Thursday, March 3, 2016

General Budget 2016-17 REVIEW. ಫೋಕಸ್ ಗ್ರಾಮಾಭಿವೃದ್ಧಿ ಮತ್ತು ರೈತಾಭಿವೃದ್ಧಿ.

General Budget 2016-17 Review. Focus on Rural Development and Agriculture.


ಫೋಕಸ್ ಗ್ರಾಮಾಭಿವೃದ್ಧಿ ಮತ್ತು ರೈತಾಭಿವೃದ್ಧಿ.


Namaste, 

From Jaitley's budget I have focussed on the emphasis given by FM to Rural Development, Agriculture development and Farmer's welfare.Please intimate me before using this content in any form.

#A budget of Consolidation. Gearing up to deliver the best in upcoming year. A Budget of clarity, vision, successful balance, and now not the economy but the opposition in prudence!
It is very simple analogy. That is to make rural households rich(boost rural economy) and thereby automatically boosts the necessary demand. Which in the longer run leads to the benefit of Manufacturing sector.
----

ಫೋಕಸ್ ಗ್ರಾಮಾಭಿವೃದ್ಧಿ ಮತ್ತು ರೈತಾಭಿವೃದ್ಧಿ.

9 ಪ್ರಮುಖ ಸ್ಥಂಬಗಳಡಿಯಲ್ಲಿ ಜೇಟ್ಲಿ ಕೃಷಿ, ಗ್ರಾಮೀಣಾಭಿವೃದ್ಧಿಗೆ ಅಗತ್ಯವಾದ ಮತ್ತು ಮಹತ್ವದ ಸ್ಥಾನವನ್ನು ಒದಗಿಸಿದ್ದಾರೆ. ಯಾವುದೇ ದೇಶ ಆಥರ್ಿಕ ಬೆಳವಣಿಗೆಯ ಮೊದಲ ಹಂತದಲ್ಲಿ ಪ್ರಾಥಮಿಕ ವಲಯದ ಅಂದರೆ ಕೃಷಿ ಮತ್ತು ಸೋದರ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಕಾಲಕ್ರಮೇಣ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಉತ್ಪಾದನಾ ವಲಯದತ್ತ ಗಮನವನ್ನು ಕೇಂದ್ರಿಕರಿಸುತ್ತದೆ. ಕೊನೆಯ ಹಂತವಾಗಿ ದೇಶವೊಂದು ಪೂರ್ಣವಾಗಿ ಅಭಿವೃದ್ಧಿ ಹೊಂದಿದ ಮೇಲೆ ಸೇವಾ ವಲಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಆದರೆ ಭಾರತದ ಸಂದರ್ಭಲ್ಲಿ ಈ ಏಕರೂಪಿ ಸಿದ್ದಾಂತ ಅನ್ವಯವಾಗುವುದಿಲ್ಲ. ಆದ್ದರಿಂದಲೇ ಮೊದಲು ಕೃಷಿಗೆ ನಂತರ ಬೃಹತ್ ಉತ್ಪಾದನೆಗೆ ಒತ್ತುಕೊಟ್ಟ ನೆಹರೂ ಸರಕಾರದ ವಿತ್ತ ಮಂತ್ರಿ ಪ್ರಶಾಂತ್ ಚಂದ್ರ ಮಹಲನೊಬಿಸ್ ಸೋತಿದ್ದು. ಅಂದರೆ ಭಾರತದ ಸಂದರ್ಭದಲ್ಲಿ ಆಥರ್ಿಕತೆ ಮೂರೂ ವಲಯಗಳನ್ನು ಜೊತೆಯಲ್ಲೇ ಕೊಂಡೊಯ್ಯಬೇಕಾದ್ದು ಅನಿವಾರ್ಯ. ಜವಾಬ್ದಾರಿಯುತ ವಿತ್ತ ಮಂತ್ರಿ ಇದನ್ನೇ ಸರಿದೂಗಿಸಬೇಕು. ಮೊದಲೆರಡು ಬಜೆಟ್ಗಳಲ್ಲಿ ಆಥರ್ಿಕ ಶಿಸ್ತು, ಹೂಡಿಕೆಗೆ ಪೂರಕ ವಾತಾವರಣದ ನಿಮರ್ಾಣಕ್ಕೆ ಒತ್ತು ನೀಡಿದ್ದ ಅರುಣ ಜೇಟ್ಲಿಯವರು ಈಗ ಭಾರತೀಯ ಆಥರ್ಿಕತೆಯನ್ನು ಬೆಳವಣಿಗೆಯ ಸ್ಪಷ್ಟ ರೂಪ, ದಿಕ್ಕು ನೀಡುವ ಜೊತೆಗೆ ಅದನ್ನು ವ್ಯವಸ್ಥಿತವಾಗಿ ಸಮಗ್ರೀಕರಿಸಿದ್ದಾರೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿ. ಆ ಕಾರಣದಿಂದಲೇ ಹಿಂದೆ ಹಾಕಿಟ್ಟ ಮಾರ್ಗದಂತೆ ಈಗ ಕೃಷಿ, ಗ್ರಾಮೀಣಾಭಿವೃದ್ಧಿ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ವಲಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಪಾಶ್ಚಾತ್ಯರು ಪ್ರಾರಂಭಿಸಿದ ಭಾರತದ ಆಥರ್ಿಕತೆಗೆ ಭಾರತೀಯರೇ ಭವಿಷ್ಯವನ್ನು ಬರೆಯಬೇಕೆಂಬ ಕಾಣ್ಕೆ, ಸಂಕಲ್ಪ ಗ್ರಾಮೀಣಾಭಿವೃದ್ಧಿಯ ಮೂಲಕ ಸಾಧ್ಯವಾಗಬೇಕಿದೆ. ಆಗಲೇ 'ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಯೋಜನೆ' ಯಶಸ್ವಿಯಾಗುವುದು.ಆಹಾರ ಭದ್ರತೆಯಿಂದ ಆದಾಯ ಭದ್ರತೆಯತ್ತ:
