ್ರದ ಸಾಧಕರ ಬಗ್ಗೆ ‘ಪಾನ್ ಸಿಂಗ್ ಥೋಮರ್’ನಂತಹ ಕೆಲವಾರು ಚಿತ್ರಗಳು ಬಾಲಿವುಡ್‍ನಲ್ಲಿ ಬಂದಿವೆ. ಹಾಗೂ ಕ್ರೀಡಾ ಕ್ಷೇತ್ರದ ಕಥಾಹಂದರವನ್ನು ಹೊಂದಿರುವ ಹೃದಯಸ್ಪರ್ಶಿ ತಳಹದಿಯನ್ನು ಹೊಂದಿರುವ ‘ಚಕ್ ದೇ ಇಂಡಿಯಾ’ (ಅಷ್ಟೇನೂ ಯಶಸ್ವಿಯಾಗದ ‘ಗೋಲ್’)ನಂತಹ ಚಿತ್ರಗಳೂ ಬಂದಿವೆ. ಅನೇಕ ವಿಶೇಷ ಸಂಗತಿಗಳಿಂದ ಕೂಡಿದ ‘ಭಾಗ್ ಮಿಲ್ಕಾ ಭಾಗ್’ ಚಿತ್ರ ಕೂಡ ಅದೇ ಸಾಲಿನಲ್ಲಿ ಅಥವಾ ಕಥೆಯು ಅಥ್ಲೀಟ್ ಒಬ್ಬನ ನಿಜ ಜೀವನವನ್ನು ಚಿತ್ರಿಸುವ ಕಾರಣ ಉಳಿದ ಚಿತ್ರಗಳಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇಲ್ಲೊಂದು ಸಮಸ್ಯೆಯಿದೆ. ಈ ಚಲನಚಿತ್ರವನ್ನ ತಯಾರಿಸುವವರು, ಮಿಲ್ಕಾ ಸಿಂಗ್‍ನ ಜೀವನವನ್ನು ವಾಸ್ತವಕ್ಕಿಂತ ಹೆಚ್ಚಾಗಿಯೇ ವೈಭವೀಕರಿಸುವ, ಪಾತ್ರವನ್ನು ಭವ್ಯವಾಗಿ ಉದಾತ್ತೀಕರಿಸುವ ಉದ್ದೇಶದ ಕಾರಣದಿಂದ, ಈ ಚಿತ್ರ ಮಿಲ್ಕಾ ಸಿಂಗ್ ಬಗ್ಗೆ ತಪ್ಪಾದ ಮಾಹಿತಿಯನ್ನು ನೀಡಿದೆ. ಆ ಸಣ್ಣದಾದ ಆದರೆ ಗಂಭೀರವಾದ ತಪ್ಪಿನಿಂದಾಗಿ ಮಿಲ್ಕಾ ಸಿಂಗ್ ಜೀವನದ ವಾಸ್ತವತೆಗೆ ಮಾಡಿದ ಅನ್ಯಾಯವೆಂದೇ ಪರಿಗಣಿಸಬೇಕಾಗುತ್ತದೆ.

ಚಲನಚಿತ್ರವೆಂದ ಮೇಲೆ ಅದಕ್ಕೆ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ವಾಣಿಜ್ಯ ಉದ್ದೇಶದ ಚಲನಚಿತ್ರಗಳು ಕಥೆಯನ್ನು ತಮಗೆ ಬೇಕಾದಂತೆ ಮಾರ್ಪಡಿಸುತ್ತವೆ ಎಂಬುದೂ ನಿಜ. ಆದರೆ ಮಾಡುವ ಅಚಾತುರ್ಯವೊಂದು ಮೂಲ ಕಥೆಗೆ, ಅದರಲ್ಲೂ ನಿಜ ಜೀವನದಲ್ಲಿ ಬದುಕುತ್ತಿರುವ ಅಥ್ಲೀಟ್ ಒಬ್ಬನಿಗೆ ಅವಮಾನಮಾಡಿದಂತಾಗುತ್ತದೆ. ಅಂತಹ ಸೂಕ್ಷ್ಮ ಸಂಗತಿಗಳು ತಿಳಿಯದೇ ಹೋದರೆ ಇಡೀ ಚಲನಚಿತ್ರದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
‘ಭಾಗ್ ಮಿಲ್ಕಾ’ ಚಿತ್ರದ ತಪ್ಪು:

ಈ ಚಿತ್ರದಲ್ಲಿ ಒಂದು ಸಂದರ್ಭ ಬರುತ್ತದೆ, 1956ರ ಒಲಂಪಿಕ್ಸ್‍ನ ವಿಜಯದ ನಂತರ ಮಿಲ್ಕಾ ಪಾತ್ರಧಾರಿ ಫರ್ಹಾನ್ ಅಖ್ತರ್ ರಾಷ್ಟ್ರೀಯ ಕೋಚ್ ಬಳಿ 400 ಮೀ. ಓಟದಲ್ಲಿ ವಿಶ್ವ ದಾಖಲೆ ಎಷ್ಟೆಂದು ಕೇಳುತ್ತಾನೆ. ಅದಕ್ಕಾತ ಸಿನಿಮೀಯ ರೀತಿಯಲ್ಲಿ ಏನನ್ನೂ ಮಾತನಾಡದೆ ಒಂದು ಪುಟ್ಟ ಕಾಗದದ ಚೂರಿನಲ್ಲಿ ‘45.9 ಸೆಕೆಂಡ್‍ಗಳು’ ಎಂದು ಬರೆದು ಮಿಲ್ಕಾನ ಕೈಗಿಡುತ್ತಾನೆ. ಆ ವಿಶ್ವದಾಖಲೆಯ ಗುರಿಯನ್ನು ಮುರಿಯುವುದೇ ಮಿಲ್ಕಾನ ಅತ್ಯುನ್ನತ ಉದ್ದೇಶವಾಗುತ್ತದೆ. ಅದನ್ನವನು ದೇವರ ಕೆಲಸವೆಂಬಂತೆ ಸ್ವೀಕರಿಸಿ, ಮೌನ ಪ್ರತಿಜ್ಞೆಯನ್ನು ಸ್ವೀಕರಿಸಿದಂತೆ ಪ್ರೇಕ್ಷಕರನ್ನು ನಂಬಿಸುತ್ತಾನೆ.

ನಂತರ 1960ರ ಒಲಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುವ ತಾಲೀಮಿನ ಸಂದರ್ಭದಲ್ಲಿ ‘ಪ್ರಾಕ್ಟೀಸ್ ಸೆಶನ್’ನ(ತಾಲೀಮಿನ) ಓಟದಲ್ಲಿ ಮಿಲ್ಕಾ 45.8ಸೆಕೆಂಡ್‍ಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸಿ ವಿಶ್ವದಾಖಲೆಯನ್ನು ‘ಅನಧಿಕೃತವಾಗಿ’(ದಾಖಲಾಗದಂತೆ) ಮುರಿಯುತ್ತಾನೆ. ಮಿಲ್ಕಾ ತಂಡದಲ್ಲಿ ಸಂಭ್ರಮ ಒಡಮೂಡುತ್ತದೆ. ಹಾಡು-ಕುಣಿತವೂ ಜೊತೆಗೂಡುತ್ತದೆ. ಸಿನಿಕವಾಗಿ ಕೋಚ್ ಬರೆದುಕೊಟ್ಟಿದ್ದ ಕಾಗದದ ಚೀಟಿಯನ್ನು ಬೆಂಕಿಗೆ ಎಸೆಯುವ ದೃಶ್ಯವೂ ಬರುತ್ತದೆ. ಆಗೆಲ್ಲಾ ಹೆಮ್ಮೆ ಮತ್ತು ಆಸ್ಥೆಯಿಂದ ಪ್ರೇಕ್ಷಕರ ಮೈ ಜುಮ್ಮೆನ್ನುತ್ತದೆ. ಚಪ್ಪಾಳೆಗಳ ಸಾಗರವೇ ಹರಿದುಬರುತ್ತದೆ. ಎಲ್ಲವೂ ಸುಗಮವಾಗಿ ಸಾಗಿದೆ, ಇನ್ನೆಲ್ಲಿಯ ಪ್ರಮಾದ ಎಂದರೆ. ಈ ಚಿತ್ರದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ಬಹುದೊಡ್ಡ ಪ್ರಮಾದ ಒಂದಿದೆ. ಅದು ವಿಶ್ವದಾಖಲೆಯ ಬಗ್ಗೆಯೇ ಪ್ರೇಕ್ಷಕರಿಗೆ ತಪ್ಪು ಮಾಹಿತಿಯನ್ನು ನೀಡುವಂತದ್ದು ಮತ್ತು ಮಿಲ್ಕಾನ ಬದುಕಿನ ನಿಜವಾದ ವಿವರಗಳನ್ನು ತಿರುಚುವಂತದ್ದು. ಹಾಗಂತ ಇದು ಬೆಟ್ಟ ಕೊರೆದು ಇಲಿ ಹುಡುಕುವ ಪ್ರಯತ್ನವಲ್ಲ. ರಸದಲ್ಲಿರುವ ಕಸ ಹೆಕ್ಕುವ ಪ್ರಯತ್ನ.

