Thursday, February 18, 2016

Soon world's Pharma nation India may not be so. ವಿಶ್ವದ ಔಷಧಾಲಯ ಆಗುತ್ತಿದೆ ಆಮದಾಲಯ.


ವಿಶ್ವದ ಔಷಧಾಲಯ ಆಗುತ್ತಿದೆ ಆಮದಾಲಯ...!!!


               ಹೆಪಟೈಟಿಸ್ ಸಿ ವಿಶ್ವದ ಮಾರಕ ರೋಗಗಳಲ್ಲಿ ಒಂದು. ಈ ಮಾರಕ ರೋಗದಿಂದ ವರ್ಷಕ್ಕೆ ಕನಿಷ್ಟ 5 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಅನೇಕರು ಕಡಿಮೆ ಬೆಲೆಗೆ ಔಷಧಿ ದೊರೆಯದ ಕಾರಣವೇ ಅಸುನೀಗುತ್ತಿದ್ದಾರೆ. ಈ ರೋಗಕ್ಕೆ ಅತ್ಯಂತ ಪರಿಣಾಮಕಾರಿ ಔಷಧಿ ಜಿಲೆಡ್ ಸೈನ್ಸ್ ಕಂಪೆನಿಯ ಪೇಟೆಂಟ್ ಆಗಿರುವ "ಸೊವಾಲ್ಡಿ". ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದದ ದೇಶಗಳ ಪಾಲಿಗೆ ಈ ರೋಗದ ಔಷಧಿ ಸಿಂಹಸ್ವಪ್ನ. ಇದು ಈ ರೋಗವೊಂದರ ಕಥೆಯಲ್ಲ, ಕ್ಯಾನ್ಸರ್, ಏಡ್ಸ್, ಹೆಪ್ ಬಿ ಇಂತಹ ಅನೇಕ ಮಾರಣಾಂತಿಕ ರೋಗಗಳದ್ದೂ ಅದೇ ಕಥೆ. ಔಷಧಗಳನ್ನು ಕಂಡುಹಿಡಿಯಲಾಗಿದ್ದರೂ ಲಾಭದ ಲಾಲಸೆಯಿಂದ ಅವುಗಳ ಬೆಲೆಯನ್ನು ಏರಿಸುವ ಪೇಟೆಂಟ್ ಹೊಂದಿರುವ ಔಷಧ ತಯಾರಿಕಾ (ಫಾರ್ಮಸ್ಯುಟಿಕಲ್) ಕಂಪೆನಿಗಳು.

ಅದು 2005, ವಲ್ಡ್ ಟ್ರೇಡ್ ಆರ್ಗನೈಜೇಶನ್ (ಡಬ್ಲೂ.ಟಿ.ಒ.) ತನ್ನ ಸದಸ್ಯ ರಾಷ್ಟ್ರಗಳು ಅದರಲ್ಲೂ ತೃತಿಯ ಜಗತ್ತಿನ ರಾಷ್ಟ್ರಗಳು ಕಡ್ಡಾಯವಾಗಿ ಐ.ಪಿ.ಆರ್. ಅಥವಾ ಬೌದ್ಧಿಕ ಹಕ್ಕುಗಳನ್ನು ಪಾಲಿಸಬೇಕೆಂದು ತಿಳಿಸಿದಾಗ ಅದನ್ನು ಭಾರತ ವಿಶ್ವಮಟ್ಟದಲ್ಲಿ ಪ್ರಶ್ನಿಸಿತ್ತು. ಡಬ್ಲೂ.ಟಿ.ಒ. ನೀತಿ ಶ್ರೀಮಂತ ದೇಶಗಳತ್ತ ವಾಲಿರುದನ್ನು ಸಾಬೀತುಪಡಿಸಿ ಅದರ ಆದೇಶವನ್ನು ಒಪ್ಪಿಕೊಳ್ಳಲಸಾಧ್ಯವೆಂದು ನಿರಾಕರಿಸಿತು. ಜನರಿಕ್ ಔಷಧಿ ನೀತಿ ಪ್ರತಿಪಾದಿಸಿ, ಸಮಥರ್ಿಸಿ ಭಾರತ ಮಾತ್ರವಲ್ಲದೆ ಇತರ ಅಭಿವೃದ್ಧಿಶೀಲ ದೇಶಗಳಿಗೂ ಪೇಟೆಂಟ್ನ ಹಂಗಿಲ್ಲದಂತೆ, ಕಡಿಮೆ ಬೆಲೆಗೆ ಸುಲಭವಾಗಿ ಔಷಧಿಗಳನ್ನು ಪೂರೈಸುವಲ್ಲಿ ಬಹುಮುಖ್ಯ ಪಾತ್ರವಹಿಸಿತು. ಭಾರತದ ಕ್ರಮವನ್ನೇ ಇತರ ಬಡ, ಮಧ್ಯಮ ಆದಾಯದ ದೇಶಗಳು ಪಾಲಿಸದವು. ಇದು ಶ್ರೀಮಂತ ಕಂಪೆನಿಗಳಿಗೆ ಎಂದೂ ಮರೆಯದ ಸೋಲಾಯಿತು. ಹತಾಶ ಕಂಪೆನಿಗಳ ಲಾಭದ ಲಾಲಸೆ ಇಮ್ಮಡಿಯಾಯಿತು. ಕ್ಯಾನ್ಸರ್ ಡ್ರಗ್ ನೋವಾಟರ್ಿಸ್, ಬೇಯರ್ ಕೇಸ್ಗಳಲ್ಲಿ ನ್ಯಾಯಾಲಯ ನೆಲದ ನ್ಯಾಯವನ್ನೇ ಎತ್ತಿ ಹಿಡಿದವು. ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಭಾರತಕ್ಕೆ ಬೆಂಬಲ ಸೂಚಿಸದಿದ್ದರೂ ವಿಶ್ವದ ಜನಪರ ವೇದಿಕೆಗಳಲ್ಲಿ ಭಾರತದ ಕ್ರಮಕ್ಕೆ ಬೆಂಬಲ ವ್ಯಕ್ತವಾಯಿತು. ಬೆಂಬಲಗಳು ಕೇವಲ ವೇದಿಕೆಗಳಿಗೆ ಸೀಮಿತವಾಗಿದ್ದು ಬಿಟ್ಟರೆ ನೆಲದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಭಾರತ ಇಂದಿಗೂ ತನ್ನ ಕ್ರಾಂತಿಕಾರಿ ಕ್ರಮಗಳಿಗಾಗಿ, ತನ್ನ ನಿಧರ್ಾರಕ್ಕಾಗಿ, ನಿಲುವಿಗಾಗಿ ಇಂದಿಗೂ ಹೋರಾಡುತ್ತಿದೆ.

