Monday, February 22, 2016

Dream of Clean Delhi and Danger to Clean India. ಪೊರಕೆ ಪಕ್ಷದ ಸರಕಾರವೂ.. ಸ್ವಚ್ಛ ದೆಹಲಿ ಕನಸೂ...

Dream of Clean Delhi and Danger to Clean India.

ಪೊರಕೆ ಪಕ್ಷದ ಸರಕಾರವೂ.. ಸ್ವಚ್ಛ ದೆಹಲಿ ಕನಸೂ...


Solid waste management, Garbage disposal and redressing the grievances of poorly paid, hard working Safai Karmacharis is a big problem in front of New Delhi. Being highly populous NCR region faces major issues like improper management by Municipal authorities, fund crunch, and strong support from the public. If every metropolitan city starts facing such trouble worse would be the condition of residents, city stature and more worse will be the basic purpose of Swacch Bharath Mission and Smart Cities project. Even large thrust city like Bengaluru faces similar challenges of waste management, Delhi's situation is more complex due to intervention of multiple authorities, even after having proper system to revert the waste it is suffering from fund to pay the workers.

Every time such trouble occurs, experts feel that POLLUTER PAYS system be brought in in order to create financial security to municipalities and there by its workers on contract, daily wages.

Like last year even this year(2016) too around the same time the question of Safai Karmacharis escalated. It led to stalling of  day to day cleanliness drive, blockage of roads with garbage dumped all over, people were out of disgust due to unhygienic environment, rotten smell around and worst was psychological irritation. The was temporarily addressed when Lieutenant Governor stepped in by asking to provide the loan of 300 crores to NDMC. right now trouble is temporarily delayed. But there is a need for the permanent solution in this regard. There is a need for emergency action by all the governments from Municipalities to Central government. After all half state Delhi is the global represnative for India's global outlook!

Your contribution is a must to tackle this problem. so share your valuable ideas here and also with the state and Central governments.

Thank you,


My piece on this issue in leading kannada daily. Full text in Kannada below:
:

VIJAYAVANI. OP-ED: 05-04-2015.



ಜೀವ ಉಳಿಸಿಕೊಳ್ಳಬೇಕೇ.. ಹಾಗಿದ್ದರೆ ದೆಹಲಿ ಬಿಟ್ಟು ಬೇರೆಡೆ ಹೋಗಿ ಎಂದು ಡಾಕ್ಟರ್​ಗಳು ತಮ್ಮಲ್ಲಿಗೆ ಬರುವ ರೋಗಿಗಳಿಗೆ ಶಿಫಾರಸು ಮಾಡುವ ಸ್ಥಿತಿ ದೆಹಲಿಯದ್ದು. ಅಷ್ಟರ ಮಟ್ಟಿಗಿನ ವಾಯು ಮಾಲಿನ್ಯ ಒಂದೆಡೆ, ವೇತನ ಪಾವತಿಸದ ಪಾಲಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ರಸ್ತೆಗಳಲ್ಲೇ ಕಸ ಸುರಿಯುತ್ತಿರುವ ಪೌರ ಕಾರ್ವಿುಕರು ಇನ್ನೊಂದೆಡೆ. ರಾಷ್ಟ್ರ ರಾಜಧಾನಿಯ ಸದ್ಯದ ಪರಿಸ್ಥಿತಿಯ ಅವಲೋಕನ ಇಲ್ಲಿದೆ.


ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿರುವ ಸ್ವಚ್ಛ ಭಾರತ ಅಭಿಯಾನ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಹಲವೆಡೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ದುರದೃಷ್ಟವೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಸ್ವಚ್ಛತೆ ಮರೀಚಿಕೆಯಾಗಿಬಿಟ್ಟಿದೆ. ಇದಕ್ಕೆ ಹಲವು ಕಾರಣಗಳು. ಸದ್ಯ ದೆಹಲಿ ಸರ್ಕಾರದ ಆಡಳಿತ ಚುಕ್ಕಾಣಿ ಜನಸಾಮಾನ್ಯರ ಪಕ್ಷ ಎಂದೇ ಗುರುತಿಸಲ್ಪಟ್ಟಿರುವ 'ಆಮ್​ಆದ್ಮಿ ಪಕ್ಷ'ದ ಕೈಯಲ್ಲಿದೆ. ಈ ಬಾರಿ ಭರ್ಜರಿ ಗೆಲುವು ಅದಕ್ಕೆ ದಕ್ಕಿದ್ದು, ಸದನದಲ್ಲಿ ವಿರೋಧ ಪಕ್ಷವೇ ಇಲ್ಲ. ಉತ್ತಮ ಆಡಳಿತ ನಿರೀಕ್ಷಿಸಿದ್ದ ಜನರಿಗೆ ಆರಂಭದಲ್ಲೇ ಆಘಾತ ಕಾದಿತ್ತು. ಆಡಳಿತ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಮತ ಉಲ್ಬಣಿಸಿತು. ಈ ನಡುವೆ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಅನಾರೋಗ್ಯದ ನಿಮಿತ್ತ ಬೆಂಗಳೂರಿಗೆ ದೌಡಾಯಿಸಿದ್ದರು. ಚಿಕಿತ್ಸೆ ಪಡೆದು ದೆಹಲಿಗೆ ತೆರಳಿದವರೇ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸುವಲ್ಲಿ ತಲ್ಲೀನರಾದರು. ಒಂದಿಬ್ಬರನ್ನು ಪಕ್ಷದಿಂದ ಹೊರಹಾಕಿದರು ಕೂಡ. ಭಿನ್ನಮತ ಶಮನವಾಯಿತು ಎನ್ನುವಷ್ಟರಲ್ಲಿ ದೆಹಲಿಯ ಆಡಳಿತ ಹಿಡಿತ ತಪ್ಪಿದ್ದು ಬಹಿರಂಗವಾಗಿತ್ತು. ಪೌರಕಾರ್ವಿುಕರ ಗೋಳು: ವೇತನ ಪಾವತಿಯಾಗದ ಕಾರಣ ಹಲವು ಬಾರಿ ಮನವಿ ಸಲ್ಲಿಸಿ, ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿ ಸುಸ್ತಾಗಿದ್ದ ಪೌರಕಾರ್ವಿುಕರು ಶುಕ್ರವಾರ (ಮಾ.27)ದಿಂದ ಕೆಲಸ ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲ, ಲಾರಿಗಳಲ್ಲಿ ಸಂಗ್ರಹಿಸಿದ್ದ ಕಸಗಳನ್ನು ಎಲ್ಲೆಂದರಲ್ಲಿ ರಸ್ತೆಗಳಲ್ಲೇ ಸುರಿದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ದಿನಗೂಲಿ ನೌಕರರಿಗೆ ವೇತನ ಪಾವತಿ ಯಾಕೆ ತಡವಾಗಿದೆ ಎಂಬುದನ್ನು ಪರಿಶೀಲಿಸದ ಆಮ್​ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರ ಕೈಗೆ ಪೊರಕೆ ಕೊಟ್ಟು ಸ್ವಚ್ಛತಾ ಅಭಿಯಾನ ಆರಂಭಿಸಿದೆ! ಆಮ್​ಆದ್ಮಿ ಪಕ್ಷದ ನಾಯಕರ ನಡೆ, ಪೌರ ಕಾರ್ವಿುಕರನ್ನು ಮತ್ತಷ್ಟು ಕೆರಳಿಸಿದೆ. ''ಪಾಲಿಕೆ ಆಡಳಿತದ ಜೊತೆ ರಾಜಕೀಯ ನಡೆಸುತ್ತಿರುವ ರಾಜ್ಯ ಸರ್ಕಾರ ನಮ್ಮಂಥವರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದಾದರೂ ಏಕೆ? 'ಪೊರಕೆ' ಚಿಹ್ನೆ ಹಾಗೂ ಆಮ್​ಆದ್ಮಿ ಪಕ್ಷ ಎಂಬ ಹೆಸರಿದ್ದರೂ ಅವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ನಮ್ಮ ಹೊಟ್ಟೆಪಾಡಿನ ಬಗ್ಗೆ ಅವರಿಗೆ ಕಾಳಜಿ ಇಲ್ಲ. ನಮ್ಮ ಸಮಸ್ಯೆ ಪರಿಹರಿಸದೇ ಬಾಡಿಗೆ ಜನರನ್ನು ಕರೆತಂದು ಆಮ್​ಆದ್ಮಿ ಪಕ್ಷದ ಟೋಪಿ ಹಾಕಿಸಿ ಫೋಟೊಗೆ ಪೋಸು ಕೊಟ್ಟು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಆಮ್​ಆದ್ಮಿಗಳದ್ದೇ ಸರ್ಕಾರ ಎನ್ನುತ್ತಿರುವವರು ಈಗ ಎಲ್ಲಿದ್ದಾರೆ?'' ಎಂದು ಪೌರಕಾರ್ವಿುಕ ನಾಯಕರು ಪ್ರಶ್ನಿಸತೊಡಗಿದ್ದಾರೆ. ಸ್ವಚ್ಛತೆಯಲ್ಲೂ ರಾಜಕೀಯ!: ಅಧಿಕಾರ ಚುಕ್ಕಾಣಿ ಹಿಡಿದ ಅಂದಿನಿಂದಲೇ ದೆಹಲಿಯನ್ನು ಪ್ರತ್ಯೇಕ ರಾಜ್ಯವಾಗಿ ಘೊಷಿಸಬೇಕು ಎಂಬ ಬೇಡಿಕೆಯೊಂದಿಗೆ ಕೇಂದ್ರ ಸರ್ಕಾರದ ಜೊತೆ ಹಗ್ಗಜಗ್ಗಾಟ ಆರಂಭಿಸಿತ್ತು ಕೇಜ್ರಿವಾಲ್ ಸರ್ಕಾರ. ಇದೀಗ ಪ್ರತಿಯೊಂದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿರುವ ರಾಜ್ಯ ಸರ್ಕಾರ, ಪಾಲಿಕೆಯ ಸಮಸ್ಯೆಗಳನ್ನು ನಿರ್ಲಕ್ಷಿಸತೊಡಗಿದೆ ಎಂಬ ಆರೋಪ ವ್ಯಾಪಕವಾಗಿದೆ. ದೆಹಲಿ ಪಾಲಿಕೆ ಮೊದಲಿನಿಂದಲೂ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು, ಅದನ್ನು ಪರಿಹರಿಸುವತ್ತ ರಾಜ್ಯ ಸರ್ಕಾರ ಗಮನಹರಿಸಿಲ್ಲ. ಈ ವಿಷಯವಾಗಿ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆ ಸಂದರ್ಭದಲ್ಲಿ, ಮುಖ್ಯಮಂತ್ರಿ ಕೇಜ್ರಿವಾಲ್ 'ಪಾಲಿಕೆಗಳ ಆಡಳಿತ ನೋಡಿಕೊಳ್ಳಲಾಗದಿದ್ದರೆ ಅವುಗಳನ್ನು ರಾಜ್ಯ ಸರ್ಕಾರಕ್ಕೆ ವಹಿಸಿಕೊಡಿ' ಎಂಬ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯದಲ್ಲಿ ಉಭಯ ಪಕ್ಷಗಳ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಹೇಳಿಕೆ ಪೂರಕವಾಗಿದೆ. ಇನ್ನೊಂದೆಡೆ, ಖರ್ಚು ವೆಚ್ಚ ಕಡಿತಗೊಳಿಸುವ ನೆಪದಲ್ಲಿ ಈ ಬಾರಿ ಕಳೆದ ಬಾರಿಗಿಂತಲೂ ಕಡಿಮೆ ಹಣವನ್ನು ಈ ಪಾಲಿಕೆಗಳಿಗೆ ಕೇಜ್ರಿವಾಲ್ ಸರ್ಕಾರ ಮೀಸಲಿಟ್ಟಿದೆ. ಇವೆಲ್ಲವೂ ಈಗ ದೆಹಲಿಯ ರಾಜಕೀಯ ಚಾವಡಿಯ ಚರ್ಚೆಯ ವಿಷಯ. *** ಉಸಿರಾಡಿದ್ರೆ ಅನಾರೋಗ್ಯ ಖಚಿತ... ದೆಹಲಿಯಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟ ತಲುಪಿದ್ದು, ಉಸಿರಾಡಿದ್ರೆ ಅನಾರೋಗ್ಯದ ಭೀತಿ ಎದುರಾಗಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಮ್ಮಿಗಾಗಿ ಚಿಕಿತ್ಸೆ ಪಡೆದರು. 'ದೆಹಲಿಯ ವಾಯು ಮಾಲಿನ್ಯವೇ ಕೇಜ್ರಿವಾಲ್ ಅನಾರೋಗ್ಯಕ್ಕೆ ಕಾರಣ' ಎಂಬುದನ್ನು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದರು. ದೆಹಲಿಯಲ್ಲಿ ಜನಸಾಮಾನ್ಯರಿಗೂ ಇಂತಹ ತೊಂದರೆ ಕಾಡುತ್ತಿದೆ. ಶ್ವಾಸಕೋಶದ ತೊಂದರೆ, ಅಲರ್ಜಿ ಮೊದಲಾದವುಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಎಡತಾಕುತ್ತಿರುವವರ ಸಂಖ್ಯೆ ಕಳೆದ ಆರು ವರ್ಷಗಳಲ್ಲಿ ಶೇಕಡ 300ರಷ್ಟು ಹೆಚ್ಚಾಗಿದೆ. ಈ ವಿಷಯವಾಗಿ ಸ್ಥಳೀಯ ಮಾಧ್ಯಮಗಳು ವಿವರವಾದ ಸಂಶೋಧನಾ ವರದಿಗಳನ್ನು ಪ್ರಕಟಿಸತೊಡಗಿವೆ. ಆದರೂ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಯಾಕೆ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸುಪ್ರೀಂ ಕೋರ್ಟ್ 1998ರಲ್ಲಿ ದೆಹಲಿಯಲ್ಲಿ ಸಿಎನ್​ಜಿ ಚಾಲಿತ ಸಾರ್ವಜನಿಕ ಸಾರಿಗೆ ಆರಂಭದ ಕುರಿತು ನೀಡಿದ ತೀರ್ಪ ಬಹಳ ಮಹತ್ವದ್ದಾಗಿದೆ. 