ಮೊತ್ತ ಮೊದಲಿಗೆ ಏಳುವ ಪ್ರಶ್ನೆ, ಚಿತ್ರದಲ್ಲಿ ಮಿಲ್ಕಾಸಿಂಗ್‍ನ ಅಮೋಘ ಸಾಧನೆಗೆ ಕಾರಣವಾದ ‘45.9 ಸೆಕೆಂಡ್‍ಗಳು’ ಎಂಬ ಕನಸಿನ ಗುರಿ ನಿಜಕ್ಕೂ ವಿಶ್ವದಾಖಲೆಯಾಗಿತ್ತೇ? ಎಂಬುದು. ಯಾಕೆಂದರೆ ಈ ವಿಶ್ವದಾಖಲೆ ನಿರ್ಮಾಣವಾದದ್ದು 1948ರಲ್ಲಿ. ಆ ಸಂದರ್ಭದಲ್ಲಿ ಮಿಲ್ಕಾ ಒಲಂಪಿಕ್ಸ್‍ನ ಸ್ಪರ್ಧಾರ್ಥಿಯೇ ಆಗಿರಲಿಲ್ಲ. ಇಂಟರ್‍ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್(ಐಎಎಫ್)ನ ದಾಖಲೆಗಳ ಪ್ರಕಾರ ಪುರುಷರ 400ಮೀಟರ್ ಓಟವನ್ನು 45.9ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿದ ವಿಶ್ವದಾಖಲೆ ಹರ್ಬ್ ಮೆಕೆನ್ಲಿ ಹೆಸರಿನಲ್ಲಿದೆ. 1950ರಲ್ಲಿ ಜಾರ್ಜ್ ರೋಡನ್ 400ಮೀಟರ್ ಓಟವನ್ನು 45.8ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಹೊಸ ದಾಖಲೆಯನ್ನು ಬರೆದ. ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂಬಂತೆ 1955ರಲ್ಲಿ 45.5ಸೆಕೆಂಡ್‍ಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ಲೂ ಜೋನ್ಸ್ ಎಂಬ ಅಥ್ಲೀಟ್ ಆ ಹಿಂದಿನ ದಾಖಲೆಯನ್ನು ಮುರಿದ. ಅವನದ್ದೇ ದಾಖಲೆಯನ್ನು 1956 ಅವನೇ ಮುರಿದು ಹೊಸ ಅಧ್ಯಾಯ ಬರೆದ. ಆಗ ಆತ ತನ್ನ ಗುರಿಯನ್ನು ಮುಟ್ಟಲು ತೆಗೆದುಕೊಂಡ ಸಮಯ ಕೇವಲ 45.2 ಸೆಕೆಂಡ್‍ಗಳು.

ಈ ಎಲ್ಲಾ ಸರಳ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ ಚಲನಚಿತ್ರದಲ್ಲಿ ಕೋಚ್ ಮಿಲ್ಕಾ ಸಿಂಗ್‍ಗೆ ನೀಡುವ ಮಾಹಿತಿ ತಪ್ಪು. ಅದು ವಿಶ್ವದಾಖಲೆಯ ಬಗೆಗಿನ ಪೂರ್ಣ 0.7ಸೆಕೆಂಡ್‍ಗಳ ಅಂತರದ ತಪ್ಪು. ರನ್ನಿಂಗ್ ರೇಸ್‍ನ ಪರಿಭಾಷೆಯಲ್ಲಿ, ಓಟವನ್ನು ಪ್ರಾರಂಭಿಸದ ಇನೀಶಿಯೆಟ್ ಆಗದ ಓಟಗಾರರಿಗೆ ಅದು ‘ಮಿಲೆನಿಯಮ್’ ಅವಧಿ. ಅದು ಅಲ್ಲಿಗೆ ನಿಲ್ಲುವುದಿಲ್ಲ. ಚಿತ್ರದ ಕೊನೆಯಲ್ಲಿ 1960ರ ಒಲಂಪಿಕ್ಸ್ ಪಂದ್ಯಾವಳಿಯಲ್ಲಿ ಮಿಲ್ಕಾಸಿಂಗ್ 400ಮೀಟರ್ ರೇಸನ್ನು 45.8 ಸೆಕೆಂಡ್‍ಗಳಲ್ಲಿ ಕ್ರಮಿಸಿ ಅಲಿಖಿತವಾಗಿ ಹೊಸದಾಖಲೆಯನ್ನು ಬರೆದಂತೆ ತೋರಿಸಲಾಗಿದೆ. ಇದು ಚಾರಿತ್ರಿಕವಾದ ಪ್ರಮಾದ. ಅಸತ್ಯ ಮಾಹಿತಿಯಿಂದ ಪ್ರೇಕ್ಷಕರನ್ನು ಮತ್ತು ಸಮಾಜವನ್ನು ದಾರಿತಪ್ಪಿಸುವ ತಿಳಿಕೇಡಿತನ ಎಂದರೆ ತಪ್ಪಾಗಲಾರದು. ಚಿತ್ರದ ನಿರ್ದೇಶಕರನ್ನೂ ಒಳಗೊಂಡಂತೆ ಚಿತ್ರಕತೆ ನಿರ್ಮಾಣದ ಸಂದರ್ಭದಲ್ಲಿ ತೊಡಗಿಸಿಕೊಂಡ ಯಾರೊಬ್ಬರಿಗೂ ಅದಾಗಲೇ ಗತಿಸಿಹೋದ, ಯಾರದೋ ಹೆಸರಿನಲ್ಲಿರುವ ವಿಶ್ವದಾಖಲೆ ಗೋಚರಿಸಲೇ ಇಲ್ಲವೆ? ಕೋಚ್ ನೀಡುವ ‘45.9ಸೆಕೆಂಡ್‍ಗಳು’ ಎಂಬ ಅಸಂಬದ್ಧ ಗುರಿ ಹನ್ನೆರಡು ವರ್ಷಗಳ ಹಿಂದಿನದ್ದು ಮತ್ತು ಈ ವಿಚಾರ ಯಾರೊಬ್ಬರ ಅರಿವಿಗೂ ಬಾರದಿರುವುದು ನಿಜಕ್ಕೂ ಸೋಜಿಗದ-ಅಚ್ಚರಿಯ ಸಂಗತಿ.
ಚಿತ್ರಜಗತ್ತಿನ ಮಾಯಾಲೋಕದಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಎಂಬ ನೆಪವೊಡ್ಡಿ ಅದೆಷ್ಟೋ ನಿಜವಾದ ಮಾಹಿತಿಗಳನ್ನು, ದಾಖಲೆಗಳನ್ನು ತಮಗೆ ಬೇಕಾದಂತೆ ತಿರುಚಿ ಹಾಕುವುದು ನೀರು ಕುಡಿದಷ್ಟೇ ಸುಲಭವಾಗಿ ಬಿಟ್ಟಿದೆ. ಅದಕ್ಕೆ ಸಾಕಷ್ಟು ಸಬೂಬುಗಳೂ ತಯಾರಿರುತ್ತವೆ. ಆದರೆ ಪ್ರಾಯಶಃ ‘ಭಾಗ್ ಮಿಲ್ಕಾ ಭಾಗ್’ ಚಿತ್ರ ಬಾಲಿವುಡ್‍ನ ಇತರ ಮೆಲೋಡ್ರಾಮ ಚಿತ್ರಗಳಿಗಿಂತ ಭಿನ್ನವಾಗಿದೆ. ಅದೇ ಕಾರಣಕ್ಕಾಗಿ ಇದು ತೆರಿಗೆ ವಿನಾಯತಿಯನ್ನು ಪಡೆದಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದು ಭಾರತದ ಬಹು ಹೆಮ್ಮೆಯ ಸಾಧಕ ಮಿಲ್ಕಾ ಸಿಂಗ್‍ನ ನಿಜವಾದ ಜೀವನ ಕಥನ. ಅದನ್ನು ಸ್ವಲ್ಪವೂ ತಿರುಚದಂತೆ ಚಿತ್ರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಇಂತಹ ಉತ್ತಮ ಪ್ರಯೋಗಳು ಜನರಿಗೆ ಅತ್ಯಂತ ಪ್ರಾಥಮಿಕ ಮಾಹಿತಿ-ಸಂಗತಿಯೊಂದನ್ನು ತಪ್ಪಾಗಿ ನೀಡುವ ಮೂಲಕ ಸೋಲುತ್ತವೆ. ಮತ್ತು ಜನರ ನಂಬಿಕೆಗಳನ್ನು ಘಾಸಿಗೊಳಿಸುತ್ತವೆ. ಇಂತಹ ಸಣ್ಣ ಆದರೆ ಪ್ರಧಾನ ದೋಷ ಪ್ರೇಕ್ಷಕರನ್ನು ಮೂರ್ಖರನ್ನಾಗಿಸುವ ಕ್ರಿಯೆಯಾಗಿದೆ. ಇದು ನಿಜವಾಗಿಯೂ ಮಿಲ್ಕಾ ಸಿಂಗ್‍ಗೆ ಮಾಡಿದ ನೇರ ಅವಮಾನ.

