Tuesday, November 29, 2016

Demonetization is a well calibrated move. ಇದು ರಾತ್ರೋರಾತ್ರಿ ತೆಗೆದುಕೊಂಡ ದುಡುಕಿನ ನಿರ್ಧಾರವಲ್ಲ.

ಇದು ರಾತ್ರೋರಾತ್ರಿ ತೆಗೆದುಕೊಂಡ ದುಡುಕಿನ ನಿರ್ಧಾರವಲ್ಲ.
ಮೇ ೨೦೧೪ರ ಹಿಂದಿನ ಚಿತ್ರಣ:
2011 ಜನಗಣತಿಯ ಪ್ರಕಾರ ಭಾರತದ 58.7% ಕುಟುಂಬಸ್ಥರಿಗೆ ಮಾತ್ರ ಬ್ಯಾಂಕಿಂಗ್ ಸೇವೆಗಳು ಮುಕ್ತವಾಗಿವೆ. 2012 ವಿಶ್ವ ಬ್ಯಾಂಕ್ ಫೈಂಡೆಕ್ಸ್ ಸಮೀಕ್ಷೆಯ ಪ್ರಕಾರ ಭಾರತದ 35% ವಯಸ್ಕರು ಮಾತ್ರ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆಗಸ್ಟ್ 2014 ಹೊತ್ತಿಗೆ ದೇಶದಲ್ಲಿ ಒಟ್ಟಾರೆ 1,15,082 ಬ್ಯಾಂಕ್ ಶಾಖೆಗಳಿದ್ದವು ಮತ್ತು 1,60,055 .ಟಿ.ಎಂ.ಗಳಿದ್ದವು. ಅವುಗಳಲ್ಲಿ 43,962 ಬ್ಯಾಂಕ್ ಶಾಖೆಗಳು ಅಂದರೆ ಕೇವಲ 38.2% ಮತ್ತು 23,334 .ಟಿ.ಎಂ.ಗಳು ಅಂದರೆ ಕೇವಲ 14.58% ಭಾರತದ ಗ್ರಾಮೀಣ ಪ್ರದೇಶದಲ್ಲಿವೆ. ಎಲ್ಲಾ ವ್ಯಾವಹಾರಿಕ ಬ್ಯಾಂಕ್ಗಳಿಂದ ಕೇವಲ 10%ಕ್ಕಿಂತಲೂ ಕಡಿಮೆ ಕ್ರೆಡಿಟ್ ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತದೆ. ಯೋಚಿಸಿ ನೋಡಿ, ದೇಶದ 70% ಜನಸಂಖ್ಯೆ ವಾಸಿಸುತ್ತಿರುವುದು ಹಳ್ಳಿಗಳಲ್ಲಿ ಆದರೆ ಎಲ್ಲಾ ಲಾಭದಾಯಕ ಬ್ಯಾಂಕ್ಗಳ 90%ಗಿಂತಲೂ ಅಧಿಕ ಕ್ರೆಡಿಟ್ ಹೋಗುತ್ತಿರುವುದು ಕೇವಲ 30% ಜನಸಂಖ್ಯೆಗೆ ಅಂದರೆ ನಗರಗಳಿಗೆ ಮಾತ್ರ.! ಮಾರ್ಚ್ 2014 ಭಾರತೀಯ ರಿಸರ್ವ್ ಬ್ಯಾಂಕ್ ದಾಖಲೆಯ ಪ್ರಕಾರ ನಮ್ಮ ದೇಶದ 640,867 ಹಳ್ಳಿಗಳಲ್ಲಿ ಬ್ಯಾಂಕ್ಗಳಿರುವುದು ಕೇವಲ 46,126 ಹಳ್ಳಿಗಳಲ್ಲಿ ಮಾತ್ರ.! ಇದು ಭಾರತದ ಬ್ಯಾಂಕಿಂಗ್ ಇತಿಹಾಸದ ಕಿರುನೋಟ