ಆದರೆ ಭಾರತದ ದಿಟ್ಟ ಹೆಜ್ಜೆಯಿಂದ ಇಂದು ಪೇಟೆಂಟ್ ರಹಿತವಾಗಿರುವ ಜನರಿಕ್ ಔಷಧಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಕಾರಣವೇ ಜನರಿಗೆ ಸುಲಭವಾಗಿ, ಕಡಿಮೆ ಬೆಲೆಗೆ ಔಷಧಿಗಳು ದೊರೆಯುತ್ತಿವೆ. ಇದೇ ಕಾರಣದಿಂದ ಅಮೇರಿಕಾ ಮತ್ತು ಪಾಶ್ಚಾತ್ಯ ಯುರೋಪಿನ ದೇಶಗಳು ಬೌದ್ಧಿಕ ಹಕ್ಕಿನ(ಇಂಟೆಲೆಕ್ಚುವಲ್ ಪಾರ್ಪಟಿ ರೈಟ್ಸ್) ಕುರಿತಾಗಿ ಭಾರತದೊಂದಿಗೆ ತಗಾದೆ ತೆಗೆಯುತ್ತಿರುತ್ತವೆ. ಅಮೇರಿಕಾದೊಂದಿಗಿನ ದ್ವಿಪಕ್ಷೀಯ ಬಾಂಧವ್ಯಕ್ಕೂ ಅಡ್ಡಿಯಾಗಿರುವುದು ಪರಮಾಣು ನೀತಿಗಿಂತಲೂ ಮುಖ್ಯವಾಗಿ ಬೌದ್ಧಿಕ ಹಕ್ಕಿನ ತೊಡಕುಗಳು. ಅಮೇರಿಕಾಕ್ಕೆ ಜನರಿಕ್ ಔಷಧಿಗಳ ಬಗೆಗೆ ಒಲವಿಲ್ಲ. ಪೇಟೆಂಟ್ ನೀತಿಯ ಉಲ್ಲಂಘನೆಯಾಗುತ್ತಿದೆ ಎಂಬುದು ಅದರ ವಾದ. ಆದರೆ ಅಭಿವೃದ್ಧಿಶೀಲ ದೇಶಗಳ ಸಾಮಾನ್ಯ ಜನರ ಕಾಳಜಿ ಅದಕ್ಕಿಲ್ಲ. ಇದರ ಹಿಂದೆ ಅಡಗಿರುವುದು ಶ್ರೀಮಂತ ಮತ್ತು ಬೃಹತ್ ಫಾಮರ್ಾ ಕಂಪೆನಿಗಳ ಲಾಬಿ. ಇದು ಗನ್ ಲಾಬಿಗಿಂತಲೂ ಹೆಚ್ಚು ಪರಿಣಾಮಕಾರಿ. ಆದರೆ ಭಾರತದ ಈ ಉದಾರ ನೀತಿಯ ದಿಟ್ಟ ಕಾರಣದಿಂದ ಮಾತ್ರವೇ ಇಂದು ಕೋಟ್ಯಾಂತರ ಜನರು ಆರೋಗ್ಯದಿಂದಿರಲು, ಅಷ್ಟೇ ಏಕೆ ಜೀವಂತವಾಗಿರಲು ಸಾಧ್ಯವಾಗಿದೆ! ಇದು ಅಚ್ಚರಿಗೊಳ್ಳುವುದಕ್ಕಿಂತ ಸಂತಸಪಡಬೇಕಾದ ಸಂಗಂತಿ. ಭಾರತದ ಇನ್ನೂ ಸ್ಪಷ್ಟವಾಗಿ ರೂಪುಗೊಳ್ಳದ ಆದರೆ ಕಾನೂನುಗಳಿಂದಲೇ ಸಮಗ್ರವಾಗಿ ಪ್ರಾಪ್ತವಾಗಿರುವ ಬೌದ್ಧಿಕ ಹಕ್ಕಿನ ನೀತಿಯ ಪ್ರಕಾರ ಜೀವದಯೆ ಮತ್ತು ಜೀವಪರತೆಯ ದೃಷ್ಟಿಯಿಂದ ಈಗಾಗಲೇ ಅನ್ವೇಶಿಸಲ್ಪಟ್ಟಿರುವ ಮಾರಕ ರೋಗಗಳಿಗೆ ದೇಶಿಯವಾಗಿ ನಿಮರ್ಿಸಿದ ಕಡಿಮೆ ಮೌಲ್ಯದ ಔಷಧಿಗಳ ತಯಾರಿಕೆ ಮತ್ತು ದೇಶದೊಳಗೆ ಅವುಗಳ ವಿತರಣೆ ಸಾಧ್ಯವಾಗಿದೆ. ಇನ್ನೂ ಅಗತ್ಯವೆನಿಸಿದಾಗ ಹೀಗೆ ತಯಾರಿಸಿದ ಔಷಧಿಗಳನ್ನು ತೀರಾ ಹಿಂದುಳಿದ ಬಡ ರಾಷ್ಟ್ರಗಳಿಗೆ ಪೂರೈಕೆ ಆದರೆ ಲಾಭದ ಉದ್ದೇಶದಿಂದ ಯಾವುದೇ ಕಾರಣಕ್ಕೂ ಇತರ ದೇಶಗಳಿಗೆ ರಫ್ತು ಮಾಡುವಂತಿಲ್ಲ. ಆ ಕಾರಣದಿಂದಲೇ ಭಾರತವನ್ನು ಹೆಮ್ಮೆಯಿಂದ 'ವಿಶ್ವದ ಔಷಧಾಲಯ'(ವಲ್ಡ್ ಫಾಮರ್ೆಸಿ) ಎಂದು ಕರೆಯಲಾಗುತ್ತದೆ. ಈ ಕಾರ್ಯವನ್ನು ಮುಂದುವರೆದ, ಶ್ರೀಮಂತ ರಾಷ್ಟ್ರಗಳು ಮಾಡಬೇಕಿತ್ತು ಆದರೆ ಅನಿವಾರ್ಯತೆಗೆ ತಕ್ಕಂತೆ ಭಾರತವೇ ತನ್ನ ಬೌದ್ಧಿಕ ಹಕ್ಕುಗಳ ನೀತಿಯಲ್ಲಿ ಈ ಬಗೆಯ ಬದಲಾವಣೆಯನ್ನು ಮಾಡಿಕೊಂಡಿದ್ದು ಸ್ವಾಗತಾರ್ಹ.
ಇತ್ತೀಚೆಗೆ ಭಾರತದ 11 ಜನರಿಕ್ ಡ್ರಗ್ ಕಂಪೆನಿಗಳು ಜಿಲೆಡ್ ಸೈನ್ಸ್ ಕಂಪೆನಿಯೊಂದಿಗೆ ವಾಲೆಂಟರಿ ಲೈಸಂಸಿಂಗ್(ವಿ.ಎಲ್) ಅಥವಾ ಸ್ವಯಂಪ್ರೇರಿತ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದ ಜಿಲೆಡ್ ಸೈನ್ಸ್ ಕಂಪೆನಿಯ ಹೆಪಟೈಟಿಸ್ ಸಿ ರೋಗದ ಪರಿಣಾಮಕಾರಿ ಆದರೆ ಅಷ್ಟೇ ದುಬಾರಿ ಔಷಧಿ "ಸೊವಾಲ್ಡಿ" ಭಾರತದ ಔಷಧ ಮಾರುಕಟ್ಟೆ ಸೇರಲಿದೆ. ಆದರೆ ಈ ಒಪ್ಪಂದದ ಪ್ರಕಾರ ಔಷಧದ ಪುನರುತ್ಪಾದನೆಗೆ ಮೂಲ ಕಂಪೆನಿಗೆ ಬೃಹತ್ ಮೊತ್ತದ ರಾಯಲ್ಟಿಯನ್ನು ನೀಡಬೇಕು. ಹೆಪ್ ಸಿ ರೋಗಕ್ಕೆ ಜನರಿಕ್ ಕಂಪೆನಿಗಳು ಕಡಿಮೆ ಬೆಲೆಯ ಔಷಧಿಯನ್ನು ತಯಾರಿಸುವುದಿಲ್ಲ ಬದಲಾಗಿ ಸೋಫೋಸ್ಬ್ಯುವಿರ್ ರಾಸಾಯನಿಕದಿಂದ ತಯಾರಾದ ಸೊವಾಲ್ಡಿಯನ್ನೇ ಮರು ಉತ್ಪಾದಿಸಿ ದುಬಾರಿ ಬೆಲೆಗೆ ಮಾರಲಾಗುತ್ತದೆ. ಇದರ ಪರಿಣಾಮ ಭಾರತದ ಮಹತ್ವಕಾಂಕ್ಷಿ ಜನರಿಕ್ ಉದ್ದೇಶವೇ ಸೋತಂತಾಗುತ್ತದೆ. ಇದರಿಂದ ಜನರಿಗೆ ಕಡಿಮೆ ಬೆಲೆಗೆ ಔಷಧಿ ದೊರಯದಂತಾಗುತ್ತದೆ. ಏಕಮೇವಾದ್ವಿತಿಯ ಔಷಧಿಯಾಗಿ ಮಾರುಕಟ್ಟೆಯನ್ನು ಆಳುವ, ನಿಯಂತ್ರಿಸುವ ಆ ಮೂಲಕ ಅದರ ತೀರಾ ಅನಿವಾರ್ಯವಿದ್ದಾಗ ಕಡಿಮೆ ಪೂರೈಕೆಯ ನೆಪವೊಡ್ಡಿ ಗಣನೆಗೂ ಸಿಗದಂತೆ ಬೆಲೆಯೇರಿಸುವ ಅಪಾಯವೂ ಇದೆ. ಮೇಲಾಗಿ ಈ ಒಪ್ಪಂದದ ಪ್ರಕಾರ ತಯಾರಾದ ಔಷಧಿ ಇತರ ಶ್ರೀಮಂತ, ಮಧ್ಯಮ ಆದಾಯವಿರುವ ಮತ್ತು ಬಡ ರಾಷ್ಟ್ರಗಳಿಗೂ ರಫ್ತು ಮಾಡುವಂತಿಲ್ಲ. ಅಂದರೆ ಭಾರತ ಕೇವಲ ಮಾರುಕಟ್ಟೆ ಮಾತ್ರ.

ಮೆಡಿಸಿನ್ಸ್ ಸೈನ್ಸ್ ಫ್ರಾಂಟಿಯರ್(ಎಂ.ಎಸ್.ಎಫ್) ನಡೆಸಿದ ತಾಂತ್ರಿಕ ಸಮೀಕ್ಷೆಯ ಪ್ರಕಾರ ಸರಿಸುಮಾರು 49 ಮಿಲಿಯನ್ ಹೆಪರ್ಟಯಟಿಸ್ ಸಿ ರೋಗಿಗಳು ಮಧ್ಯಮ ಆದಾಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಸ್ವಯಂಪ್ರೇರಿತ ಒಪ್ಪಂದದ ಪ್ರಕಾರ ಇವರೆಲ್ಲ ಕಡಿಮೆ ಬೆಲೆಗೆ ದೊರಕಬಹುದಾಗಿದ್ದ ಜನರಿಕ್ ಔಷಧಿಯಿಂದ ವಂಚಿತರಾಗಬೇಕಾಗುತ್ತದೆ. ಇದಕ್ಕೊಂದು ಉತ್ತಮ ನಿದರ್ಶನ ಸೊವಾಲ್ಡಿ. ಇದರ 12 ವಾರದ ಕೋಸರ್್ನ ದುಬಾರಿ ಬೆಲೆಗಳು ಭಿನ್ನ ದೇಶಗಳಲ್ಲಿ ಹೀಗಿವೆ: ಅಮೇರಿಕಾ- 84,000 ಡಾಲರ್ಗಳು. ಇಂಗ್ಲೆಂಡ್ 53,000 ಡಾಲರ್ಗಳು. ಭಾರತ- 483 ಡಾಲರ್ಗಳು. ಜನರಿಕ್ ಔಷಧ ತಯಾಗಾಗದ ಮುಂದಿನ ದಿನಗಳಲ್ಲಿ ಇದರ ಬೆಲೆ ಮತ್ತಷ್ಟು ಏರಲಿದೆ. ಈ ಒಪ್ಪಂದದ ಕುರಿತು ಮರುಚಿಂತನೆ ಅತ್ಯಗತ್ಯ. ಒಂದು ವೇಳೆ ಇನ್ನಷ್ಟು ಜನರಿಕ್ ಕಂಪೆನಿಗಳು ಈ ಬಗೆಯ ಒಪ್ಪಂದದಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ ಭಾರತ ವಿಶ್ವದ ಔಷಧಾಲಯ ಎಂಬ ಹೆಗ್ಗಳಿಕೆಯನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಂತಹ ಅನೇಕ ಕಾರಣಗಳಿಂದ ಈ ಸ್ವಯಂಪ್ರೇರಿತ ಬಹುದೊಡ್ಡ ಸಮಸ್ಯೆ. ಇದು ವಿದೇಶಿ ಕಂಪೆನಿಯ ವ್ಯವಹಾರ ತಂತ್ರ. ಸರಕಾರ ಕಂಪೆನಿಯ ವ್ಯವಹಾರ ಸಾಧ್ಯತೆಯನ್ನು ನಿರ್ಧರಿಸುವುದು ಅಸಾಧ್ಯ. ಆದರೆ ಮುಂದೊಂದು ದಿನ ಬಹುಜನರ ಹಿತದೃಷ್ಟಿಯಿಂದ ಸರಕಾರ ಮಧ್ಯಪ್ರವೇಶಿಸಬೇಕಾಗಿರುವುದು ಅನಿವಾರ್ಯ. ನಮ್ಮ ರಾಜ್ಯದವರೇ ಆದ ಕೇಂದ್ರ ಸಚಿವರು ಕೆಲವು ತಿಂಗಳ ಹಿಂದೆ ಫಾಮರ್ೆಸಿ ಕ್ಷೇತ್ರಕ್ಕೆ ಶಿಘ್ರವೇ ಪೂರ್ಣಪ್ರಮಾಣದ ಸಚಿವಾಲಯ ಬರಲಿದೆ ಎಂದಿದ್ದರು. ಬೆಳೆಯುತ್ತಿರುವ ಮಾರುಕಟ್ಟೆಯಾದ ಔಷಧ ವಲಯ ಬೃಹತ್ ಉದ್ದಿಮೆ ಮಾತ್ರವಲ್ಲದೆ, ಅನೇಕ ಸಂಕೀರ್ಣ ಸಮಸ್ಯೆಗಳಿಂದಲೂ ಬಳಲುತ್ತಿದೆ. ಜನರಿಗೆ ಮೂಲಭೂತ ಅನಿವಾರ್ಯತೆಯಾಗಿರುವ ಈ ವಲಯಕ್ಕೆ ದೇಶೀ ನೆಲೆಯಲ್ಲಿ ಹೊಸ ದಿಕ್ಕನ್ನೂ, ಸಾಧ್ಯತೆಯನ್ನು ಸಾಕ್ಷತ್ಕರಿಸುವ ಅನಿವಾರ್ಯತೆಯಿದೆ. ಈ ವಲಯವೊಂದರಲ್ಲೇ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾಟರ್್ ಅಪ್ ಇಂಡಿಯಾದಂತಹ ಮಹತ್ವದ ಯೋಜನೆಗಳ ಭಾಗ್ಯ ಅಡಗಿದೆ. ಈಗಾಗಲೇ ಭಾರತ ಆಮದಾಗುತ್ತಿರುವ ದುಬಾರಿ ಔಷಧಿಗಳ ಮೇಲೆಯೇ ಹೆಚ್ಚು ಹೆಚ್ಚು ಅವಲಂಬಿತವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಅಭಿವೃದ್ಧಿ ಹೊಂದುತ್ತಿರುವ "ವಿಶ್ವದ ಔಷಧಾಲಯ ಪೂರ್ಣಪ್ರಮಾಣ"ದಲ್ಲಿ ಆಮದು ಔಷಧಾಲಯವಾಗಲಿದೆ.

-----

ಶ್ರೇಯಾಂಕ ಎಸ್ ರಾನಡೆ.

No comments:

Post a Comment