1990ರಿಂದೀಚೆಗೆ ಇಲ್ಲಿತನಕ ನಡೆದ 15 ಪ್ರಮುಖ ಕೇಸ್ ಸ್ಟಡಿಗಳು ದೆಹಲಿಯ ವಾಯು ಮಾಲಿನ್ಯದ ಗಂಭೀರತೆಯನ್ನು ಸಾರಿ ಹೇಳಿವೆ. 1997ರಲ್ಲಿ ಅರ್ಥಶಾಸ್ತ್ರಜ್ಞ ಡಾ.ಮೌರೀನ್ ಕ್ರೋಪರ್ ಅವರು ಸಿದ್ಧಪಡಿಸಿದ 'ವಾಯು ಮಾಲಿನ್ಯದಿಂದಾಗಿ ಆಗುತ್ತಿರುವ ಸಾವುಗಳು' ವರದಿ, 1997-98ರ ಅವಧಿಯಲ್ಲಿ ಏಮ್ಸ್​ನಲ್ಲಿ ದಾಖಲಾದ ರೋಗಿಗಳ ಆರೋಗ್ಯದಲ್ಲಿ ಕಂಡು ಅಂಶಗಳನ್ನು ವಿಶ್ಲೇಷಿಸಿ ಸಿದ್ಧಪಡಿಸಿದ ವರದಿ, 2000ದಲ್ಲಿ ಹಾರ್ವರ್ಡ್ ವಿವಿಯ ಪ್ರಾಜೆಕ್ಟ್​ಗಾಗಿ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ಸೆಂಟರ್ ಫಾರ್ ಒಕ್ಯುಪೇಶನಲ್ ಆಂಡ್ ಎನ್ವಿರಾನ್​ವೆುಂಟ್ ಮೆಡಿಸಿನ್ ತಂಡ ಸಿದ್ಧಪಡಿಸಿದ ವರದಿಗಳು ಅವುಗಳಲ್ಲಿ ಪ್ರಮುಖವಾದವು. *** ಪ್ರಜಾಪ್ರಭುತ್ವದ ವ್ಯಂಗ್ಯ ಎಂದರೆ ಇದೇ ಇರಬೇಕು! ದೆಹಲಿಯ ಸಫಾಯಿ ಕರ್ಮಚಾರಿಗಳ ಪಾಲಿಗೆ 'ಅಚ್ಛೇ ದಿನ್' ಮತ್ತು 'ಆಮ್​ಆದ್ಮಿ ಸರ್ಕಾರ' ದೂರಗಗನವಾಗಿ ಪರಿಣಮಿಸಿದ ಕಥೆಯಿದು. ನವದೆಹಲಿಯ ಮೂರು (ಉತ್ತರ, ಪೂರ್ವ ಮತ್ತು ಪಶ್ಚಿಮ ದೆಹಲಿ) ಮುನಿಸಿಪಲ್ ಕಾಪೋರೇಷನ್​ಗಳು ವೇತನ ಪಾವತಿಸದ ಪರಿಣಾಮವಾಗಿ ಸಫಾಯಿ ಕರ್ಮಚಾರಿಗಳು ಹಮ್ಮಿಕೊಂಡ ಮುಷ್ಕರ ಮುಂದುವರಿದಿದ್ದರ ಪರಿಣಾಮ, ದೆಹಲಿಯ ಮೂಲೆಮೂಲೆಗಳಲ್ಲಿ ಕಸದ ರಾಶಿಯದ್ದೇ ಸಾಮ್ರಾಜ್ಯವಾಗಿತ್ತು ಎಂಬುದಕ್ಕೆ ಇಲ್ಲಿನ ಚಿತ್ರಗಳೇ ಸಾಕ್ಷಿಯಾಗಬಲ್ಲವು. ಭಾರತದ ರಾಜಧಾನಿ ಎಂಬ ಹೆಗ್ಗಳಿಕೆಯ ದೆಹಲಿಯ ಚಿತ್ರಣವೇ ಇಷ್ಟು ಕೊಳಕಾಗಿರಬಹುದೆಂಬುದು ಊಹೆಗೂ ನಿಲುಕದ ಸಂಗತಿ. 'ಗಾರ್ಡನ್ ಸಿಟಿ' (ಉದ್ಯಾನ ನಗರಿ) ಎಂಬ ಹಣೆಪಟ್ಟಿ ಹೊತ್ತಿದ್ದ ಭಾರತದ ಮಹಾನಗರವೊಂದು ಕಸನಿರ್ವಹಣೆಯಲ್ಲಿ ಆಡಳಿತ ವ್ಯವಸ್ಥೆ ತೋರಿದ ವೈಫಲ್ಯದಿಂದಾಗಿ, 'ಗಾರ್ಬೆಜ್ ಸಿಟಿ' (ಕಸದ ನಗರಿ) ಎನ್ನಿಸಿಕೊಂಡಾಗಲೂ ನಾವೆಲ್ಲ ತಲೆತಗ್ಗಿಸುವಂತಾಗಿತ್ತು. ಈಗ ದೆಹಲಿಯ ಸರದಿ. ಇದರ ಹಿಂದಿರುವ ಕಾರಣಗಳು