ಆದರೆ ಯೋಜನೆಗೊಂದು ಸ್ಪಷ್ಟ ಸ್ವರೂಪ, ಚಳುವಳಿಯ ರೂಪನೀಡಿ, ಖುದ್ದು ಮಿಂಚಂಚೆಯ ಮೂಲಕ ಬ್ಯಾಂಕ್ ನೌಕರರನ್ನೂ, ವಿತ್ತೀಯ ಶಿಕ್ಷಣ-ಮಾಹಿತಿಯ ಮೂಲಕ ಅವಕಾಶ ವಂಚಿತ ಕಟ್ಟಕಡೆಯ ಅನಕ್ಷರಸ್ಥರನ್ನೂ ಪ್ರೇರೇಪಿಸಿ, ಮೊದಲ 6ತಿಂಗಳಲ್ಲಿಯೇ ಸಮರೋಪಾದಿಯಲ್ಲಿ 14.14ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗಿಸಿದ ಕೀರ್ತಿ ಪ್ರಧಾನಿಯವರಿಗೇ ಸಲ್ಲಬೇಕು. ಮೇ ೨೦೧೪ರೊಂದೀಚೆಗೆ ಪರಿಸ್ಥಿತಿ ಬದಲಾಗತೊಡಗಿದೆ. ಬ್ಯಾಂಕ್ ಗಳ ಕುರಿತಾಗಿ ಜನರ ಹಾಗೂ ಜನರ ಕುರಿತಾಗಿ ಬ್ಯಾಂಕ್ ಗಳ ಮನೋಭಾವ ಬದಲಾಗತೊಡಗಿದೆ. ಇದರ ಹಿಂದೆ ಇರುವುದು ಜನ್ ಧನ್ ಯೋಜನೆ ಹಾಗೂ ಸರಕಾರದ ದೂರದೃಷ್ಟಿಯ ಯೋಜನೆಗಳು. ನೋಟು ರದ್ಧಾದಾಗ ಗ್ರಾಮೀಣ ಭಾಗದ ಜನರೂ ಬ್ಯಾಂಕಿನತ್ತ ಮುಖ ಮಾಡುತ್ತಿರುವುದಕ್ಕೆ, ವಿತ್ತ ನಿಯಮಗಳನ್ನು ಅರಿಯುತ್ತಿರುವುದಕ್ಕೆ ಹಾಗೂ ತಮ್ಮ ಕಷ್ಟವನ್ನು ಬದಿಗೊತ್ತಿ ದೇಶದ ಒಳಿತಿಗಾಗಿ ಓಡಾಡುತ್ತಿರುವುದೇ ನೋಟಿನ ನಿಷೇಧ ಅತ್ಯಂತ ಸಮರ್ಪಕ ಯೋಚನೆಯಿಂದ ರೂಪುಗೊಂಡ ಸರಿಯಾದ ಸಾಂಸ್ಥಿಕ ತಯಾರಿಯ ಫಲ ಎಂಬುದನ್ನು ಸಾರಿ ಹೇಳುತ್ತಿದೆ.

ಯಾವುದೇ ಯುಗಪ್ರವರ್ತಕ ಕ್ರಾಂತಿಕಾರಿ ಬದಲಾವಣೆ ಒಂದೇ ದಿನದಲ್ಲಿ ಆಗುವುದಿಲ್ಲ. ಅದರ ಹಿಂದಿನ ನಿರ್ಧಾರವೂ ಅಷ್ಟೆ. ಸಾಕಷ್ಟು ಪೂರ್ವಸಿದ್ಧತೆ ಹಾಗೂ ಸರಿಯಾದ ಯೋಚನೆಯಿಂದ ಮಾತ್ರ ಪರಿವರ್ತನಾಕಾರಿ ಬದಲಾವಣೆ ತರಲು ಸಾಧ್ಯ. ಇದು ನೋಟಿನ ನಿಷೇಧದ ನಿರ್ಧಾರಕ್ಕೂ ಅನ್ವಯವಾಗುತ್ತದೆ. ದೇಶದ ಅಪ್ರಮಾಣಿಕ ವ್ಯವಸ್ಥೆಯನ್ನು ಅಲುಗಾಡಿಸಿ ಆರ್ಥಿಕತೆ ಹಾಗೂ ಜನತೆಯಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿರುವ ಯೋಜನೆಯ ಯಶಸ್ಸು ನಿರ್ಧರಿತವಾಗುವುದು ಭವಿಷ್ಯದಲ್ಲಿ. ಅದನ್ನು ಸಾಕಾರಗೊಳಿಸುವುದು ಭೂತದಲ್ಲಿ ಕೈಗೊಂಡ ನಿರ್ಣಯಗಳು. ನೋಟಿನ ಮೌಲ್ಯ ಬರುವುದು ಸರಕಾರ ರಿಸರ್ವ್ ಬ್ಯಾಂಕಿನ ಗವರ್ನರ್ ಮೂಲಕ ನೀಡುವ ಭರವಸೆಯ ಸಹಿಯಿಂದ. ಸಹಿಯಿರದ ನೋಟಿನ ಮೇಲೆ ಲಕ್ಷದ ಮೊತ್ತ ಬರೆದರೂ ಅದು ಕೇವಲ ರದ್ದಿಯ ಕಾಗದವಾಗಿ ಉಳಿಯುತ್ತದೆ ಅಷ್ಟೆ. ಅದೇ ಕಾರಣದಿಂದ ನೋಟಿಗೆ ಬೆಲೆಯಿಲ್ಲ ಎನ್ನುವುದು. ಆಧುನಿಕ ಭಾರತದಲ್ಲಿ ಓಟಿನ ಬೆಲೆ ನೋಟಿನಿಂದ ಬರುವಂತಾಗಿರುವುದು ಮಾತ್ರ ವಿಪರ್ಯಾಸ.

ನೋಟು ಯಾರಿಗೆ ತಾನೆ ಬೇಡ? ಅದನ್ನು ಏಕಾಏಕಿ ನಿಷೇಧಿಸುವುದೆಂದರೆ ಅದೇನು ಹುಡುಗಾಟಿಕೆಯಲ್ಲ. ನಿರ್ಧಾರ ಭಾರತದ ಆರ್ಥಿಕ ಇತಿಹಾಸದಲ್ಲಿಯೇ ಮಹತ್ವದ ಮೈಲಿಗಲ್ಲೇ ಹೊರತು ಅಪೂರ್ವ ಆರ್ಥಿಕ ಚಿಂತಕರ ಮುಖವಾಡದಲ್ಲಿ ನಿರ್ಧಾರಗಳನ್ನೇ ತೆಗೆದುಕೊಳ್ಳದ ಸರಕಾರದ ಆಡಳಿತದ ಕಥೆಯಲ್ಲ. ಷೇರು ಮಾರುಕಟ್ಟೆಯ ಏರಿಳಿತಕ್ಕೆ ಒಳಗಾಗಿ ರೂಪಾಯಿ ಅಪಮೌಲ್ಯಗೊಳ್ಳುವಂತಹ ಬೆಳವಣಿಗೆಯೂ ಅಲ್ಲ. ಬ್ಯಾಂಕ್ ಬಾಗಿಲಿನತ್ತ ಜನರನ್ನು ಕೊಂಡೊಯ್ದು ಖಾತೆ ತೆರೆಸಿ ಅದರ ಲಾಭದ ಆನ್ವಯಿಕತೆಯನ್ನು ಜನರಿಗೆ ತಲುಪಿಸಿ, ಜನಸ್ನೇಹಿ ಎಂದು ಹೆಸರಿಗಷ್ಟೇ ಸೀಮಿತವಾಗಿದ್ದ ಬ್ಯಾಂಕ್ ಗಳನ್ನು ಆರಾಮದಾಯಕ ಆಯಕಟ್ಟಿನಿಂದ ಜನರತ್ತ ತೆರಳುವಂತೆ ಮಾಡಿ, ಜನಸಾಮಾನ್ಯರಿಗೂ ವಿತ್ತ ಶಿಕ್ಷಣದ ಮೂಲಕ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು. ತದನಂತರ ಈಗ ಪ್ರತಿಯೊಬ್ಬರನ್ನು ನೋಟುರಹಿತ ವ್ಯವಹಾರದತ್ತ ಸಜ್ಜುಗೊಳಿಸುತ್ತಿರುವುದು ಎಲ್ಲವೂ ನೋಟಿನ ರೂಪದ ಕಾಳಧನವನ್ನು ಹೊಡೆದೋಡಿಸುವ ಸರಕಾರದ ಕಾರ್ಯತಂತ್ರ.

