Thursday, March 17, 2016

Karnataka Budget 2016-17. ರಾಜ್ಯ ಸರಕಾರದ 2016-17ನೇ ಸಾಲಿನ ಆಯವ್ಯಯದಿಂದ ಕನಿಷ್ಟ ನಿರೀಕ್ಷೆಗಳು:

ರಾಜ್ಯ ಸರಕಾರದ 2016-17ನೇ ಸಾಲಿನ ಆಯವ್ಯಯದಿಂದ ಕನಿಷ್ಟ ನಿರೀಕ್ಷೆಗಳು:


-ಶ್ರೇಯಾಂಕ ಎಸ್ ರಾನಡೆ.

ರಾಜ್ಯ ಬಜೆಟ್ ಕೇಂದ್ರ ಬಜೆಟ್ಗೆ ಪೂರಕವಾಗಿರಬೇಕು. ಅಂದರೆ ದೇಶೀಯ ಮತ್ತು ಅಂತರಾಷ್ಟ್ರೀಯ ಆಥರ್ಿಕ ಪರಿಸ್ಥಿತಿ, ವಿದ್ಯಮಾನಗಳನ್ನು ಅರಿತು ಗ್ರಾಮೀಣ ಆಥರ್ಿಕ ಸುಸ್ಥಿರತೆಯತ್ತ ಚಿತ್ತ ಹರಿಸಬೇಕು. ಯಾವೆಲ್ಲ ಮೂಲಭೂತ ಕ್ಷೇತ್ರಗಳಲ್ಲಿ ಕೇಂದ್ರದ ಅನುದಾನ ಕಡಿಮೆಯಾಗಿದೆಯೋ ಅಲ್ಲೆಲ್ಲ ರಾಜ್ಯದ ಅನುದಾನದಿಂದ ಕೊರತೆಯನ್ನು ಸರಿದೂಗಿಸಬೇಕು. ಆಗ ರಾಜ್ಯದ ಮತ್ತು ದೇಶದ ಆಥರ್ಿಕತೆಯ ಬೆಳವಣಿಗೆಗೆ ಉತ್ತಮ ವಾತಾವರಣ, ಪರಸ್ಪರ ಸಹಕಾರಿ ಒಕ್ಕೂಟ ವ್ಯವಸ್ಥೆಯ ಯಶಸ್ಸಿಗೆ ನಾಂದಿಹಾಡಿದಂತಾಗುತ್ತದೆ. ಇನ್ನು ರಾಜ್ಯ ಮತ್ತು ದೇಶದ ಬೆಳವಣಿಗೆಯ ದೃಷ್ಟಿಯಿಂದ ರಾಜ್ಯವೂ ಕೇಂದ್ರದ ದಾರಿಯಲ್ಲಿಯೇ ನಡೆಯಬೇಕಿದೆ. ಕಳೆದ ಎರಡು ವರ್ಷಗಳ ಭೀಕರ ಬರಗಾಲದಿಂದ ಕಂಗೆಟ್ಟಿರುವ ಕೃಷಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು, ಅನುದಾನ ನೀಡಬೇಕು. ರಾಜ್ಯವೇ ಸಾಲಮಾಡಿ ರೈತರ ಸಾಲಮನ್ನಾ ಮಾಡುವ ಹುಸಿ ಆಶ್ವಾಸನೆ ನೀಡುವ ಬದಲು ರೈತಾಪಿ ವರ್ಗದ ಆಥರ್ಿಕ ಪುನರ್ರಚನೆ, ಆದಾಯದ ಪ್ರತಿಮೂಲಗಳನ್ನು ನವೀಕರಿಸಬೇಕು. ಮತ್ತು ಒಟ್ಟಾರೆ ಬಜೆಟ್ನಲ್ಲಿ ಹೆಚ್ಚಿನ ಸಾಲಕ್ಕೆ ಮೊರೆ ಹೋಗದೆ ಗರಿಷ್ಟ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಬೇಕು.2015-16ನೇ ಸಾಲಿನ ಎಕಾನಾಮಿಕ್ ಸರ್ವೆಯಲ್ಲಿ ಉಲ್ಲೇಖಿಸಿರುವಂತೆ ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ. ಈ ಸಾಧನೆಯನ್ನು ಕಾಯ್ದುಕೊಂಡು ಹೂಡಿಕೆಗೆ ಮತ್ತಷ್ಟು ಪೂರಕ ವಾತಾವರಣವನ್ನು ನಿಮರ್ಿಸಬೇಕಿದೆ. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ರಫ್ತಿಗೆ ಇಂಬುನೀಡುವ, ಪ್ರಾದೇಶಿಕ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವಂತಹ ಮತ್ತಷ್ಟು ವಿಶೇಷ ಆರ್ಥಿಕವಲಯ(ಎಸ್.ಇ.ಝೆಡ್)ಗಳನ್ನು ನಿರ್ಮಿಸಬೇಕಿದೆ.