ಭಾರತದಲ್ಲಿ ಬೆಳೆದ ಹಣ್ಣು, ತರಕಾರಿಗಳ ಮಾರುಕಟ್ಟೆಗಾಗಿ ಆಹಾರ ಸಂಸ್ಕರಣ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆಗೆ ಅವಕಾಶ ಒದಗಿಸಿದ್ದು, ಕೃಷಿ ಉತ್ಪನ್ನಗಳಿಗೆ ಒಂದೆರಡು ರಾಜ್ಯಗಳಲ್ಲಿ ಪ್ರಯೋಗಾತ್ಮಕವಾಗಿರುವ ಈ-ಕಾಮಸರ್್ ಮಾರುಕಟ್ಟೆಯನ್ನು ಇಢೀ ದೇಶಕ್ಕೆ ವಿಸ್ರಿಸುವ ಮೂಲಕ ರೈತರಿಗೆ ಅನಘ್ರ್ಯವಾದ ಕೊಡುಗೆ ಒದಗಿಸುತ್ತಿರುವುದು, ಮತ್ತು ಹಿಂದಿನ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದ ರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸ್ಥಾಪನೆ, 19 ರಾಜ್ಯಗಳಂತೆ ಉಳಿದ ರಾಜ್ಯಗಳಲ್ಲೂ ಕೃಷಿ ಉತ್ಪನ್ನ ಕಾಯ್ದೆಗೆ ತಿದ್ದುಪಡಿ ತರುವುದು ಇವೆಲ್ಲವೂ ಮಾರುಕಟ್ಟೆ, ದಲ್ಲಾಳಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಇವೆಲ್ಲವೂ ಬಡವಾಗಿರುವ ರೈತರ ಆದಾಯವನ್ನು ದೃಢಪಡಿಸುವ ಕಾರ್ಯಗಳು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹತ್ತು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ನಿಮರ್ಾಣ, ಉದ್ಯೋಗಾವಕಾಶ, ವಲಸೆಯ ತಡೆ, ಬಡವರಿಗೆ ನಿರಂತರವಾಗಿ ಒದಗಿಸುವ ಆಥರ್ಿಕ ಭದ್ರತೆ ಇತ್ಯಾದಿ ಸಾಧ್ಯತೆಗಳನ್ನೂ, ಅದರ ಸಾಧನೆಯನ್ನೂ ಅರಿತಿರುವ ಸರಕಾರ ಉದ್ಯೋಗ ಖಾತ್ರಿ ಯೋಜನೆಗೆ 38,5000 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ಇದು ಸಮಾಜಪರ ನಿರ್ಣಯ ಹೇಗೋ, ಎನ್ಡಿಎ ಸರಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಮುಚ್ಚಲಿದೆ, ಅದಕ್ಕೆ ವಿನಿಯೋಗಿಸಿದ್ದ ಹಣವನ್ನು ಖಡಿತಗೊಳಿಸುತ್ತಿದೆ, ಸರಕಾರಕ್ಕೆ ಗ್ರಾಮೀಣ ಆಥರ್ಿಕತೆಯ ಬಗೆಗೆ ತಾತ್ಸಾರ ಎಂಬಿತ್ಯಾದಿ ಟೀಕೆಗಳಿಗೂ ಸರಿಯಾದ ಉತ್ತರವನ್ನು ನೀಡಿದೆ. ಈ ಒಂದು ಯೋಜನೆಯೇ ಬೃಹತ್ ಪ್ರಮಾಣದಲ್ಲಿ ಆದಾಯ ಭದ್ರತೆಯನ್ನು ಒದಗಿಸುವ ಜೊತೆಗೆ ಆಹಾರ ಭದ್ರತೆಯನ್ನು ಒದಗಿಸುತ್ತದೆ ಎಂಬುದನ್ನು ಸರಕಾರ ಈ ಮೂಲಕ ಪ್ರಮಾಣ ಪಡಿಸಿದೆ. ನೇರ ಖಾತೆಗೆ ಹಣವನ್ನು ಈ ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರುವ ಮೂಲಕ ಈ ಯೋಜನೆಯಲ್ಲಿ ಪೋಲಾಗುತ್ತಿರುವ, ಮಧ್ಯವತರ್ಿಗಳ ಪಾಲಾಗುತ್ತಿರುವ ಹಣವನ್ನು ನೇರವಾಗಿ ಅರ್ಹರಿಗೆ ತಲುಪಿಸಿದಂತಾಗುತ್ತದೆ. ಈ ಯೋಜನೆಯ ವೈಫಲ್ಯತೆಗೆ ಕಾರಣವಾಗಿದ್ದ ಸಂಗಂತಿಯೊಂದು ಸಹಜವಾಗಿ ನಿವಾರಣೆಯಾಗಲಿದೆ. ಆದರೆ ಯೋಜನೆಯಲ್ಲಿರುವ ಅನೇಕ ತೊಡಕು ಮತ್ತು ಕೊರತೆಗಳನ್ನು ನೀಗಿಸದ ಹೊರತು ಮತ್ತೆ ಆ ಮೊತ್ತ 'ಗುಂಡಿಗಳನ್ನು ಅಗೆಯುವುದಕ್ಕೆ'(ಪ್ರಧಾನ ಮಂತ್ರಿ ನರೇಂದ್ರ ಮೋದಿ, 2015ರ ಲೋಕಸಭೆಯ ಸದನಲ್ಲಿ ಮಾಡಿದ ಭಾಷಣದಲ್ಲಿ ಉಲ್ಲೇಖ) ಪೋಲಾದರೆ ಕಷ್ಟ. ಹಾಗಾಗಿ ಆ ಕಾಯ್ದೆಯನ್ನು ಮತ್ತಷ್ಟು ಶಕ್ತಿಯುತಗೊಳಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡುವುದು ಸೂಕ್ತ. ಅದಕ್ಕೆ ರಾಜಕೀಯ ಹಿತಾಸಕ್ತಿ ಮತ್ತು ಜನರ ಅನಿಸಿಕೆಗಳನ್ನು ಗೆಲ್ಲುವುದು ಅನಿವಾರ್ಯ.