ಸ್ವಾತಂತ್ರ್ಯಾ ನಂತರ ಪ್ರತೀ ಭಾರತೀಯ ಬ್ಯಾಂಕ್ ಖಾತೆ ತೆರೆಯುವಂತಾಗಲು ೭೦ ವರ್ಷಗಳ ಬಳಿಕ ಬಂದ ಸರಕಾರದ ಜನಧನ್ ಯೋಜನೆ ಬರಬೇಕಾಯಿತು. ಶೂನ್ಯ ಠೇವಣಿ, ಕನಿಷ್ಟ ಮೊತ್ತದ ಜೀವವಿಮೆ ಹಾಗೂ ಗರಿಷ್ಟ ಪ್ರಯೋಜನವಿರುವ ಯೋಜನೆಯಿಂದ ಸರಕಾರದ ಅನೇಕ ಸಾಮಾಜಿಕ ಸಬಲೀಕರಣ ಕಾರ್ಯದಲ್ಲಿ, ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ಆರ್ಥಿಕ ವರ್ಷದಿಂದ ಜಾರಿಗೆ ತಂದ "ಜಾಮ್ ಟ್ರಿನಿಟಿ" ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆಯನ್ನು ಬೆಸೆಯುವ ಯೋಜನೆ. ಇದರಿಂದ ಹಣದ ಸೋರಿಕೆ, ನಕಲಿ ಫಲಾನುಭವಿಗಳ ಹಾವಳಿ, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗುತ್ತಿದೆ. ಇದನ್ನೇ ಭಾನುವಾರದ ಮನ್ ಕಿ ಬಾತ್ ನಲ್ಲಿ ಪ್ರಧಾನಿಯವರು ವ್ಯಕ್ತಪಡಿಸಿದ ದೂರದೃಷ್ಟಿಯ ಮನಿ ಕಿ ಬಾತ್, ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಮೂಲ.

ಡಿಜಿಟಲ್ ಬ್ಯಾಂಕಿಂಗ್ ಎಂಬುದು ಸದಾ ಸಣ್ಣ ವ್ಯಾಪಾರದಿಂದ ದೊಡ್ಡ ಬಟವಾಡೆಯವರೆಗೂ ನೋಟಿನ ಮೂಲಕವೇ ವ್ಯವಹಾರ ಮಾಡಿಕೊಂಡು ಬರುತ್ತಿರುವ ನಮಗೆ ಹೊಸಪರಿಕಲ್ಪನೆಯಂತೆ ತೋರಬಹುದು. ಆದರೆ ಸ್ವಲ್ಪ ಸಮಯ, ಒಂದಷ್ಟು ತಾಳ್ಮೆ ಹಾಗೂ ಕನಿಷ್ಟ ಕಲಿಕೆಯಿಂದ ಮೊಬೈಲ್ ಮೂಲಕವೇ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರವನ್ನು ಮುಗಿಸಿಬಿಡಬಹುದು. ಇದಕ್ಕಾಗಿ ಬ್ಯಾಂಕ್ ಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಿಲ್ಲ. ಚಿಲ್ಲರೆಗಾಗಿ ಯಾರ ಮುಂದೆಯೂ ಕೈಯೊಡ್ಡುವ ಅಗತ್ಯವಿರುವುದಿಲ್ಲ. ನಮ್ಮೆಲ್ಲ ವ್ಯವಹಾರಗಳ ಪಾರದರ್ಶಕತೆಯ ಜೊತೆ ನಮ್ಮ ಹಣಕಾಸಿನ ಖರ್ಚುವೆಚ್ಚದ ಮೇಲೆ ನಿಗಾ ಇಡಬಹುದು. ಮುಂದುವರೆದ ದೇಶಗಳಲ್ಲಿ ದೈನಂದಿನ ಖರ್ಚುಗಳಿಗೆ ನೋಟಿನ ಬಳಕೆಯೇ ಕಡಿಮೆ. ಖಂಡಿತ ಭಾರತ ಅಷ್ಟು ಮುಂದುವರೆದಿಲ್ಲ. ಮೇಲಾಗಿ ನಗರಗಳಲ್ಲಿ ಅವಕಾಶವಿರುವಂತೆ ಗ್ರಾಮಭಾರತ ಡಿಜಿಟಲೀಕರಣಗೊಂಡಿಲ್ಲ. ಆದರೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಭವಿಷ್ಯವಾಗಲಿದೆ. ದೇಶದ ಪ್ರತೀ ಬ್ಯಾಂಕ್ ಕೂಡ ದಿಶೆಯಲ್ಲಿಯೇ ಹೆಜ್ಜೆ ಇಡುತ್ತಿವೆ. ಡಿಜಿಟಲ್ ಕನಸಿನ ಸಾಕಾರಕ್ಕೆ ಸರಕಾರ ರಿಸರ್ವ್ ಬ್ಯಾಂಕ್ ಮೂಲಕ ಸೂಕ್ತ ನಿಯಮಗಳನ್ನು ರೂಪಿಸುತ್ತಿದೆ