ರಾಜಧಾನಿಯಲ್ಲೇ 24 ಘಂಟೆ ವಿದ್ಯುತ್ ನೀಡುವುದು ಅಸಾಧ್ಯವಾಗಿದೆ. ಇನ್ನು ಇಡೀ ರಾಜ್ಯಕ್ಕೆ 18 ಘಂಟೆ ವಿದ್ಯುತ್ ಒದಗಿಸುವುದು ಆಗದ ಮಾತು. ಅದಕ್ಕೆಂದೇ ರಾಜ್ಯ ಸರಕಾರ ದೂರಗಾಮಿಯಾಗಿ ಯೋಚಿಸಿ ತ್ವರಿತವಾದ ನಿರ್ಣಯವೊಂದನ್ನು ಈ ಬಜೆಟ್ನಲ್ಲಿ ತೆಗೆದುಕೊಳ್ಳಬೇಕಿದೆ. ಅನೇಕ ವರ್ಷಗಳಿಂದಲೂ ಪುನರುತ್ಪಾದಿಸಬಹುದಾದ ಇಂಧನದ ಬಳಕೆಯಲ್ಲಿ ರಾಜ್ಯ ನಿರೀಕ್ಷಿತ ಮಟ್ಟದ ಯಶಸ್ಸನ್ನು ಸಾಧಿಸಿಲ್ಲ. ಸೌರ, ವಾಯು, ಸಮುದ್ರದ ಅಲೆಯಂತಹ ಕ್ರಿಯಾತ್ಮಕ ಇಂಧನಗಳನ್ನು ಉತ್ಪಾದಿಸುವತ್ತ ಒತ್ತು ನೀಡಬೇಕು. ರಾಜ್ಯದ ಸೌರಶಕ್ತಿಯ ಸದ್ಭಳಕೆಯಾದರೆ ಪ್ರತೀ ಮನೆಯಲ್ಲಿಯೂ ತಮ್ಮ ಮನೆಗೆ ಬೇಕಾದಷ್ಟು ವಿದ್ಯುತ್ ಉತ್ಪಾದಿಸಲು, ಮನೆಯಲ್ಲಿ ಬೆಳಕು ಮೂಡಿಸಲು ಯಾವುದೇ ಸಮಸ್ಯೆಯಾಗದು. ಪ್ರತೀ ಸರಕಾರಿ ಕಟ್ಟಡ, ಕಾಲುವೆಗಳ ಮೇಲೆ, ಸೇತುವೆಗಳ ಮೇಲೆ ಸೋಲಾರ್ ಪ್ಯಾನಲ್ಗಳನ್ನು ನಿಮರ್ಿಸಲು ಸರಕಾರ ಅಗತ್ಯವಾದ ನೆರವನ್ನು ಬಜೆಟ್ನಲ್ಲಿ ಒದಗಿಸಬೇಕು.

ಇನ್ನು ಈಗಿನ ಪರಿಸ್ಥಿತಿಯಲ್ಲಿ ಇರುವ 'ಭಾಗ್ಯ'ವ ನೆನೆದು ಹೊಸ 'ಭಾಗ್ಯ'ಗಳತ್ತ ಚಿತ್ತ ಹರಿಸದಿದ್ದರೆ ಉತ್ತಮ. ಅಂದರೆ ಈಗಾಗಲೇ ಜಾರಿಯಲ್ಲಿರುವ ಅನೇಕ ಭಾಗ್ಯಗಳ ತೊಡಕುಗಳನ್ನು ಸರಿಪಡಿಸಿ, ಅಗತ್ಯ ಆಥರ್ಿಕ ನೆರವನ್ನು ಒದಗಿಸಬೇಕು. ಅದನ್ನು ಬಿಟ್ಟು ಕುಂಠಿತ ಪ್ರಗತಿಯಲ್ಲಿರುವ ಸರಕಾರ ಹೊಸ ಯೋಜನೆಗಳತ್ತ ಮುಖ ಮಾಡಿದರೆ, ಮುಂಬರುವ ಚುನಾವಣೆಗೆ ಅಣಿಯಾಗಲು ಜನಪ್ರಿಯ ಯೋಜನೆಗಳತ್ತ ಮುಖ ಮಾಡಿದರೆ ರಾಜ್ಯದ ಆಥರ್ಿಕ ಪರಿಸ್ಥಿತಿ ದಿಕ್ಕುತಪ್ಪುವ ಅಪಾಯವೇ ಹೆಚ್ಚಾಗಲಿದೆ. ಹಾಗಾಗಿ ಇಷ್ಟು ವರ್ಷಗಳ ಸರಕಾರದ ಸಾಧನೆಯನ್ನು ಒರೆಗೆ ಹಚ್ಚಿ ನೋಡಿ, ರಾಜ್ಯದ ಆಥರ್ಿಕತೆಯನ್ನು ಸಮಗ್ರೀಕರಿಸುವ ಅನಿವಾರ್ಯತೆ ಈ ಬಜೆಟ್ ಮುಂದಿದೆ. ಇದು ಸಾಧ್ಯವಾದರೆ ಮುಂದಿನ ಎರಡೂ(ಒಂದೂವರೆ!) ಬಜೆಟ್ಗಳು ಸಹಜವಾಗಿಯೇ ಜನಪ್ರಿಯವಾಗಬಹುದು.


---

No comments:

Post a Comment