ಸತತವಾಗಿ ಕಳೆದೆರಡು ವರ್ಷಗಳ ಬರದಿಂದ ರೈತಾಪಿ ವರ್ಗ ಕಂಗೆಟ್ಟಿದೆ. ಏರುತ್ತಿರ ಸಾಲದ ಹೊರೆ ಮತ್ತೊಂದೆಡೆ. ಕೆಲವೊಮ್ಮೆ ಅಕಾಲಿಕ ಮಳೆ, ಪ್ರವಾಹದಿಂದ ಬೆಳೆ ನಾಶದಂತಹ ಸಂಗತಿಗಳು ಕೃಷಿಯನ್ನು ಅತ್ಯಂತ ದುರ್ಬಲ ಕ್ಷೇತ್ರವನ್ನಾಗಿಸಿದೆ. ಹವಾಮಾನ ವೈಪರಿತ್ಯ ಮತ್ತು ಇನ್ನಿತರ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಏರುಪೇರಾಗುವ ಮಾನ್ಸೂನ್ ಅನ್ನೇ ನೆಚ್ಚುವುದು ಬುದ್ಧಿವಂತಿಕೆಯಲ್ಲ. ಹಾಗಾಗಿ ನೀರಾವರಿ ಯೋಜನೆ ತೀರಾ ಅತ್ಯಗತ್ಯ. ಅದಕ್ಕೆಂದೇ ಸರಕಾರ ಈ ಬಜೆಟ್ ಮೂಲಕ 89 ನೀರಾವರಿ ಯೋಜನೆಗಳಿಗೆ 86,500 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಮುಂದಿನ ಬಜೆಟ್ಗಳಲ್ಲಿ ಇದರ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮತ್ತು ಅದು ಆಗಲೇ ಬೇಕಿದೆ. ಇದರ ಜೊತೆಗೆ ನೀರಿನ ಇತರ ಪಯರ್ಾಯ ಮೂಲಗಳನ್ನೂ ಹೇಗೆ ಬಳಸಿಕೊಳ್ಳಬಹುದು? ಸಾಯುತ್ತಿರುವ ಕೆರೆ, ನದಿಗಳನ್ನು ಪುನಶ್ಚೇತನಗೊಳಿಸುವ ಬಗೆ, ಹಾಗೂ ಅದಕ್ಕಾಗಿಯೇ ಬೇಕಾದ ಮೊತ್ತವನ್ನು ಬಜೆಟ್ ಒದಗಿಸಿಲ್ಲ. ಇದನ್ನು ಮುಂದಿನ ಬಜೆಟ್ನಲ್ಲಾದರೂ ಪ್ರಸ್ತಾಪವಾಗುವಂತೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಜನರು ಮತ್ತು ಸಂಸದರು ಮಹತ್ವದ ಪಾತ್ರವಹಿಸಬೇಕಿದೆ. ರಾಜ್ಯ ಸರಕಾರ ಕೇಂದ್ರದ ಕೈಜೋಡಿಸಬೇಕಿದೆ. ಇನ್ನು ಬೆಳೆ ಹಾನಿಯಾದಾಗ ರೈತರ ಸಹಾಯಕ್ಕೆ ಬರಲಿರುವುದು 'ಪ್ರಧಾನ ಮಂತ್ರಿ ಸಫಲ್ ಬಿಮಾ ಯೋಜನೆ'. ಈ ಯೋಜನೆ ಹಿಂದಿನ ಫಸಲು ಬಿಮಾ ಯೋಜನೆಗಿಂತ ಉತ್ತಮವಾಗಿದ್ದು, ರೈತಸ್ನೇಹಿಯಾಗಿದೆ. ಸಂತ್ರಸ್ತ ರೈತರಿಂದ ಕಡಿಮೆ ಪ್ರೀಮಿಯಂ ಪಡೆದು, ಗರಿಷ್ಟ, ಸುಲಭ ಮತ್ತು ಶೀಘ್ರ ಪರಿಹಾರವನ್ನು ಒದಗಿಸುತ್ತದೆ. ಈ ಯೋಜನೆಗೆಂದೇ ಬಜೆಟ್ನಲ್ಲಿ ಕೇಂದ್ರದ ಪಾಲಿನ ಸಬ್ಸಿಡಿ ಸಹಿತ ಪ್ರೀಮಿಯಂಗಾಗಿ 5,500 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ಇದು ಬೆಳೆಹಾನಿಗೊಳಗಾದ ರೈತರಿಗೆ ಆಥರ್ಿಕವಾಗಿ ಆಸರೆಯಾಗುವ ಜೊತೆಗೆ, ಅಪಾಯವನ್ನು ಎದುರಿಸಲು(ರಿಸ್ಕ್ ತೆಗೆದುಕೊಳ್ಳಲು) ಸಹಕರಿಸುತ್ತದೆ. ಮತ್ತು ನಷ್ಟದಿಂದ ಕಂಗೆಟ್ಟು ಆತ್ಮಹತ್ಯೆಯಂತಹ ಕಾರ್ಯಗಳತ್ತ ಮನಸೋಲುವ ರೈತರನ್ನು ಸಾಯದಂತೆ ತಡೆಯಲು ಸಹಾಯಮಾಡುತ್ತದೆ.