ಮಿಲ್ಕಾ ನಮ್ಮ ದೇಶದ ಬಹು ವಿಖ್ಯಾತ ಕ್ರೀಡಾ ಪಟು, ಆತ ಲಿಖಿತವಾಗಿ ಅಥವಾ ಅಲಿಖಿತವಾಗಿ 400ಮೀಟರ್ ರೇಸ್‍ನಲ್ಲಿ ಹಿಂದಿನ ಯಾವುದೇ ವಿಶ್ವದಾಖಲೆಯನ್ನು ಮುರಿದಿಲ್ಲ ಎಂಬುದು ಚಿತ್ರವನ್ನು ನೋಡಿದವರೂ, ನೋಡದವರೂ ತಿಳಿಯಬೇಕು. ಇಂತಹ ದೊಡ್ಡ ಪ್ರಮಾದ ಬಿ-ಟೌನ್‍ನ ಮಾಧ್ಯಮಗಳಲ್ಲಿ ಸುದ್ದಿಯಾಗದಿರುವುದು ಅವುಗಳ ಕಾರ್ಯವೈಖರಿಯ ದ್ಯೋತಕ.
ನಿಖರತೆಯ ಮೂಲಾಂಶ ನಾಪತ್ತೆಯಾಗಿದ್ದರೂ, ಆ ಅಂಶವನ್ನು ಮನ್ನಿಸಿದರೆ ಸಾಧಕ ಅಥ್ಲೀಟ್ ಒಬ್ಬನ ಜೀವನವನ್ನು ಹೆಮ್ಮೆಯಾಗುವಂತೆ ಚಿತ್ರಿಸಿದ ‘ಭಾಗ್ ಮಿಲ್ಕಾ ಭಾಗ್’ ಚಿತ್ರದ ಪ್ರಯತ್ನ ಮತ್ತು ಸಾಧನೆಯನ್ನು ಮೆಚ್ಚಲೇಬೇಕು. ಅಭಿನಂದಿಸಬೇಕು.
--------

-ಶ್ರೇಯಾಂಕ ಎಸ್. ರಾನಡೆ,

The Change: Women in ITBP(Indo-Tibetian Border Police Force). ಐ.ಟಿ.ಬಿ.ಪಿ.ಯಲ್ಲೂ ಸ್ತ್ರೀ ಶಕ್ತಿ.


ಐ.ಟಿ.ಬಿ.ಪಿ.ಯಲ್ಲೂ ಸ್ತ್ರೀ ಶಕ್ತಿ.


ಮೊದಲ ಬಾರಿಗೆ ಲಡಾಕ್ ಪ್ರದೇಶದಲ್ಲಿ ಹೋರಾಡಲಿದ್ದಾರೆ ಭಾರತೀಯ ಮಹಿಳಾ ಸೇನಾನಿಗಳು.ಭಾರತೀಯ ವಾಯುಸೇನೆಯಲ್ಲಿ ಮಹಿಳಾ ಫೈಟರ್ ಪೈಲೆಟ್‍ಗಳನ್ನು ನಿಯುಕ್ತಿಗೊಳಿಸುವ ನಿರ್ಧಾರವನ್ನು ಕೈಗೊಂಡ ಬೆನ್ನಲ್ಲೇ ರಕ್ಷಣಾ ಇಲಾಖೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸೇನೆಯನ್ನು ಸೇರಬಯಸುವ ಮಹಿಳೆಯರಿಗೆ ಶುಭ ಸುದ್ದಿ. ಇನ್ನು ಮುಂದೆ ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ ಫೋರ್ಸ್(IಖಿಃPಈ)ನಲ್ಲಿ ಶೀಘ್ರವೇ ಮಹಿಳಾ ಅಧಿಕಾರಿಗಳನ್ನೂ, ಮಹಿಳಾ ಸಿಪಾಯಿಗಳನ್ನೂ ನೇಮಿಸಲಿದೆ. ಇಂಡೋ-ಚೀನಾ ಗಡಿಯ ಲಡಾಕ್ ಸೆಕ್ಟರ್‍ನ ಹಿಮಾಲಯ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿದೆ. ಜವಾಹರ್ ಲಾಲ್ ನೆಹರೂ ಕಾಲದಿಂದಲೂ ಸೂಕ್ಷ್ಮ ಮತ್ತು ಆರೋಗ್ಯದ ಕಾರಣಗಳನ್ನು ನೀಡಿ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಐ.ಟಿ.ಬಿ.ಪಿ.ಎಫ್‍ನಲ್ಲಿ ಮಹಿಳೆಯರನ್ನು ನೇಮಿಸುತ್ತಿರಲಿಲ್ಲ. ಆದರೆ ಸಮಾನತೆ ಮತ್ತು ಸಮಾನ ಹಕ್ಕುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡ ಈ ಕ್ರಮ ಸ್ವಾಗತಾರ್ಹ.

ವಿಶ್ವದ ಅಸಾಮಾನ್ಯ ಸೇನಾಬಲಗಳಲ್ಲಿ ಕ್ಲಿಷ್ಟ ಮತ್ತು ಸಂಕೀರ್ಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಮಹಿಳಾ ಯೋಧರಿದ್ದಾರೆ. ಅವರಿಗೆ ಸಮಾನಾಗಿ ನಿಲ್ಲಲಿದೆ ಐ.ಟಿ.ಬಿ.ಪಿ.ಎಫ್. ಈ ಕ್ರಮ ಶ್ಲಾಘನೀಯವೂ ಯಾಕೆಂದರೆ ಇದೇ ಗಡಿಯಾಚೆಗಿನ ಚೀನೀ ಸೇನೆಯಲ್ಲಿಯೂ ನೇಮಕಗೊಂಡಿರುವ ಮಹಿಳಾ ಸಿಬ್ಬಂದಿಗಳೇ ಇಲ್ಲ! ಈ ದೃಷ್ಟಿಯಿಂದಲೂ ಭಾರತದ ಕ್ರಮ ಹೊಸ ಮೊದಲಿಗೆ ಸಾಕ್ಷಿ.