ಇದರ ಸಾಕಾರಕ್ಕಾಗಿಯೇ ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ಪ್ರತೀ ಗ್ರಾಮಕ್ಕೂ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಜೊತೆ ಡಿಜಿಟಲ್ ಬದುಕು, ಡಿಜಿಟಲ್ ಬ್ಯಾಂಕಿಂಗ್ ಕುರಿತೂ ಶಿಕ್ಷಣ ನೀಡುವ ಕಾರ್ಯವನ್ನು ೨೦೧೫ರಿಂದಲೇ ಪ್ರಾರಂಭಿಸಿದೆ. ಮಾಸ್ಟರ್, ವೀಸಾ ಇತ್ಯಾದಿ ವಿದೇಶಿ ಕಾರ್ಡ್ ಗಳನ್ನು ಪ್ರತೀ ಬಾರಿ ಬಳಸಿದಾಗ ಅದರ ಕಮಿಷನ್ ಶುಲ್ಕ ವಿದೇಶಗಳಿಗೆ ಹೋಗುತ್ತಿತ್ತು. ಆದರೆ ಅದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸ್ವದೇಶಿ "ರೂಪೇ" ಕಾರ್ಡ್ ಗಳನ್ನು ಜಾರಿಗೆ ತಂದಿದೆ. ಮೂಲಕ ರೈಲ್ವೆ, ಪೋಸ್ಟ್, ಜನಧನ್ ಖಾತೆಯವರಿಗೆ, ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಾಗೂ ಕೆಲವು ಸ್ವಸಹಾಯ ಬ್ಯಾಂಕ್ ಗಳಲ್ಲಿ ಆಟೊಮೆಟೆಡ್ ಟೆಲ್ಲರ್ ಯಂತ್ರದ(.ಟಿ.ಎಂ. ಡೆಬಿಟ್ ಕಾರ್ಡ್) ಸೌಲಭ್ಯವನ್ನು ಒದಗಿಸಿ ಡಿಜಿಟಲ್ ಬ್ಯಾಂಕಿಂಗ್ ಮಹತ್ವದ ಮೈಲಿಗಲ್ಲಾದ ಕಾರ್ಡ್ ಬ್ಯಾಂಕಿಂಗ್ ವೆಚ್ಚ ತಗ್ಗಿಸಿ ಜನರಿಗೆ ನೋಟುರಹಿತ ವ್ಯವಹಾರವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇವಲ ನೋಟಿನ ಕಾರಣದಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನಿರಾಕರಣೆಯಾಗುವುದಿಲ್ಲ. ಶಾಲಾ ಕಾಲೇಜುಗಳಲ್ಲಿ, ದಿನನಿತ್ಯದ ವ್ಯವಹಾರಗಳಲ್ಲಿ ಯಾವುದೇ ತೋಡಕಾಗುವುದಿಲ್ಲ. ಇವೆಲ್ಲವು ನೋಟಿನ ರದ್ಧತಿಯ ಹಂದಿನ ಪೂರ್ವತಯಾರಿಯಂತೇಕೆ ತೋರುವುದಿಲ್ಲ?

ಕಪ್ಪು ಹಣ ಎಂಬುದೇ ಸುಳ್ಳು ಎಂದು ಸಾರುತ್ತಾ ಅದರ ಹೆಸರನ್ನು ಹೇಳಲೂ ಮುಖ ಕಪ್ಪಾಗಿಸಿಕೊಳ್ಳುತ್ತಿದ್ದ ಜನನಾಯಕರ ನಡುವೆ ಅಧಿಕಾರ ಸ್ವೀಕರಿಸಿದ ತಕ್ಷಣ ಮೊತ್ತ ಮೊದಲಿಗೆ ವಿದೇಶದಲ್ಲಿರುವ ಕಪ್ಪುಹಣದ ಕುರಿತು ತನಿಖೆ ನಡೆಸಲು ಸ್ಪೆಶಲ್ ಇನ್ವೆಸ್ಟಿಗೇಶನ್ ಟೀಮ್(ಎಸ್..ಟಿ.) ರಚಿಸಿದ್ದು ದಕ್ಷ ಸರಕಾರ ಮಾತ್ರ ಮಾಡುವ ಕೆಲಸ. ಮೊದಲ ವರ್ಷದಲ್ಲೇ ಜಿ೨೦ ದೇಶಗಳ ಜೊತೆಗೂಡಿಾ ದೇಶಗಳಲ್ಲಿರುವ ಭಾರತದ ಕಪ್ಪುಹಣದ ಮಾಹಿತಿ ವಿನಿಮಯಕ್ಕೆ ಪ್ರಯತ್ನಿಸಿದ್ದು ಸಣ್ಣ ಸಾಧನೆಯೇನಲ್ಲ. ಮಾರಿಷಸ್ ನಂತರ ಸೈಪ್ರಸ್ ದೇಶದೊಂದಿಗೆ ತೆರಿಗೆ ಅನ್ವಯ ಒಪ್ಪಂದವನ್ನು ಜಾರಿಗೆ ತಂದಿದ್ದು ಕಪ್ಪುಹಣವೆಂಬ ಬೃಹತ್ ಕಣಿವೆಯನ್ನು ಬಗೆಯುವ ಪ್ರಾರಂಭಿಕ ಹೆಜ್ಜೆಗಳು. ಹಾಗೆಯೇ ಕಪ್ಪು ಹಣ ಹೊಂದಿರುವವರು ತಾವೇ ಸ್ವಪ್ರೇರಣೆಯಿಂದ ದಂಡ ಕಟ್ಟಿ ಎಂದು ಕರೆಕೊಟ್ಟು, ೩೦ ಸೆಪ್ಟೆಂಬರ್ ೨೦೧೬ರ ವರೆಗೂ ಗಡುವು ಕೊಟ್ಟಿದ್ದು ಸರಕಾರ ದೆಸೆಯಲ್ಲಿ ಪ್ರಾರಂಭದಿಂದಲೂ ಸಾಗುತ್ತಿತ್ತು ಎಂಬುದಕ್ಕೆ ಸಾಕ್ಷಿ. ಮುಂದಿನ ನಡೆ ಏನಿರಬಹುದು ಎಂಬುದು ಬೃಹತ್ ಉದ್ದಿಮೆದಾರರಿಗೂ, ರಾಜಕೀಯ ಪಕ್ಷಗಳಿಗೂ, ಕಾಳಧನಿಕರಿಗೂ ಸೂಚನೆ ದೊರೆತಿತ್ತು. ಆದರೆ ಯಾರೊಬ್ಬರೂ ೫೦೦, ೧೦೦೦ದ ನೋಟುಗಳನ್ನು ಪರಿಯ ಮನೋವೇಗದಲ್ಲಿ ರದ್ದಾಗಿಸಬಹುದೆಂದು ಊಹಿಸಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಯೋಜನೆ ಘೋಷಿಸುವ ಮುನ್ನ ನಡೆದ ಕ್ಯಾಬಿನೆಟ್ ಸಭೆಯ ತನಕವೂ ಸ್ವತಃ ವಿತ್ತ ಸಚಿವರಿಗೇ ಅದರ ಬಗ್ಗೆ ಮಾಹಿತಿ ಇರಲಿಲ್ಲ ಅಂದರೆ ಇದು ಎಂತಹ ಕಾರ್ಯಯೋಜನೆಯಿರಬೇಕು. ಪಾಕಿಸ್ತಾನದ ಮೇಲೆ ಚಿಕಿತ್ಸಕ ದಾಳಿ ನಡೆದಷ್ಟೇ ಒಪ್ಪವಾಗಿ, ಪ್ರತಿಯೋಚನೆ ಮಾಡುವುದಕ್ಕೂ ಅವಕಾಶವಿಲ್ಲದಂತೆ ನಡೆಸಿದ ದಾಳಿ ೧೯೯೧ರ ನಂತರ ದೇಶದ ಅತೀ ಮಹತ್ವದ ಆರ್ಥಿಕ ಸುಧಾರಣೆ. ಕಳೆದ ೭೦ ವರ್ಷಗಳ ಭಾರತದ ರಾಜಕಾರಣದ ಜಡ್ಡು ವ್ಯವಸ್ಥೆಯನ್ನೇ ಈಗಿನ ಪ್ರಧಾನಿಗಳಿಗೂ ಸಮೀಕರಿಸಿ, ಕೊನೆಗೆ ಇವರೂ ರಾಜಕಾರಣಿಯೇ. ಹಾಗಾಗಿ ಇವರು ಅಂತಹ ನಿರ್ಣಯವನ್ನು ಕೈಗೊಳ್ಳುವುದೇ ಇಲ್ಲ ಎಂದು ನಿರ್ಧರಿಸಿ ನವೆಂಬರ್ ರವರೆಗೂ ಅನೇಕರು ಹಾಗೂ ಈಗ ಭಾರತ್ ಬಂದ್ ಗೆ ಕರೆನೀಡಿರುವ ಪಕ್ಷಾತೀತ, ಧರ್ಮನಿರಪೇಕ್ಷ, ಸಮಾಜವಾದಿ, ಬಹುಜನರು, ಭ್ರಷ್ಟಾಚಾರ ವಿರೋಧಿ ಆಂಡೋಲನವನ್ನೇ ತಮ್ಮ ರಾಜಕೀಯ ಬಂಡವಾಳ ಮಾಡಿಕೊಂಡ ಸಮಸ್ತ ಬಾಂಧವರೂ ಮೈಮರೆತಿದ್ದರು. ಬುದ್ಧಿವಂತರು, ಪ್ರಧಾನಿಯವರ ಸಾಮರ್ಥ್ಯವನ್ನು ಮೊದಲೇ ಊಹಿಸಿದವರು 'ಜಿಯೋ' ಎಂದರು. ಉಳಿದವರು ಈಗ ಎಚ್ಚೆತ್ತು 'ಜಿಯಾ' ಎನ್ನುತ್ತಿದ್ದಾರೆ.