ಗ್ರಾಮೀಣಾಭಿವೃದ್ಧಿಗೆ 87,000 ಕೋಟಿ ರೂಪಾಯಿ ಮೀಸಲು. ತರ್ಕ ಬಹಳ ಸರಳ. ಸಧ್ಯ ದೇಶದ ಪ್ರಗತಿಗೆ ತೊಡಕಾಗಿರುವುದು ಕುಸಿಯುತ್ತಿರುವ ಬೇಡಿಕೆ. ಬೇಡಿಕೆಯ ಕುಂಠಿತತೆಯನ್ನು ಸರಿದೂಗಿಸಲು ಇರುವುದು ಎರಡು ದಾರಿ. ಒಂದು ಬೆಲೆಯನ್ನು ಕಡಿಮೆಗೊಳಿಸಿ ಉತ್ಪಾದನೆಯನ್ನು ಹೆಚ್ಚಾಗಿಸುವುದು. ಇದರಿಂದ ಉತ್ಪಾದಕರಿಗೂ, ದೇಶಕ್ಕೂ ನಷ್ಟವೇ ಆಗುವುದು. ಎರಡನೇ ದಾರಿ ಜನರು ಶ್ರೀಮಂತರಾದಾಗ ಹೆಚ್ಚು ಖಚರ್ು ಮಾಡುತ್ತಾರೆ ಆಗ ಬೇಡಿಕೆ ತಾನೇ ತಾನಾಗಿ ಏರಿಕೆಯಾಗುತ್ತದೆ ಎಂಬುದು ಆಥರ್ಿಕತೆಯ ನಂಬಿಕೆ. ಜೇಟ್ಲಿಯವರು ಅದನ್ನೇ ಜಾರಿ ಮಾಡುವ ಪ್ರಯತ್ನವನ್ನು ಅತ್ಯಂತ ಬುದ್ಧಿವಂತಿಕೆಯಿಂದ ಮಾಡಿದ್ದಾರೆ. ಅದರ ಫಲವೇ ಬಜೆಟ್ನ ಪ್ರಮುಖ ಸ್ಥಂಬಗಳಲ್ಲಿ ಗ್ರಾಮೀಣ ಆಥರ್ಿಕತೆ, ಕೃಷಿ ಮತ್ತು ರೈತರ ಅಭಿವೃದ್ಧಿಗೆ ಮೊದಲ ಮತ್ತು ಪ್ರಮುಖ ಸ್ಥಾನವನ್ನು ನೀಡಿದ್ದಾರೆ. ಪರಿಣಾಮ ಸ್ಪಷ್ಟ ಒಂದೆಡೆ ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯವನ್ನು ಇಮ್ಮಡಿಗೊಳಿಸುವುದು, ಆಗ ಗ್ರಾಮೀಣ ಜನರ ಬಳಿ ಹಣ ಬರುತ್ತದೆ. ಹೆಚ್ಚು ಖಚರ್ು ಮಾಡಲಾರಂಭಿಸುತ್ತಾರೆ, ಬೇಡಿಕೆಯ ಪ್ರಮಾಣ ಏರುತ್ತದೆ.