ಐ.ಟಿ.ಬಿ.ಪಿಯಲ್ಲಿ 1,661 ಮಹಿಳಾ ಯೋಧರನ್ನು ನೇಮಿಸಿಕೊಳ್ಳಲು ಅವಕಾಶವಿತ್ತು. ಆದರೆ ಇಲ್ಲಿಯವರೆಗೂ ಆ ಹುದ್ದೆಗಳಲ್ಲಿ ಕೇವಲ ಪುರುಷರನ್ನೇ ನೇಮಿಸಲಾಗುತ್ತಿತ್ತು. ಆ ಹುದ್ದೆಗಳಲ್ಲಿನ್ನು ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಸಧ್ಯದಲ್ಲೇ ಕೇಂದ್ರ ಲೋಕ ಸೇವಾ ಆಯೋಗದ ಮೂಲಕ ರಕ್ಷಣಾ ಇಲಾಖೆ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗೆ ಮಹಿಳಾ ಅಧಿಕಾರಿಗಳನ್ನು ಣೇಮಿಸಿಕೊಳ್ಳಲಿದೆ. ಇನ್ನು ಐ.ಟಿ.ಬಿ.ಪಿ. ಫೋರ್ಸ್‍ನ ಪೂರ್ಣ ಸಾಮಥ್ರ್ಯದ ಶೇಕಡಾ 33% ಅಂದರೆ 1/3ರಷ್ಟು ಮಹಿಳಾ ಸೇನಾನಿ ಸಿಬ್ಬಂದಿಗಳನ್ನೂ ನೇಮಿಸಲಿದೆ.

ಈಗಾಗಲೇ ಇತರ ಕೇಂದ್ರಿಯ ಸಶಸ್ತ್ರ ಪೋಲಿಸ್ ಫೋರ್ಸ್‍ಗಳಾದ ಸಿ.ಆರ್.ಪಿ.ಎಫ್, ಸಿ.ಐ.ಎಸ್.ಎಫ್ ಮತ್ತು ಎಸ್.ಎಸ್.ಬಿಗಳಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಸಶಸ್ತ್ರ ಸೀಮಾ ಬಲ(ಎಸ್.ಎಸ್.ಬಿ.)ದಲ್ಲಿ ಮಹಿಳಾ ಅಧಿಕಾರಿಗಳ ನೇಮಕಾತಿ ಪ್ರಾರಂಭವಾಗಿದ್ದು 2014ರಿಂದ.

ಈ ವರ್ಷದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೊದಲಬಾರಿಗೆ ಸೇನೆಯ ತುಕಡಿಯೊಂದನ್ನು ಮಹಿಳಾ ಅಧಿಕಾರಿಯೊಬ್ಬರು ಮುನ್ನಡೆಸಿದರು. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾಗ ಅವರಿಗೆ ಗಾರ್ಡ್ ಆಫ್ ಹಾನರ್ ನೀಡಿದ್ದು ಮಹಿಳಾ ಅಧಿಕಾರಿ. ವಾಯುಸೇನೆಯಲ್ಲಿ ಊಹಿಸಲೂ ಅಸಾಧ್ಯವಾಗಿದ್ದ ಮಹಿಳಾ ಫೈಟರ್ ಜೆಟ್ ಪೈಲೆಟ್‍ಗಳನ್ನು ನೇಮಿಸುವ ಆದೇಶ ಹೊರಬಿದ್ದಿದ್ದು.. ಇಂತಹ ಅನೇಕ ಮೊದಲುಗಳಿಗೆ ನಾಂದಿಹಾಡುತ್ತಿರುವುದು ಒಂದು ಕಾಲದಲ್ಲಿ ದೇಶದ ರಕ್ಷಣೆಯ ವಿಚಾರದಲ್ಲಿ ಪುರುಷರಿಗಷ್ಟೇ ಮಣೆ ಹಾಕುತ್ತಿದ್ದ ರಕ್ಷಣಾ ಇಲಾಖೆ. ಇದು ಮುಂಬರುವ ದಿನಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಗಳನ್ನು ಮಹತ್ವದ ನಿರ್ಧಾರ ಕೈಗೊಳ್ಳುವ ಉನ್ನತ ಹುದ್ದೆಗಳಲ್ಲಿ ಕಾಣಬಹುದೆಂಬ ಮುನ್ಸೂಚನೆಯೂ ಹೌದು.

ಮಹಿಳೆಯರಿಗೂ ಪ್ರಾಶಸ್ತ್ಯ ಕಲ್ಪಿಸುತ್ತಿರುವ ರಕ್ಷಣಾ ಇಲಾಖೆಯಲ್ಲಿನ ತ್ವರಿತ ಬದಲಾವಣೆಗಳು ಕೇಂದ್ರ ಸರಕಾರದ ನೂತನ ಮನಸ್ಥಿತಿ ಹಾಗೂ ಬದಲಾದ ಚಿಂತನಾಕ್ರಮವನ್ನು ಸೂಚಿಸುತ್ತವೆ, ಸಮಾನತೆಯನ್ನು ಬಯಸುವ ಬದಲಾಗುತ್ತಿರುವ ಭಾರತೀಯ ಸಮಾಜವನ್ನು ಪ್ರತಿಬಿಂಬಿಸುತ್ತವೆ. ಇಂತಹ ಬದಲಾವಣೆಗಳು ನಿಧಾನವಾಗಿ ನಡೆಯುತ್ತಿದ್ದರೂ ಭರವಸೆಯನ್ನು ಮೂಡಿಸುತ್ತಿವೆ. ಈ ಕ್ರಮಗಳು ಕೇವಲ ಸಾಂಕೇತಿಕ ನಡೆಗಳಾಗದೆ ಸಾಂಸ್ಥಿಕವಾದ ಜಡ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಮಹತ್ವದ ಹೆಜ್ಜೆಯಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಇದು ಸಾಧ್ಯವಾಗಬೇಕು. ಇದಕ್ಕೆ ಬೇಕಿರುವುದು ಹೊಸತನ್ನು ಒಪ್ಪಿಕೊಳ್ಳುವ ಮನಸ್ಥಿತಿ. ಐ.ಟಿ.ಬಿ.ಪಿ. ಇಂತಹ ಒಂದು ಜಡತ್ವವನ್ನು ತೊಡೆದುಹಾಕಿದೆ. ಎಲ್ಲಾ ಇಲಾಖೆಗಳೂ ಇದನ್ನು ಪಾಲಿಸಬೇಕಿದೆ.

---

-ಶ್ರೇಯಾಂಕ ಎಸ್ ರಾನಡೆ.

Journey on the Road: Pathways to Road Safety. ರಸ್ತೆಯಲ್ಲಿ ನಾವೂ, ನೀವೂ.

ರಸ್ತೆಯಲ್ಲಿ ನಾವೂ, ನೀವೂ.


Traffic rules are terrific if you follow, terrible if you break!ಮಹಾನಗರಗಳಲ್ಲಿ ಜನರ ಬಳಿ ವಾಹನಗಳಿರುತ್ತವೆ. ಆದರೆ ಕನಿಷ್ಟ ವ್ಯವಧಾನವೂ ಇರುವುದಿಲ್ಲ, ಟ್ರಾಫಿಕ್ ಸಮಸ್ಯೆಯ ಬಗ್ಗೆ, ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲದವರಂತೆ ವರ್ತಿಸುವುದೂ ಇದೆ. ಇದಕ್ಕೆಲ್ಲ ಸಂಚಾರ ವ್ಯವಸ್ಥೆ, ನಿಯಮಗಳ ಬಗೆಗಿನ ಅಸಡ್ಡೆಯೇ ಕಾರಣ. ತಾವು ಮಾತ್ರ ಸುಲಭವಾಗಿ, ವೇಗವಾಗಿ ಹೋಗಬೇಕು ಎಂಬ ಸಂಕುಚಿತ ಮನಸ್ಥಿತಿಯೂ ಟ್ರಾಫಿಕ್ ಜಾಮ್, ಪಾರ್ಕಿಂಗ್ ಅವ್ಯವಸ್ಥೆಯನ್ನು ಪೋಷಿಸುತ್ತದೆ.

