Tuesday, November 15, 2016

ಸಮಾನ ನಾಗರಿಕ ಸಂಹಿತೆ ಯಾಕೆ ಬೇಕು?


ನಾವು ಶಾಲಾ ದಿನಗಳಲ್ಲಿ ಸಮವಸ್ತ್ರ ಧರಿಸುವುದನ್ನು ವಿರೊಧಿಸುತ್ತಿರಲಿಲ್ಲವೆ? ಆದರೆ ಸಮಾನತೆ ಎಂದರೇನೆಂಬುದನ್ನು ಸರಳವಾಗಿ ಅರ್ಥ ಮಾಡಿಸಿದ್ದೇ ವಸ್ತ್ರಸಂಹಿತೆ. ಅದೇ ರೀತಿ ಸಮಾನ ನಾಗರಿಕ ಸಂಹಿತೆ ಕೂಡ. ಅದನ್ನು ಈಗ ವಿರೋಧಿಸುತ್ತಿರುವವರು ಅಂದು ಸಮವಸ್ತ್ರವನ್ನು ವಿರೊಧಿಸುತ್ತಿದ್ದ ಎಳೆ ಆಲೋಚನೆಯ ಮಕ್ಕಳಿದ್ದಂತೆ. ಅದರ ಫಲ ದೊರೆಯುವುದು ಭವಿಷ್ಯದ ಕಾಣ್ಕೆಯಲ್ಲಿ ರೂಪುಗೊಂಡ ವರ್ತಮಾನದಲ್ಲಿ. ಅದರ ಮೌಲ್ಯ ಅರಿತವರು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕರು, ಅದರ ಆಂತರ್ಯ ತಿಳಿದ ಜವಬ್ದಾರಿಯುತ ಪೋಷಕರಿದ್ದಂತೆ.

ಬಾಲ್ಯದಲ್ಲಿ ಅರಿವಾಗದ ಅಸಮಾನತೆ ಬೆಳೆಯುತ್ತಾ ಗಟ್ಟಿಗೊಳ್ಳುವುದು ಹೇಗೆ? ಅದಕ್ಕೆ ಎಲ್ಲೊ ಒಂದು ರೀತಿಯಲ್ಲಿ ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ ಎಂಬುದನ್ನು ಮರೆಯಬಾರದು. ಗತದಲ್ಲಿ ಮಾಡಿದ ತಪ್ಪನ್ನೇ ಈಗಲೂ ಪುನರಾವರ್ತಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಪ್ಪು ಹಣದ ಮುಕ್ತಿಗಾಗಿ ಹೇಗೆ ಭಾರತೀಯರೆಲ್ಲ ಒಂದಾಗಿ ಕೈಜೋಡಿಸಿದ್ದೇವೆಯೋ ಅದೇ ರೀತಿ ೭೦ ವರ್ಷಗಳ ನಂತರ ಒದಗಿಬಂದಿರುವ ಸುವರ್ಣ ಅವಕಾಶ, ಸಮಾನ ನಾಗರಿಕ ಸಂಹಿತೆಯನ್ನು ಕೈಯಿಂದ ಕಳೆದುಕೊಳ್ಳಬಾರದು. ಅದನ್ನೂ ನಮ್ಮ ನೆಂಟರ ಸಂಭ್ರಮದ ಮದುವೆಯಂತೆ, ನಮ್ಮ ಗದ್ದೆಗಳಲ್ಲಿ ಜೀವತುಂಬಿ ನೆಡುವ ಬೆಳೆಗಳಂತೆ, ಊರಿಗೆ ಹಾಕುವ ಉತ್ತಮ ಗುಣಮಟ್ಟದ ರಸ್ತೆಯಂತೆ, ಸದೃಢ ದೇಶಕ್ಕೆ ಆರಿಸುವ ಸಮರ್ಥ ಪ್ರಧಾನಿಯಂತೆ, ಉತ್ತಿಷ್ಟ ಭಾರತದ ಭವ್ಯ ಭವಿತ್ಯದಂತೆ ನಾಗರಿಕರೆಲ್ಲರೂ ಸಮಾನವಾಗಿ ಯಶಸ್ವಿಗೊಳಿಸಬೇಕು.

-ಶ್ರೇಯಾಂಕ ಎಸ್ ರಾನಡೆ. 

No comments:

Post a Comment