ಎರಡನೆಯದಾಗಿ ವಿಶ್ವ ಮಾರುಕಟ್ಟೆಯ ಇಳಿಗತಿ ಎಲ್ಲರ ನಿದ್ದೆಗೆಡಿಸಿದೆ. ಅದು ಚೇತರಿಸಿಕೊಳ್ಳುವ ಲಕ್ಷಣ ತೋರುತ್ತಿಲ್ಲ, ಅದನ್ನು ಪುನಶ್ಚೇತನಗೊಳಿಸುವುದೂ ಭಾರತದಿಂದ ಸಾಧ್ಯವಿಲ್ಲ. ಹಾಗೆಂದು ವಿಶ್ವಮಾರುಕಟ್ಟೆಯ ಅನಿಶ್ಚಿತತೆಯನ್ನೇ ನಂಬಿ ಕುಳಿತರೆ ಭಾರತ ಬೆಳೆಯುವಂತೆಯೂ ಇಲ್ಲ. ಹಾಗಾಗಿ ಈಗ ಮೇಕ್ ಇನ್ ಇಂಡಿಯಾ ಎಂಬುದು ಮೇಕ್ ಫಾರ್ ಇಂಡಿಯಾ ಆಗಬೇಕಾದ ಅನಿವಾರ್ಯತೆಯಲ್ಲಿದೆ. ಜನರು ಭಾರತದ ಉತ್ಪನ್ನಗಳನ್ನು ಕೊಳ್ಳಬೇಕಾದರೆ ಅವರಿಗೆ ಕೊಂಡುಕೊಳ್ಳುವ ಸಾಮಥ್ರ್ಯವಿರಬೇಕು. ಅದಕ್ಕೆ ಅವರ ಬಳಿ ನಿರಂತರ ಹಣ ಹರಿದಾಡುತ್ತಿರಬೇಕು. ಮೂರನೆಯದಾಗಿ ಸ್ವಾಂತಂತ್ರ್ಯ ಬಂದಾಗಿನಿಂದಲೂ ಸೊರಗುತ್ತಿರುವುದು ದೇಶದ ಬೆನ್ನೆಲೆಬಾಗಿದ್ದ ಗ್ರಾಮೀಣ ಭಾರತ.  50%ಗಿಂತಲೂ ಅಧಿಕ ಜನರು ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ಅನೇಕ ಕಾರಣಗಳಿಂದ ದೇಶದ ಒಟ್ಟಾರೆ ಆದಾಯ ಜಿ.ಡಿ.ಪಿಗೆ ಬರುತ್ತಿದ್ದ ಕೊಡುಗೆ ಮಾತ್ರ 15%ಗಿಂತಲೂ ಕಡಿಮೆ. ಇದು ಕೇವಲ ಗಂಭೀರ ಚಿಂತೆಯ ವಿಷಯ ಮಾತ್ರವಲ್ಲ. ಇಷ್ಟು ವರ್ಷಗಳಿಂದ ಗ್ರಾಮೀಣ ಭಾರತದ ಪ್ರಗತಿ ಸಾಧ್ಯವಾಗದಿರುವುದು ದೇಶದ ಆಥರ್ಿಕ ಸೋಲೂ ಹೌದು. ಇದನ್ನು ಅರಿತಿದ್ದ ಜೇಟ್ಲಿಯವರಿಗೆ ಗ್ರಾಮೀಣ ಆಥರ್ಿಕತೆಯನ್ನು ಪುನಶ್ಚೇತನಗೊಳಿಸುವ ಅನಿವಾರ್ಯ ಒತ್ತಡವಿತ್ತು. ಮೇಲಾಗಿ ಈ ಭೂ ಮಸೂದೆಗೆ ತರಲು ಹೊರಟಿದ್ದ ತಿದ್ದುಪಡಿಯ ಕಾರಣದಿಂದ ಸರಕಾರ ಕೇವಲ ಶ್ರೀಮಂತರ ಪರ ಎಂಬ ಜನರ ಊಹೆಗೆ, ಅಂಭಾನಿ-ಅದಾನಿ; ಸೂಟ್ ಬೂಟ್ ಸರಕಾರ ಎಂದು ಪ್ರತಿಪಕ್ಷಗಳು ನೀಡಿದ್ದ ಹಣೆಪಟ್ಟಿಯಿಂದ ಹೊರಬರುವುದಕ್ಕೂ ರಾಜಕೀಯವಾಗಿ ಇದೊಂದು ಉತ್ತಮ ಸಕಾಲಿಕ ನಡೆ. ಇದರ ಜೊತೆಗೆ ಕೃಷಿ ಸಾಲಕ್ಕೆ 9,00,000ಕೋಟಿ ರುಪಾಯಿಗಳ ಗುರಿ ಹಾಕಿಕೊಂಡಿರುವುದು ರೈತರ ಆಥರ್ಿಕ ಪುನಶ್ಚೇತನಕ್ಕೂ, ಸ್ವಾವಲಂಬನೆಗೂ, ನೀರಸವಾಗುತ್ತಿರುವ ಕೃಷಿ ಚಟುವಟಿಕೆಗಳಿಗೆ ಮರುಜನ್ಮ ನೀಡುವುದಕ್ಕೂ ಕಾರಣವಾಗಬೇಕು.ಕೃಷಿ ಕಲ್ಯಾಣ ತೆರಿಗೆಯ ಅಡಿಯಲ್ಲಿ ಎಲ್ಲಾ ಸೇವೆಗಳ ಮೇಲೆ 5% ತೆರಿಗೆ ವಿಧಿಸಲಾಗಿದೆ. ಇದು ಶ್ರೀಮಂತರಿಂದ ಬಡವರಿಗೆ ಹರಿದುಬರುವ ವೆಚ್ಚವಲ್ಲ. ಮೇಲಾಗಿ ಸೇವಾ ತೆರಿಗೆ ಎಂಬುದು ಪರೋಕ್ಷ ತೆರಿಗೆ. ಪರೋಕ್ಷ ತೆರಿಗೆಯನ್ನು ಬಳಸುವ ಸೇವೆಯ ಆಧಾರದಲ್ಲಿ ಕಟ್ಟಲಾಗುತ್ತದೆ. ಇದನ್ನು ಶ್ರೀಮಂತರಿಮದ ಬಡವರ ವರೆಗೆ ಯಾರು ಬೇಕಾದರೂ ಬಳಸಬಹುದು. ಸೇವೆಗಳನ್ನು ಬಯಸುವವರು ತೆರಿಗೆಯನ್ನೂ ಕಟ್ಟಬೇಕು. ಈ ತೆರಿಗೆಯಿಮದ ಬರುವ ಆದಾಯವನ್ನು ಕೃಷಿ ಮತ್ತು ಸೋದರ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಂದರೆ ಎಲ್ಲಾ ವರ್ಗದ ಜನರೂ ಕೃಷಿಯ ಕಲ್ಯಾಣಕ್ಕಾಗಿ ತೆರಿಗೆ ಕಟ್ಟಿದಂತಾಗುತ್ತದೆ. ಮೇಲಾಗಿ ವಿತ್ತೀಯ ಶಿಸ್ತಿನ ಪರಿಣಾಮವಾಗಿ ತಾನೇ ವಿಧಿಸಿಕೊಂಡಿರುವ ನಿರ್ಬಂಧದ ಕಾರಣ ಒದಗಿರುವ ಸರಕಾರದ ಆಥರ್ಿಕ ಪರಿಸ್ಥಿತಿಯನ್ನೂ ತೋರಿಸುತ್ತದೆ.