ಪಾರ್ಕಿಂಗ್‍ಗೆಂದು ನಿಗದಿತವಾದ ವ್ಯವಸ್ಥೆ ಮಾಡಲಾಗಿದ್ದರೂ ಅಡ್ಡದಿಡ್ಡಿಯಾಗಿ ವಾಹನವನ್ನು ನಿಲ್ಲಿಸಲಾಗುತ್ತದೆ. ವಾಣಿಜ್ಯ ಕಟ್ಟಡಗಳ ಹೊರಗೆ ಮೀಸಲಾದ ಸ್ಥಳಕ್ಕಿಂತಲೂ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುವುದು ಒಂದು ಕಿರಿಕಿರಿಯಾದರೆ, ನಿಲ್ಲಿಸಿದ ವಾಹನದ ಹಿಂಬದಿಯೋ, ಮುಂಬದಿಯೋ ಮತ್ತೊಂದು ವಾಹನವನ್ನು ಅಡ್ಡವಾಗಿ ನಿಲ್ಲಿಸಿ ಮೊದಲ ವಾಹನವನ್ನೂ ತೆಗೆಯದಂತೆ ಮಾಡಿಬಿಡುವುದು ವಾಹನ ಸವಾರರಿಗೆ ಸಾಮಾನ್ಯವಾಗಿ ಎದುರಾಗುವ ಪಾರ್ಕಿಂಗ್ ಸಮಸ್ಯೆ. ಬೃಹತ್ ಸಂಖ್ಯೆಯ ವಾಹನಗಳಿದ್ದರಂತೂ ಅದರಲ್ಲಿ ಸಿಲುಕದೆ ಹೊರಬಂದವರು ಉಸ್ಸೆಂದು ಯಾವುದೋ ಯುದ್ಧ ಗೆದ್ದಂತೆ ನಿಟ್ಟುಸಿರು ಬಿಡುತ್ತಾರೆ.

ಪಥ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಯಾವುದೋ ವಾಹನವೊಂದು ಮಧ್ಯದಲ್ಲಿ ಅಡ್ಡಾದಿಡ್ಡಿಯಾಗಿ ಪಥವನ್ನು ಬದಲಿಸುತ್ತದೆ. ಆ ವಾಹನವನ್ನು ನಿರೀಕ್ಷಿಸದಿದ್ದ ಕಾರಣ ತ್ವರಿತವಾಗಿ ಬ್ರೇಕ್ ಹಾಕಿದರೆ ಹಿಂದಿರುವ ವಾಹನಗಳ ಫಜೀತಿ ಖಂಡಿತ. ಎದುರಿರುವ ವಾಹನಕ್ಕೆ ಢಿಕ್ಕಿ ಹೊಡೆಯದಿದ್ದರೆ ಅದೇ ಅವರ ಪುಣ್ಯ. ವಾಹನ ಸಂಚರಿಸುತ್ತಿರುವಾಗ ಎಲ್ಲೋ ಒಂದೆಡೆ ನಿಲ್ಲಿಸಿಬಿಡುವುದು, ಅಪರಿಚಿತವಾದ ಹೊಸ ಪ್ರದೇಶವೊಂದರಲ್ಲಿ ಸಂಚರಿಸುವಾಗ ಪದೇ ಪದೇ ರಸ್ತೆ, ವಿಳಾಸ ಕೇಳುವ ಸಲುವಾಗಿ ವಾಹನವನ್ನು ಅಲ್ಲಲ್ಲಿ ನಿಲ್ಲಿಸುವುದು ಹಿಂದೆಯೇ ಬರುತ್ತಿರುವವರಿಗೆ ದೊಡ್ಡ ಗೋಳು. ವೇಗಮಿತಿಯ ಅರಿವಿದ್ದೂ ಅತಿವೇಗವಾಗಿ ವಾಹನ ಚಲಾಯಿಸುವವರು, ಸಿಗ್ನಲ್ ಮುರಿಯುವವರು, ಆಂಬ್ಯುಲೆನ್ಸ್‍ನ ಅನಿವಾರ್ಯತೆ ಗೊತ್ತಿದ್ದೂ ಅದಕ್ಕಾಗಿ ಸ್ಥಳವಾಕಾಶ ಮಾಡಿಕೊಡದೆ ತಮ್ಮ ಸರದಿಯಲ್ಲಿಯೇ ಮುಂದುವರೆಯುವವರು, ತಾವೂ ಮುಂದೆ ಹೋಗದೆ ಹಿಂದಿನವರಿಗೂ ಹೋಗಲು ಬಿಡದ ವಿಘ್ನ ಸಂತೋಷಿಗಳು. ಅನೇಕ ರಸ್ತೆಗಳು ತೀರಾ ಸಣ್ಣದಾಗಿದ್ದರೂ ಶಾರ್ಟ್‍ಕಟ್ ಆದ ಕಾರಣ ಬೃಹತ್ ವಾಹನವನ್ನೂ ಕೊಂಡೊಯ್ಯುವ ಕಾರಣ ರಸ್ತೆಯ ಸಂಚಾರವೇ ತಟಸ್ಥಗೊಳ್ಳುತ್ತದೆ.

ಪಾದಾಚಾರಿಗಳು ತಮಗೆ ಮೀಸರಿಸಿದ ಮಾರ್ಗದಲ್ಲಿ ಅದು ದೀರ್ಘವೆಂಬ ಕಾರಣಕ್ಕೋ ಅಥವಾ ಫುಟ್‍ಪಾಥ್‍ನ ತುಂಬೆಲ್ಲಾ ಅಂಗಡಿ ಮುಂಗಟ್ಟು, ತಾತ್ಕಾಲಿಕ ವ್ಯಾಪಾರ ವಹಿವಾಟು ಆಕ್ರಮಿಸಿಕೊಂಡಾಗ ರಸ್ತೆಯ ಮೇಲೆ ಸಂಚರಿಸಲು ಪ್ರಾರಂಭಿಸುತ್ತಾರೆ. ಪರಿಣಾಮ ಟ್ರಾಫಿಕ್ ದಟ್ಟನೆ. ಸಿಗ್ನಲ್ ಪಾದಾಚಾರಿಗಳಿಗೆ ಮುಕ್ತವಾಗಿಲ್ಲದಿದ್ದರೂ ನಡುವೆಯೇ ನುಗ್ಗುವುದು, ಝೀಬ್ರಾ ಕ್ರಾಸಿಂಗ್ ಅನ್ನು ಅಲಕ್ಷಿಸುವುದು ಅಪಘಾತಗಳಿಗೂ ಕಾರಣವಾಗುತ್ತದೆ.

ಇವು ಕೇವಲ ಬಿಡಿ ಚಿತ್ರಗಳಷ್ಟೆ. ಇಂತಹ ಅದೆಷ್ಟೋ ಘಟನೆಗಳು, ಸಂಗತಿಗಳು ದಿನನಿತ್ಯವೂ ಅನುಭವಕ್ಕೆ ಬರುತ್ತವೆ. ಆಗೆಲ್ಲ ವಿದೇಶಗಳ ವ್ಯವಸ್ಥೆ, ಅಲ್ಲಿನ ಜನರ ಸಹಕಾರವನ್ನಷ್ಟೇ ನೆನೆದು ಉಗುರುಕಚ್ಚಿಕೊಂಡು ತೃಪ್ತಿ ಕಾಣಬೇಕು. ಇಲ್ಲಿ ಬೇಕಾಗಿರುವುದು ಮಹಾ ತ್ಯಾಗ, ಬಲಿದಾನಗಳಲ್ಲ. ನಿಯಮಗಳನ್ನು ಪಾಲಿಸುವ ಕನಿಷ್ಟ ಸೌಜನ್ಯ, ಮನೋಸಹಜ ತಾಳ್ಮೆ ಮತ್ತು ಎಲ್ಲರಲ್ಲೂ ತೀರಾ ಕಾಮನ್ ಆಗಿರಬೇಕಾದ ಕಾಮನ್‍ಸೆನ್ಸ್. ಇಲ್ಲದಿದ್ದರೆ ಅದು ನ್ಯೂಸೆನ್ಸ್ ಆಗುತ್ತದೆ. ವ್ಯವಸ್ಥೆಯನ್ನು ಹೀಗಳೆಯುವವರು ಅವರೂ ಅದೇ ವ್ಯವಸ್ಥೆಯ ಭಾಗವೆಂಬುದನ್ನು ಮರೆತಿರುತ್ತಾರೆ. ಇದು ಅರಿವಾಗದ ಹೊರತು ಯಾರಿಂದಲೂ ಸಂಚಾರ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಲು ಅಸಾಧ್ಯ. ಮನಸ್ಸು ಸಣ್ಣದಾಗಿದ್ದರೆ ಎಷ್ಟೇ ದೊಡ್ಡ ವಾಹನವಿದ್ದರೂ ಪ್ರಯೋಜನವಿಲ್ಲ. ರಸ್ತೆಯಲ್ಲಿ ಸಂಚರಿಸುವ ನಾವು, ನೀವೂ ಈ ಮೇಲಿನ ಯಾವ ಗುಂಪಿಗೆ ಸೇರುತ್ತೇವೆ ಎಂಬುದನ್ನು ಅರಿತು ಅದರಿಂದ ಹೊರಬರಬೇಕು. ಅದೇ ನಮ್ಮೆಲ್ಲರ ಸುರಕ್ಷತೆ, ನೆಮ್ಮದಿಗೆ ಸುಗಮ ದಾರಿ.-ಶ್ರೇಯಾಂಕ ಎಸ್ ರಾನಡೆ.

All about Call Drops. ಕರೆ ಕಡಿತವೆಂಬ ಮಾಯಾಜಾಲ

ಕರೆ ಕಡಿತವೆಂಬ ಮಾಯಾಜಾಲದಲ್ಲಿ ಬಂಧಿಯಾದ ಚಂದಾದಾದರು


-ಕರೆ ಕಡಿತದ ಜೊತೆಗೆ ದರ ಕಡಿತ. ಒಟ್ಟಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಟೆಲಿಕಾಂ ಕಂಪೆನಿಗಳ ಹಳೆಯ ಆಟ.
ಫೋನ್‍ನಲ್ಲಿ ತುರ್ತಾದ ಮಾತುಕತೆಯಲ್ಲಿರುವಾಗ ತಟ್ಟನೆ ಕರೆ ಕಡಿತಗೊಳ್ಳುತ್ತದೆ. ಇದು ಇದೇ ಮೊದಲ ಬಾರಿಗೆ ನಡೆದದ್ದಲ್ಲ. ಆದರೆ ಪೂರ್ಣ ನಿಮಿಷದ ಕರೆಯ ದರ ಕಡಿತಗೊಳ್ಳುತ್ತದೆ. ಇದಕ್ಕೆ ಕಾಲ್ ಡ್ರಾಪ್ ಎಂದು ಹೆಸರು. ಈ ತಾಂತ್ರಿಕ ಸಮಸ್ಯೆ ಹೆಚ್ಚು ಬಳಕೆದಾರರ ಒತ್ತಡವಿರುವ ಪ್ರದೇಶದಲ್ಲಿ ಅತ್ಯಧಿಕ. ಟೆಲಿಕಾಂ ಕಂಪೆನಿಗಳ ವ್ಯವಸ್ಥಿತ ಪಿತೂರಿಯೇ ಇದಕ್ಕೆ ಕಾರಣ ಎಂದು ಟೆಲಿಕಾಂ ಇಲಾಖೆ ದೂರುತ್ತದೆ. ಪ್ರತಿಯಾಗಿ ಟೆಲಿಕಾಂ ಆಪರೇಟರ್‍ಗಳು ಸ್ಪೆಕ್ಟ್ರಂ ತರಾಂಗಂತರಗಳ ಕೊರತೆ, ಟವರ್‍ಗಳ ಅಲಭ್ಯತೆಯ ಕಾರಣ ನೀಡುತ್ತವೆ. ನಿಮಗೂ ಅನೇಕ ಬಾರಿ ಮಾತಿನ ನಡುವೆ ಅನಿರೀಕ್ಷಿತವಾಗಿ ಕರೆಗಳು ಕಡಿತಗೊಂಡಿರಬಹುದು. ಇದರಿಂದ ಯಾವ ಗ್ರಾಹಕರಿಗೆ ತಾನೆ ಸಿಟ್ಟು ಬರುವುದಿಲ್ಲ. ಆದರೆ ಅದಕ್ಕೆ ಮೊಬೈಲ್ ಕಂಪೆನಿಗಳು ಯಾವುದೇ ಪರಿಹಾರವನ್ನು ನೀಡುವುದಿಲ್ಲ.

ಮಹಾನಗರಗಳಲ್ಲಿ ಕರೆ ಕಡಿತದ ದರ 12.5%, ಅಂದರೆ ಪ್ರತಿ ಹತ್ತರಲ್ಲಿ ಒಂದು ಕರೆ ಕಾಲ್ ಡ್ರಾಪ್‍ಗೆ ಬಲಿಯಾಗುತ್ತದೆ. ಇನ್ನು ನಗರಗಳ ಟೆಲಿಡೆಂಸಿಟಿ ಪ್ರಮಾಣ 100ಕ್ಕೂ ಅಧಿಕ. ರಾಜಧಾನಿ ದೆಹಲಿಯಲ್ಲಿ ಇದು ಅತ್ಯಧಿಕ ಅಂದರೆ 222.7. ಇತರ ನಗರಗಳಲ್ಲೂ ಈ ಸ್ಥಿತಿ ಭಿನ್ನವಾಗಿಲ್ಲ.

ಟೆಲಿಕಾಂ ಕಂಪೆನಿಗಳು ತರಂಗಾಂತರಗಳ ಖರೀದಿಗಾಗಿ 1,29,000 ಕೋಟಿಯನ್ನು ಹೂಡಿದ್ದಾಗಿ ಹೇಳುತ್ತಿವೆ. ಈ ಹೂಡಿಕೆಯನ್ನು ಗ್ರಾಹಕರಿಂದಲೇ ಬಯಸುತ್ತವೆ. ಟಾರಿಫ್ ಯೋಜನೆಗಳಿಗೆ ಅನುಗುಣವಾಗಿ ಮೊಬೈಲ್ ಕಂಪೆನಿಗಳಿಗೆ ಕರೆ ಕಡಿತದಿಂದ ಲಾಭವಾಗುತ್ತದೆ. ಶೇಕಡಾ 50% ಪ್ರತಿಶತಕ್ಕಿಂತಲೂ ಕಡಿಮೆ ಜನರು ಮಾತ್ರ ಸೆಕೆಂಡ್ಸ್ ಯೋಜನೆ ಹೊಂದಿದ್ದಾರೆ, ಅವರು ಮಾತ್ರ ಈ ಸಮಸ್ಯೆಯಿಂದ ಮುಕ್ತರು. ನಿಮಿಷಗಳ ಯೋಜನೆ ಹೊಂದಿರುವವರು ಸದೈವ ವಂಚಿತರು.

ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾದ್ದು ಸರಕಾರ ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಟ್ರಾಯ್ ಈ ಸಮಸ್ಯೆಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿಯವರು ಟೆಲಿಕಾಂ ಕಂಪೆನಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸರಕಾರ ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನೂ, ಕಟ್ಟುನಿಟ್ಟಿನ ನಿಯಮವನ್ನು ರೂಪಿಸುವ ಕಾರ್ಯದಲ್ಲಿದೆ.