ಯಾವುದೇ ಪೂರ್ವ ತಯಾರಿಯಿಲ್ಲದೆ ನಿರ್ಣಯ ಕೈಗೊಳ್ಳಲಾಗಿದೆ ಎಂಬುವರು ಮೇಲಿನ ಮಾಹಿತಿಯನ್ನು ಓದಿ ತಮ್ಮನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇನ್ನು ಬ್ಯಾಂಕಿಂಗ್ ವ್ಯವಹಾರದಲ್ಲಿ ಆಗುತ್ತಿರುವ ಹೊಸ ನೋಟಿನ ಕೊರತೆ ಹಾಗೂ ವಿತರಣೆ, ಸಿಬ್ಬಂದಿ ಕೊರತೆ ಇತ್ಯಾದಿ ಹೆಚ್ಚಿನ ತೊಡಕುಗಳಿಗೆ ಬ್ಯಾಂಕ್ ಗಳ ನಾನ್ ಪರ್ಫಾಮಿಂಗ್ ಅಸೆಟ್ ರೀತಿಯ ಅನೇಕ ಆಂತರಿಕ, ಆಡಳಿತಾತ್ಮಕ ಸಾಂಸ್ಥಿಕ ತೊಡಕುಗಳೇ ನೇರವಾಗಿ ಕಾರಣವೇ ಹೊರತು ಎಲ್ಲದಕ್ಕೂ ಸರಕಾರವೇ ನೇರವಾಗಿ ಹಾಗೂ ಪೂರ್ಣವಾಗಿ ಹೊಣೆಯಲ್ಲ. ಬ್ಯಾಂಕ್ ನೌಕರರನೇಕರು ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಿದ್ದಾರೆ. ಅದೇ ರೀತಿ ಜನರೊಂದಿಗೆ ಬೇಜವಾಬ್ದಾರಿಯಾಗಿ, ಅಹಂಕಾರದಿಂದ ವರ್ತಿಸುವ ಕೆಲವಾರು ಅಧಿಕಾರಿ, ಸಿಬ್ಬಂದಿಗಳು ಅನೇಕ ಜನರನ್ನು ಹತಾಶೆಗೊಳಿಸಿದ್ದು ಸುಳ್ಳಲ್ಲ. ಅದೇ ಕಾರಣದಿಂದ ಜನರು ಬ್ಯಾಂಕ್ ಗಳತ್ತ ಮುಖ ಮಾಡಲೂ ಹೆದರುತ್ತಿರುವುದು. ಗ್ರಾಮೀಣ ಭಾಗದಲ್ಲಿ ಬ್ಯಾಂಕೇತರ ಆರ್ಥಿಕತೆ ರೂಪುಗೊಳ್ಳುವುದಕ್ಕೆ ಇಂತಹ ವರ್ತನೆಯೂ ಕಾರಣ. ತಪ್ಪು ಮಾಹಿತಿ, ಸುಳ್ಳು ಸುದ್ದಿ ಹಾಗೂ ಬ್ಯಾಂಕಿಗ್ ಸೇವೆಯಿಂದ ವಂಚಿತರಾಗಿ ವಿಚಲಿತರಾಗುವ ಜನರು ತಮ್ಮ ಪ್ರಾಣ ಕಳೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದರೆ ಅದಕ್ಕೆ ಬ್ಯಾಂಕ್ ಗಳ ಕಾರ್ಯನಿರ್ವಹಣೆಯ ರೀತಿ ಕಾರಣ. ಸರಕಾರದ ಸರಿಯಾದ ನಿರ್ಧಾರವಲ್ಲ.

ಬೇನಾಮಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಅಕ್ರಮ ಸಂಪತ್ತು, ಹಣ, ಸೈಟು-ಭೂಮಿಗಳ ಮೇಲೆ ರಿಯಲ್ ಎಸ್ಟೇಟ್ ನವರು ತೊಡಗಿಸಿರುವ ಕಪ್ಪುಹಣದ ಮತ್ತೊಂದು ಮೂಲದ ಜಾಡನ್ನು ಬಗೆಯುವ ಪ್ರಯತ್ನವೂ ನಡೆಯಲಿದೆ. ಆದರೆ ಕ್ರಮ ತತ್ಕಾಲಿಕವಾಗಿ ಯಶಸ್ವಿಯಾಗಿ ತೋರುತ್ತದೆಯಷ್ಟೆ. ಚಿನ್ನ, ವಿದೇಶಿ ಕರೆನ್ಸಿ ವಿನಿಮಯ, ಹವಾಲ, ಪಾರ್ಟಿಸಿಪೇಟರಿ ನೋಟ್ಸ್, ವಿದೇಶಗಳಲ್ಲಿ ಹೂಡಿರುವ ಸಂಪತ್ತು, ಕಾಳಧನ ಹಾಗೂ ಇನ್ನಿತರ ಮೂಲಗಳಿಂದ ಕಾಳಧನದ ಚಟುವಟಿಕೆಗಳು ಮುಂದುವರೆಯಲಿದೆ. ನೋಟಿನ ರದ್ದತಿಯ ನಿರ್ಧಾರ ನಿರ್ಣಾಯಕವೂ ಅಲ್ಲ. ಅಂತಿಮವೂ ಅಲ್ಲ. ಯೋಜನೆಯಿಂದ ಕಪ್ಪುಹಣ ದೇಶದಿಂದ ಸರ್ವಸಮಗ್ರವಾಗಿ ತೊಲಗುವುದಿಲ್ಲ. ಅದಕ್ಕಾಗಿ ಸರಕಾರ ಅನೇಕ ಸಾಂಸ್ಥಿಕ ಸುಧಾರಣೆಗಳನ್ನು ಸಮಯದಿಂದ ಸಮಯಕ್ಕೆ ಸರಿಯಾಗಿ ಜಾರಿಗೊಳಿಸದ ಹೊರತು ಕಪ್ಪು ಹಣ ಮತ್ತೊಂದು ಸ್ವರೂಪದಲ್ಲಿ ತನ್ನ ಕಬಂಧಬಾಹುವನ್ನು ವಿಸ್ತರಿಸಿ ಪರ್ಯಾಯ ಆರ್ಥಿಕತೆಯನ್ನು ಮುಂದುವರೆಸಲಿದೆ. ಆದರೆ ಇರುವ ಸಾಧ್ಯತೆಯಲ್ಲಿಯೇ ಸುಧಾರಣೆ ತರುವುದು, ಮಾಡಿದ ಉತ್ತಮ ಕಾರ್ಯಕ್ಕೆ ಅಡ್ಡಗಾಲು ಹಾಕುವುದಕ್ಕಿಂತ ಲಕ್ಷ ಪಾಲು ಉತ್ತಮ. ಹೀಗೆ ತನು, ಮನ, 'ಧನ' ತ್ರಿಕರಣಗಳ ಶುದ್ಧಿಯ ಮುಖೇನ ದೇಶದೊಳಗಿನ ಕಾಳಧನದ ಸ್ವಚ್ಛತೆ ಸಾಧ್ಯವಾಗಲಿದೆ. ಸೂಚನೆಯ ಜಾರಿಯನ್ನು 'ಧನಾ'ತ್ಮಕವಾಗಿ ಗಮನಿಸಿದಾಗ 'ಸ್ವಚ್ಛ ಭಾರತ್' ಮತ್ತೊಂದು ಆಯಾಮವನ್ನು ಪಡೆದು ನಿಂತಿರುವಂತೆ ಕಾಣುತ್ತದೆ

-ಶ್ರೇಯಾಂಕ ಎಸ್ ರಾನಡೆ.


No comments:

Post a Comment