ವಿದ್ಯುತ್ ಇಲ್ಲದೆ ಕೃಷಿ ಒಳಗೊಂಡಂತೆ ಯಾವುದೇ ಚಟುವಟಿಕೆಗಳು ಸುಗಮವಾಗಿ ಸಾಗುವುದಿಲ್ಲ. ಹಾಗಾಗಿಯೇ ಹಳ್ಳಿಗಳ ಸವರ್ಾಂಗೀಣ ಅಭಿವೃದ್ಧಿಯ ಹಿನ್ನಲೆಯಲ್ಲಿ ಗ್ರಾಮೀಣ ವಿದ್ಯುತೀಕರಣ ಯೋಜನೆ ಬಹು ಉಪಯೋಗಿ. 23 ಫೆಬ್ರವರಿ 2016ರ ಹೊತ್ತಿಗೆ ಸುಮಾರು 500+ ಹಳ್ಳಿಗಳ ಪ್ರತೀ ಮನೆಗೆ ವಿದ್ಯುತ್ ಸೌಲಭ್ಯ ಒದಗಿಸಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲು. ಇದು ಬಹುದೊಡ್ಡ ಸಾಧನೆಯೂ ಹೌದು. ಈ ಬಜೆಟ್ ಆ ಯೋಜನೆಗೆ ಮತ್ತಷ್ಟು ಒತ್ತು ನೀಡುವ ಮೂಲಕ ಮುಂದಿನ ವರ್ಷದೊಳಗೆ 1,000 ಹಳ್ಳಿಗಳಿಗೆ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ಹೆಚ್ಚಿನ ಅನುದಾನದ ಮೂಲಕ ಅದನ್ನು ವಿಸ್ತರಿಸಿದೆ. ಇದರ ಜೊತೆಗೆ ಜಾಗತಿಕ ಯುಗದಲ್ಲಿ ಹಳ್ಳಿಗಳಿಗೂ ಅನಿವಾರ್ಯವಾಗಿರುವ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರತ್ಯೇಕವಾಗಿ ಹಣವನ್ನು ಮೀಸಲಿರಿಸುವ ಮೂಲಕ ಡಿಜಿಟಲ್ ಇಂಡಿಯಾ ಆಶಯವನ್ನು ಬಜೆಟ್ ಪುನರುಚ್ಚರಿಸಿದೆ. ಇದರ ಸಾಧನೆಗೆ ಸಂಪರ್ಕ ಎಷ್ಟು ಮುಖ್ಯವೋ, ಜನರಿಗೆ ನೀಡಬೇಕಾದ ಡಿಜಿಟಲ್ ಶಿಕ್ಷಣ ಅತ್ಯನಿವಾರ್ಯ. ಬಜೆಟ್ ಈ ಬಗ್ಗೆ ಏನನ್ನೂ ಪ್ರಸ್ತಾಪಿಸದಿದ್ದರೂ, ಗೂಗಲ್, ಟಾಟಾದಂತಹ ಸಹಾಯ ಪಡೆದು ಜನರಿಗೆ ಡಿಜಿಟಲ್ ಶಿಕ್ಷಣ ನೀಡದ ಹೊರತು ಯೋಜನೆ ಸೋಲುತ್ತದೆ. ಇದಕ್ಕಾಗಿ ಸಾರ್ವಜನಿಕ-ಖಾಸಗಿ ಸಹಕಾರ ಮಾರ್ಗವನ್ನು ನಿಗದಿತ ವ್ಯವಸ್ಥೆಯ ಮೂಲಕ ಜಾರಿಗೊಳಿಸಬೇಕಿದೆ. ಇಲ್ಲವಾದಲ್ಲಿ ಡಿಜಿಟಲ್ ಇಂಡಿಯಾ ಸಾಮಾಜಿಕ ಜಾಲತಾಣಗಳ ಬಳಕೆಗಷ್ಟೇ ಸೀಮಿತಗೊಳ್ಳುವ ಅಪಾಯವಿದೆ.