ಸಾಮಾನ್ಯವಾಗಿ ಮೊಬೈಲ್‍ಗಳು 300 ಮೆಗಾಹಟ್ಜ್ ನಿಂದ 3,000 ಮೆಗಾಹಟ್ಜ್ ವ್ಯಾಪ್ತಿಯ ರೇಡಿಯೋ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುತ್ತವೆ. ವಾಸ್ತವವಾಗಿ ಉಲ್ಲೇಖಿಸಿದ ಪೂರ್ಣ ವ್ಯಾಪ್ತಿ ಬಳಕೆಗೆ ಲಭ್ಯವಿರುವುದಿಲ್ಲ. ಕಡಿಮೆ ಫ್ರಿಕ್ವೆನ್ಸಿ ಇದ್ದಷ್ಟು ಹೆಚ್ಚು ಸ್ಪಷ್ಟ ವಾಹಕತೆ ಇರುತ್ತದೆ. ಹಾಗಾಗಿ ಮೊಬೈಲ್ ಕಂಪೆನಿಗಳು ಪ್ರತಿ ಬ್ಯಾಂಡ್‍ನಲ್ಲಿಯೂ ಕಡಿಮೆ ಫ್ರಿಕ್ವೆನ್ಸಿಯನ್ನು ಆಯ್ದುಕೊಳ್ಳುತ್ತವೆ. ಉದಾಹರಣೆಗೆ ಟೆಲಿಕಾಂ ಕಂಪೆನಿಯೊಂದು 2000 ಮೆ.ಹ ಬದಲು 800 ಮೆ.ಹಗೆ ಮೊರೆಹೋಗುತ್ತವೆ. ಪ್ರತೀ ಬ್ಯಾಂಡ್‍ನಲ್ಲಿರುವ ಸೀಮಿತ ಸ್ಥಳಾವಕಾಶದಲ್ಲಿ ಎಲ್ಲಾ ಕಂಪೆನಿಗಳು ಕಡಿಮೆ ಫ್ರಿಕ್ವೆನ್ಸಿಗಾಗಿ ಹೋರಾಡುತ್ತವೆ. ಅಂದರೆ ಶಕ್ತಿಯುತವಾದ ಸಣ್ಣ ಸ್ಥಳ ವನ್ನು ದೇಶದ 13 ಟೆಲಿಕಾಂ ಕಂಪೆನಿಗಳೂ ಆಶಿಸುತ್ತವೆ. ಇದರ ಪರಿಣಾಮ ಕಂಪೆನಿಗಳ ಬಳಿ ಮೌಲ್ಯಯುತ ಫ್ರಿಕ್ವೆನ್ಸಿಯ ಪ್ರಮಾಣ ಕಡಿಮೆಯಿರುತ್ತದೆ. ತೀರಾ ಕಡಿಮೆಯಿದ್ದಾಗ ಅನಿವಾರ್ಯವಾಗಿ ಧ್ವನಿ ಸೇವೆಯಲ್ಲಿ ಕಳಪೆ ಗುಣಮಟ್ಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪರಿಣಾಮ ಕರೆ ಕಡಿತ, ಇಂಟರ್ನೆಟ್ ಬಳಕೆಯಲ್ಲಿ ತೊಡಕು ಇತ್ಯಾದಿ ಸಮಸ್ಯೆಗಳು ನಿರಂತರವಾಗಿ ತಲೆದೋರುತ್ತವೆ. ಪ್ರದೇಶವೊಂದರಲ್ಲಿ ಟೆಲಿಕಾಂ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಈ ಸಮಸ್ಯೆ ವೃದ್ಧಿಸುತ್ತದೆ.

ಚೀನಾ ದೇಶದ ನಂತರ ಅತೀ ಹೆಚ್ಚು ಮೊಬೈಲ್ ಚಂದಾದಾರರಿರುವುದು ಭಾರತದಲ್ಲಿ. ಪ್ರಸ್ತುತ 961 ಮಿಲಿಯನ್ ಮೊಬೈಲ್ ಬಳಕೆದಾರರಿದ್ದಾರೆ. ವಿಶ್ವದ ಪ್ರೌಢ, ಬೆಳೆಯುತ್ತಿರುವ ಟೆಲಿಕಾಂ ಮಾರುಕಟ್ಟೆ, ಅನಿಯಮಿತ ಬೇಡಿಕೆಯ ಕಾರಣದಿಂದ ಅನೇಕ ಟೆಲಿಕಾಂ ಕಂಪೆನಿಗಳು ಭಾರತಕ್ಕೆ ಕಾಲಿಡುತ್ತಿವೆ. ಹೀಗಾದಾಗ ಬ್ಯಾಂಡ್‍ನ ಲಭ್ಯತೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಹಂಚಿಕೆಯಾದ ನಂತರವೂ ಮುಗಿಯದ ಸಂಪನ್ಮೂಲ ಸ್ಪೆಕ್ಟ್ರಂ ತರಂಗಾಂತರ. ಆದರೆ ಇದರ ಹಂಚಿಕೆಗೆ ವಿಶ್ವಮಾನ್ಯ ನಿಯಮವಿದೆ. ಹಾಗಾಗಿ ಅದನ್ನು ಬೇಕಾಬಿಟ್ಟಿ ಹಂಚುವಂತಿಲ್ಲ.

ಮೊಬೈಲ್ ಟವರ್‍ಗಳು ರೇಡಿಯೋ ತರಾಂಗಂತರಗಳನ್ನು ಸುಲಭವಾಗಿ ಚಲಿಸಲು ಸಹಾಯ ಮಾಡುತ್ತವೆ. ನಮ್ಮ ದೇಶದಲ್ಲಿ ಸುಮಾರು 5,50,000 ಲಕ್ಷ ಮೊಬೈಲ್ ಟವರ್‍ಗಳಿವೆ. ಈ ಸಂಖ್ಯೆ ಇನ್ನೂ ಬೆಳೆಯುತ್ತಿದೆ. ಅಂತೆಯೇ ಟೆಲಿಕಾಂ ಕಂಪೆನಿಗಳಿಗೆ ಸುಮಾರು 1 ಲಕ್ಷ ಟವರ್‍ಗಳ ಅನಿವಾರ್ಯತೆಯಿದೆ. ಕಡಿಮೆ ಫ್ರಿಕ್ವೆನ್ಸಿಯ ರೆಡಿಯೋ ಬ್ಯಾಂಡ್‍ಗಳು ದೂರ ವಿಸ್ತಾರಕ್ಕೆ ಚಲಿಸಲು ಕನಿಷ್ಟ ಸಂಖ್ಯೆಯ ಟವರ್‍ಗಳು ಸಾಕು. ಆದರೆ ಅಭಿವೃದ್ಧಿಹೊಂದಿದ 3ಜಿ, 4ಜಿ ಯಂತಹ ಮೌಲ್ಯಯುತ ಸೇವೆಗಳ ಪ್ರಸರಣೆಗೆ 900 ಮೆ.ಹ ಫ್ರಿಕ್ವೆನ್ಸಿಯ ಬ್ಯಾಂಡ್ ನಿಷ್ಪ್ರಯೋಜಕವಾಗುತ್ತದೆ. ಅದಕ್ಕೆ 2100ಕ್ಕಿಂತ ಹೆಚ್ಚಿನ ಫ್ರಿಕ್ವೆನ್ಸಿಯ ಬ್ಯಾಂಡ್ ಅಗತ್ಯವಿರುತ್ತದೆ.

ಬೆಂಗಳೂರು, ಮುಂಬಯಿ, ದೆಹಲಿಯಂತಹ ಮಹಾನಗರಗಳಲ್ಲಿ ಅಗತ್ಯ ಟವರ್‍ಗಳ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು 'ಟವರ್‍ಪೂಲಿಂಗ್' ಒಂದು ಉತ್ತಮ ಮತ್ತು ಲಾಭದಾಯಕ ಯೋಜನೆಯಾಗಬಲ್ಲದು. ಆದರೆ ಮೊಬೈಲ್ ಕಂಪೆನಿಗಳು ಭಿನ್ನ ಕಾರಣಗಳಿಂದ ತಮ್ಮ ಟವರ್‍ಗಳನ್ನು ಇತರ ಕಂಪೆನಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಬೆಳೆಯುತ್ತಿರುವ ನಗರಗಳಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. ಪರಿಣಾಮ ಕಂಪೆನಿಗಳಿಗೂ, ಪರಿಸರಕ್ಕೂ ನಷ್ಟವುಂಟಾಗುತ್ತದೆ. ಟವರ್‍ಗಳು ನಗರಾಡಳಿತದ ವ್ಯಾಪ್ತಿಗೆ ಬರುತ್ತದೆ. ಟವರ್‍ಗಳ ನಿರ್ವಹಣೆಗೆ ಏಕರೂಪಿ ನಿಯಮವಿಲ್ಲ. ಟವರ್‍ಗಳ ಕೊರತೆಗೆ ಮತ್ತೊಂದು ಸಾಂಸ್ಥಿಕ ಕಾರಣ.