ಬೇರೆಯೇ ಇರಬಹುದು, ಆದರೆ ಅಂತಿಮ ಪರಿಣಾಮ ಮಾತ್ರ ಅದೇ! ಆದರೆ ಸದ್ರಿ ಮುನಿಸಿಪಲ್ ಕಾಪೋರೇಷನ್​ಗಳ ಆಯುಕ್ತ ಮಹಾಶಯರುಗಳು ಹೇಳುವ ಪ್ರಕಾರ ಕಸದ ಗುಡ್ಡೆಗಳನ್ನೆಲ್ಲಾ ತೆಗೆಯಲಾಗಿದೆ ಮತ್ತು ಕರ್ಮಚಾರಿಗಳ ಸಂಬಳವನ್ನು ಪಾವತಿಸಲಾಗಿದೆ! ಆದರೆ, ಸಫಾಯಿ ಕರ್ಮಚಾರಿಗಳಿಗೆ ವೇತನ ಪಾವತಿಸಲೂ ಆಗದಷ್ಟು ಇಲ್ಲಿನ ಪಾಲಿಕೆಗಳು ಹಣದ ಕೊರತೆ/ಬಿಕ್ಕಟ್ಟು ಎದುರಿಸುತ್ತಿವೆ ಎಂಬುದು ಸತ್ಯಸಂಗತಿ. ಕಾರಣ? ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಇತ್ತೀಚಿನ ಬಜೆಟ್​ನಲ್ಲಿ, ಬಿಜೆಪಿ ಆಳ್ವಿಕೆಯ ನವದೆಹಲಿ ಮುನಿಸಿಪಲ್ ಕಾಪೋರೇಷನ್​ಗಳಿಗೆ ಮೀಸಲಾದ ಹಣಹಂಚಿಕೆಯ ಪ್ರಮಾಣವನ್ನು ತಗ್ಗಿಸಿ (ಈ ಮುಂಚೆ ಕೇಂದ್ರದಿಂದ ಬರುತ್ತಿದ್ದ 2477 ಕೋಟಿ ರೂ.ನಷ್ಟು ಹಣವನ್ನು 2014-15ರ ವರ್ಷದಲ್ಲಿ 2415 ಕೋಟಿ ರೂ.ಗೆ ತಗ್ಗಿಸಿದ್ದಾರೆ ಅರ್ಥಸಚಿವ ಅರುಣ್ ಜೇಟ್ಲಿ!), ಹೆಚ್ಚಿನ ಹಣ ಬೇಕೆಂದಲ್ಲಿ ಕೇಂದ್ರವನ್ನು (ನಗರಾಭಿವೃದ್ಧಿ ಖಾತೆಯನ್ನು) ಕೇಳಿ ಎನ್ನುತ್ತಿದೆ. ವಿಭಿನ್ನ ಸಿದ್ಧಾಂತಗಳ ಎರಡು ಆಳುಗ ವ್ಯವಸ್ಥೆಗಳ ನಡುವೆ ಸಿಕ್ಕಿಕೊಂಡು ಹೈರಾಣಾಗುವುದು, ಕಷ್ಟ ಅನುಭವಿಸುವುದು ನಾಗರಿಕರು ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಪ್ರಜಾಪ್ರಭುತ್ವದ ವ್ಯಂಗ್ಯ ಎಂದರೆ ಇದೇ ಇರಬೇಕು!
*** ಬಿಕ್ಕಟ್ಟಿಗೆ ಕಾರಣ:
* ದೆಹಲಿಯ ಮೂರು ಪಾಲಿಕೆಗಳಲ್ಲಿ ಬಿಜೆಪಿ ಆಳ್ವಿಕೆ, ದೆಹಲಿ ರಾಜ್ಯದ ಚುಕ್ಕಾಣಿ ಎಎಪಿ ಕೈಯಲ್ಲಿದೆ
* ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಲಿಕೆಗಳು, ಓಬಿರಾಯನ ಕಾಲದ ಸ್ಥಿರಾಸ್ತಿ ತೆರಿಗೆ
* ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ , ಹೊಸ ತೆರಿಗೆಗಳಿಲ್ಲದೆ ಆದಾಯ ಖೋತಾ
* ಎಎಪಿ- ಬಿಜೆಪಿ ರಾಜಕೀಯ ತಿಕ್ಕಾಟ.


ಶ್ರೇಯಾಂಕ ಎಸ್. ರಾನಡೆ, ಹೊಸದೆಹಲಿ.
04-04-2015.

No comments:

Post a Comment