ಅದೆಷ್ಟೋ ವರ್ಷಗಳಿಂದ ಶೌಚಾಲಯಗಳ ನಿಮರ್ಾಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಹಿಂದಿನ ಸರಕಾರದ ನಿರ್ಮಲ ಗ್ರಾಮ ಯೋಜನೆಯಿಂದ ಸ್ವಚ್ಛಬಾರತ ಸೆಸ್ವರೆಗೂ ಹಣ ವಿನಿಯೋಗವಾಗುತ್ತಲೇ ಇದೆ. ಅದು ಈ ಬಜೆಟ್ನಲ್ಲೂ ಮುಂದುವರೆದಿದೆ. ಆದರೆ ಜನರ ಮನಸ್ಥಿತಿ ಬದಲಾಗದ ಹೊರತು ಸ್ವಚ್ಛ ಭಾರತಕ್ಕೆ ವಿನಿಯೋಗಿಸುವ ಹಣ ಶೌಚಾಲಯದ ಕಟ್ಟಡ ನಿಮರ್ಾಣಕ್ಕಷ್ಟೇ ಸೀಮಿತವಾಗಲಿದೆ. ಜನರ ಮನಸ್ಥಿತಿ ಬದಲಾಯಿಸಲು ತಳಮಟ್ಟದಿಂದ ಜನರಿಂದಲೇ ಜನರಿಗೆ ಶಿಕ್ಷಣ ನೀಡಬೇಕಿದೆ. ಆದರೂ ದೇಶದ ಎಲ್ಲಾ ಶಾಲೆಗಳಲ್ಲೂ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿಮರ್ಿಸಿದ್ದು ಸಾಧನೆಯೂ, ಶ್ಲಾಘನಾರ್ಹವೂ ಮತ್ತು ಹಣದ ಸದ್ಭಳಕೆಯಾಗಿರುವುದಕ್ಕೆ ಸಾಕ್ಷಿ. ಶಾಲೆಗಳಿಂದ ಪ್ರಾರಂಭವಾಗುವ ಮನಸ್ಥಿತಿ ಸಮಾಜಕ್ಕೂ ಪಸರಿಸುತ್ತದೆ.2019ರ ಹೊತ್ತಿಗೆ ದೇಶದ ಎಲ್ಲ ಹಳ್ಳಿಗಳನ್ನು ರಸ್ತೆಗಳಿಂದ ಬೆಸೆಯುವ ಯೋಜನೆ ಅತೀ ಮಹತ್ವದ್ದು. ಇದರಿಂದ ಮಾರುಕಟ್ಟೆ ಜೊತೆಜೊತೆಗೆ ಬೆಳೆಯುತ್ತದೆ. ದೂರದೃಷ್ಟಿಯಲ್ಲಿ ಗ್ರಾಮೀಣಾಭಿವೃದ್ಧಿ ಸಾಧ್ಯವಾಗುತ್ತದೆ. ಗ್ರಾಮೀಣ ನಿರುದ್ಯೋಗ ಮತ್ತು ವಲಸೆ ತಡೆಯಲು ಸಾಧ್ಯವಾಗುತ್ತದೆ.