ಇರುವ 13ರಲ್ಲಿ ಅರ್ಧದಷ್ಟು ಕಂಪೆನಿಗಳು ನಷ್ಟದಲ್ಲಿವೆ. ಈ ಕಂಪೆನಿಗಳು ತರಂಗಾಂತರಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಅಂದಹಾಗೆ ತರಂಗಾಂತರಗಳ ಹರಾಜು ಅದರ ಬೆಲೆಯನ್ನು ತುಟ್ಟಿಯಾಗಿಸಿದೆ. ಸಾಲದಲ್ಲಿರುವ ಕಂಪೆನಿಗಳು ಆ ನಷ್ಟವನ್ನು ಹೇಗಾದರೂ ಮಾಡಿ ಗ್ರಾಹಕರಿಂದಲೇ ಪಡೆಯಲಿವೆ.

ಸರಕಾರದ ನಿಯಂತ್ರಣದಲ್ಲಿರುವ ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್‍ಎಲ್ ಕಂಪೆನಿಗಳು ಈ ಸಮಸ್ಯೆಗೆ ನಿಯಂತ್ರಣದ ಅಗತ್ಯವಿಲ್ಲ. ಬದಲಾಗಿ ಮೊಬೈಲ್ ಕಂಪೆನಿಗಳೇ ತಮ್ಮ ತಪ್ಪಿನ ಪರಿಹಾರವನ್ನು ಭರಿಸಲಿ, ಇಲ್ಲವಾದಲ್ಲಿ ಚಂದಾದಾರರೇ ಅವರನ್ನು ಪೋರ್ಟಿಂಗ್ ಮೂಲಕ ನಿರಾಕರಿಸುತ್ತಾರೆ. ಅದಕ್ಕಾಗಿ ಹೊಸ ನಿಯಂತ್ರಣ ಕಾನೂನಿನ ಅಗತ್ಯವಿಲ್ಲ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿವೆ. ಇದಕ್ಕೆ ಪೂರಕವೆಂಬಂತೆ ಟೆಲಿನಾರ್ ಆಗಿ ಮಾರ್ಪಾಟಾಗಿರುವ ಯುನಿನಾರ್ ತಮ್ಮ ಚಂದಾದಾರರಿಗೆ ಕರೆ ಕಡಿತದ ನಷ್ಟವನ್ನು ಉಚಿತ ನಿಮಿಷದ ಮೂಲಕ ಭರಿಸುವುದಾಗಿ ತಿಳಿಸಿದೆ. ಸಿಗಬಹುದಾದ ಉಚಿತ ನಿಮಿಷಕ್ಕಾಗಿ ಆಗುವ ಅನಾನುಕೂಲವನ್ನು ಒಪ್ಪಿಕೊಳ್ಳಲು ಪ್ರಜ್ಞಾವಂತರು ಬಯಸುವುದಿಲ್ಲ.

ಆದರೆ ಟ್ರಾಯ್ ಮತ್ತು ಕೇಂದ್ರ ಸರಕಾರ ಮಾತ್ರ ಈ ಸಮಸ್ಯೆಯನ್ನು ಕೊನೆಗಾಣಿಸಲು ಕ್ಷಿಪ್ರವಾಗಿ ಯೋಜನೆಯೊಂದನ್ನು ನಿರೂಪಿಸುವುದರಲ್ಲಿದೆ. ಆದರೆ ಟೆಲಿಕಾಂ ಕಂಪೆನಿಗಳು ಬಯಸುತ್ತಿರುವ ಮೂಲಭೂತ ಸಂಗತಿಗಳಿಗೆ ಸಾಂಸ್ಥಿಕ ಪರಿಹಾರವನ್ನು ರೂಪಿಸದ ಹೊರತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗುವುದಿಲ್ಲ. ಹಾಗಾದಾಗ ಮಾತ್ರ ಮೊಬೈಲ್ ಕಂಪೆನಿಗಳ ಎಲ್ಲಾ ರೀತಿಯ ಉಪಟಳಕ್ಕೂ ಕೊನೆ ಹಾಡಲು ಸಾಧ್ಯ.

ಮುಖ್ಯವಾಗಿ ಕೇಂದ್ರ ಸರಕಾರ ತ್ವರಿತವಾಗಿ ಕರೆ ಕಡಿತದ ರಾಷ್ಟ್ರೀಯ ಡಾಟಾ ಬೇಸ್ ನಿರ್ಮಿಸಬೇಕು. ಇದು ದೋಷಪೂರ್ಣ ಕಂಪೆನಿಗಳ ಲೋಪಗಳನ್ನು ಸರಿಪಡಿಸಿಕೊಳ್ಳಲು ಒತ್ತಾಯಿಸಿದಂತಾಗುತ್ತದೆ. ರಕ್ಷಣಾ ಸೇವೆಯಲ್ಲಿರುವ ತರಾಂತರಗಳನ್ನು ಸಾರ್ವಜನಿಕ ಸೇವೆಗೆ ತೆರವುಗೊಳಿಸಬೇಕು. ಕಂಪೆನಿಗಳಿಗೆ ತರಂಗಾಂತರಗಳನ್ನು ಪರಸ್ಸರ ಹಂಚಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ಟೆಲಿಕಾಂ ಕಂಪೆನಿಗಳಿಗೂ ಲಾಭ, ಸರಕಾರದ ಬೊಕ್ಕಸಕ್ಕೂ ನಷ್ಟವಿಲ್ಲ, ಗ್ರಾಹಕರ ಜೇಬಿಗೂ ಕತ್ತರಿ ಬೀಳುವುದಿಲ್ಲ. ಎಲ್ಲಾ ರಾಜ್ಯ ಸರಕಾರಗಳ ಮೂಲಕ ಮೊಬೈಲ್ ಟವರ್‍ಗಳ ನಿರ್ವಹಣೆಗೆ ಏಕರೂಪಿ ನಿಯಮವನ್ನು ಜಾರಿಗೊಳಿಸಬೇಕು. ಕಡಿಮೆಯಿರುವ ಟವರ್‍ಗಳು ಸರಕಾರಿ ಜಾಗಗಳಲ್ಲಿ ಸ್ಥಾಪಿಸಲು ಅವಕಾಶವನ್ನು ನೀಡಬೇಕು. ಆಗಲೇ ಟೆಲಿಕಾಂ ಕಂಪೆನಿಗಳನ್ನೂ ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಾಧ್ಯ.-ಶ್ರೇಯಾಂಕ ಎಸ್ ರಾನಡೆ.

INDIA world's largest RICE exporter in 2015. Yet need to worry in 2016

Despite the two consecutive years of drought, there is something to cheer for agricultural sector. According to Bangkok based Thai Rice Exporters Association, India is the world's largest rice exporter in 2015. By exporting 10.23 million tonnes of rice india has overtaken Thailand. Vietnam is the third in exports only after Thailand. While China remained the number 1 importer of rice.

This is a great news for Indian economy as well as farmers, But there is something to worry and hurry(in Government's policy and action plan). According to United Nations body FAO(Food And Agricultural Organisation) India's rice exports may decline by 20% in 2016 possibly due to tight supplies and growing domestic demand.

Diversifying the food basket and food production is a great concern, However intensifying the already headed rice production is the immediate need of the time. As green revolution pushed the rice to become staple crop and food sidelining the previously existed. Farmers are depending more and more on rice production. Both the failure in the production as well as fall in global commodity prices will certainly lead to a worse effect in the longer run. Irrespective of monsoon government of the day must step in to devoid the possible decline.

Rice so good with surprise.

...
Dhanyavaad.