ಪ್ರಸಕ್ತ ಸಾಲಿನಲ್ಲಿ 1.50 ಕೋಟಿ ಬಿಪಿಎಲ್ ಗ್ರಾಮೀಣ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 2,000 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದು ಅಗತ್ಯವಾದ ನಡೆ. ಇದು ಇಡೀ ದೇಶವನ್ನು ಎಲ್ಪಿಜಿಯಿಂದ ಬೆಸೆಯಲು ಸಹಾಯಮಾಡಲಿದೆ. ಮಹಿಳೆಯೊಬ್ಬರು ಪ್ರತೀ ಬಾರಿ ಸೌದೆಯ ಒಲೆ ಉರಿಸಿದಾಗ 500 ಸಿಗರೇಟ್ ಸೇವಿಸಿದಷ್ಟು ಹಾನಿಯುಂಟಾಗುತ್ತದೆ. ವಾಯುಮಾಲಿನ್ಯವೂ ಆಗುತ್ತದೆ. ಈ ಕ್ರಮದಿಂದ ಗ್ಯಾಸ್ ಸಿಲಿಂಡರ್ ವ್ಯವಹಾರ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ  ಸಿಲಿಂಡರ್ ಪೂರೈಕೆಯ ಉದ್ಯೋಗ ಸಿಗಲಿದೆ. ಇದು ಕನಿಷ್ಟವೆಂದರೂ 1 ಲಕ್ಷ ಹೊಸ ಉದ್ಯೋಗವನ್ನು ಒದಗಿಸಲಿದೆ. ಇದರ ಜೊತೆಗೆ ಮುಂದಿನ 3 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಕೌಶಲ್ಯ ಒದಗಿಸುವುದರಿಂದ ಗ್ರಾಮೀಣ ಭಾಗದಲ್ಲಿ ಕೌಶಲಾಭಿವೃದ್ಧಿಯ ಜೊತೆಗೆ ಶಾಶ್ವತವಾದ ಉದ್ಯೋಗ ಭದ್ರತೆಯನ್ನೂ ಒದಗಿಸಿದಂತಾಗುತ್ತದೆ. ಭವಿಷ್ಯ ನಿಂತಿರುವುದೇ ಕೌಶಲ್ಯದ ಮೇಲೆ ಹಾಗಾಗಿ ಇದು ಮೇಕ್ ಇನ್ ಇಂಡಿಯಾಗೂ ಪೂರಕವಾಗಲಿದೆ.

ಹಳ್ಳಿಗಳು ಎಂತಹ ಆಥರ್ಿಕ ಮುಗ್ಗಟ್ಟನ್ನೂ ಜೀಣರ್ಿಸಿಕೊಳ್ಳುತ್ತವೆ, ಎಂತಕಹ ಸವಾಲನ್ನೂ ಮೆಟ್ಟಿ ನಿಲ್ಲತ್ತವೆ. ಇಂದು ಅಂತಹದ್ದೇ ಪರಿಸ್ಥಿತಿ ನಮ್ಮೆದುರಿಗಿದೆ. ವಿಶ್ವ ಮಾರುಕಟ್ಟೆಯ ಎದುರು ಭಾರತ ಬಲಿಷ್ಟವಾಗಿ ಮುನ್ನಡೆಯಲು ಸಾಧ್ಯವಾಗಿರುವುದು ಇವೇ ಹಳ್ಳಿಗಳಿಂದ. ಹಳ್ಳಿಗಳ ಮೇಲೆ ಹೆಚ್ಚಿನ ಒತ್ತನ್ನು ನೀಡಿದರೆ ಕೇವಲ ಗ್ರಾಮೀಣಾಭಿವೃದ್ಧಿ ಮಾತ್ರವಲ್ಲ, ದೇಶದ ಅಭಿವೃದ್ಧಿಯೂ ಸಾಧ್ಯವಿದೆ. ನಗರ ಮತ್ತು ಹಳ್ಳಿಗಳ ಮಧ್ಯೆ ಕಂದಕ ಹೆಚ್ಚಾಗುತ್ತಿರುವ ಹೊತ್ತಿನಲ್ಲಿಯೇ, ಅವುಗಳ ನಡುವಿನ ಕಂದಕವನ್ನು ಕಡಿಮೆಗೊಳಿಸುವ ಹೊಣೆ ಸರಕಾರದ ಮೇಲಿತ್ತು. ಅದನ್ನು ಬಜೆಟ್ ಸಮರ್ಥವಾಗಿಯೇ ನಿರ್ವಹಿಸಿದೆ. ಎಲ್ಲರ ಚಿತ್ತ ಕಾಪರ್ೊರೇಟ್ ವಲಯದ ಮೇಲೆ ನೆಟ್ಟಿದ್ದ ಸಮಯದಲ್ಲೇ ಅವರಿಗೂ ಅನ್ಯಾವಾಗದಂತೆ ಕೃಷಿಭಾರತವನ್ನು ಪುನಶ್ಚೇತನಗೊಳಿಸುವ, ಎಲ್ಲಾ ಕ್ಷೇತ್ರ-ವರ್ಗಗಳನ್ನು ಸಮನ್ವಯಗೊಳಿಸಿ ಉತ್ತಮ ರೀತಿಯಲ್ಲಿ ಸಮಗ್ರೀಕರಿಸಲಾಗಿದೆ. ಆಥರ್ಿಕ ಕೊರತೆಗಳ ಹೊರತಾಗಿಯೂ ಹಳ್ಳಿಗಳಿಗೆ ಸ್ಪೇಸ್ ಒದಗಿಸಿ ಆಥರ್ಿಕತೆಯ ಮೂಲ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದೆ.

====
ಧನ್ಯವಾದಗಳು.
-ಶ್ರೇಯಾಂಕ ಎಸ್ ರಾನಡೆ 

No comments:

Post a Comment